More

    ಹಸಿದವರಿಗೆ ಅನ್ನ ನೀಡಿದ ನರಸಿಂಹರಾಜಪುರ

    ಎನ್.ಆರ್.ಪುರ: ಹಸಿದು ಬಂದವರಿಗೆ ಎಡೆಯನ್ನು ಕೊಟ್ಟ ಊರು ನಮ್ಮ ನರಸಿಂಹರಾಜಪುರ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.

    ಗುರುವಾರ ದೀಪ್ತಿ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1915ರಲ್ಲಿ ಯಡೇಹಳ್ಳಿಗೆ ಮೈಸೂರು ಮಹಾರಾಜ ನರಸಿಂಹರಾಜದತ್ತ ಒಡೆಯರ್ ಆಗಮಿಸಿದ ಸವಿನೆನಪಿಗೆ ಯಡೇಹಳ್ಳಿಯನ್ನು ನರಸಿಂಹರಾಜಪುರ ಎಂದು ನಾಮಕರಣ ಮಾಡಲಾಯಿತು. ಈ ಊರಿನಲ್ಲಿ ಎಲ್ಲರೂ ಸಹೋದರರಂತೆ ಸಹಬಾಳ್ವೆ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

    ಪಾಲಕರು ತಮ್ಮ ಮಕ್ಕಳನ್ನು ಕುಟುಂಬದ ಹಿರಿಯರೊಂದಿಗೆ ಬೆರೆಯಲು ಬಿಡಬೇಕು. ಗ್ರಾಮೀಣ ಸಂಪ್ರದಾಯ, ಊರು, ಇತಿಹಾಸ ಪುರುಷರ ಬಗ್ಗೆ ಮಾಹಿತಿ ನೀಡಬೇಕು. ಯಡೇಹಳ್ಳಿ ಉತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸಬೇಕು ಎಂದು ಹೇಳಿದರು.

    ಜಿಪಂ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಎನ್.ಆರ್.ಪುರದಲ್ಲಿ 25 ವರ್ಷಗಳ ಹಿಂದೆ ಕೆಳದಿ ವಶಂಸ್ಥರು ಆಳ್ವಿಕೆ ನಡೆಸುತ್ತಿದ್ದರು. ಕೆಳದಿ ವಂಶಸ್ಥ ಸೋಮಶೇಖರ ನಾಯ್ಕನ ಮಡದಿ ಚೆನ್ನಮ್ಮಾಜಿ ಈ ಪಟ್ಟಣವನ್ನು ನಿರ್ಮಾಣ ಮಾಡಿದ್ದಳು. ಈರಮ್ಮಾಜಿ ಕೂಡ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದರು. ಆದ್ದರಿಂದ ಇಂದಿಗೂ ಈರಮ್ಮಾಜಿ ಕೆರೆ ಎಂದು ಊರಿನ ಕೆರೆಯನ್ನು ಕರೆಯಲಾಗುತ್ತದೆ. ಚೆನ್ನಮ್ಮಾಜಿ ಹಾಗೂ ವೀರಮ್ಮಾಜಿ ಎಂಬ ಎರಡು ಕೆರೆಗಳನ್ನು ನಿರ್ವಿುಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಅವರು ನೆನಪಿಸಿಕೊಂಡರು.

    ಪಪಂ ಸದಸ್ಯ ಪ್ರಶಾಂತ ಶೆಟ್ಟಿ ಮಾತನಾಡಿ, ಜಿಲ್ಲಾ ಉತ್ಸವಕ್ಕೆ ಪೂರಕವಾಗಿ ತಾಲೂಕು ಉತ್ಸವ ನಡೆಯುತ್ತಿದೆ. ಎಡೇಹಳ್ಳಿ ಉತ್ಸವದ ಮೂಲಕ ತಾಲೂಕಿನ ವೈಭವ ಮತ್ತೆ ಮರುಕಳಿಸಬೇಕಾಗಿದೆ. ಮುಂದಿನ ವರ್ಷದ ಉತ್ಸವದಲ್ಲಿ ತಾಲೂಕಿನ ಇತಿಹಾಸವುಳ್ಳ ಕಿರುಹೊತ್ತಗೆ ಬಿಡುಗಡೆ ಮಾಡಬೇಕು. ಇದು ಊರಿನ ಜನತೆಯ ಉತ್ಸವವಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts