More

  ಬಿಜೆಪಿಯಿಂದ ಸರ್ವಾಧಿಕಾರಿ ಧೋರಣೆ

  ಎನ್.ಆರ್.ಪುರ: ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಜಯಪ್ರಕಾಶ್ ಹೆಗ್ಡೆ. ಇಂತಹ ಉತ್ತಮ ವ್ಯಕ್ತಿಯನ್ನು ಸಂಸದರಾಗಿ ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇದರಿಂದ ಪ್ರತಿಯಬ್ಬ ಮತದಾರನ ಗೌರವ ಹೆಚ್ಚಾಗಲಿದೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
  ಗಾಂಧಿಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಮಾಡಿದ್ದು ರಾಜಕೀಯ ಲಾಭಕ್ಕಾಗಿ. ಅಪೂರ್ಣಗೊಂಡ ದೇಗುಲ ಉದ್ಘಾಟನೆಗೆ ಬದರೀ ಶಂಕರಪೀಠದ ಶ್ರೀಗಳು ವಿರೋಧಿಸಿದ್ದರು. ಇದು ಬಿಜೆಪಿಯ ಸರ್ವಾಧಿಕಾರಿ ಧೋರಣೆಯಾಗಿದೆ. ಈ ದೇಶದ ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಮೋದಿ ಕೊಡುಗೆ ಏನು ಎಂಬುವುದನ್ನು ಬಿಜೆಪಿಯವರು ಉತ್ತರಿಸಬೇಕು ಎಂದರು.
  ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆದರೆ ಆರ್ಥಿಕ ಚಿಂತಕ ಸಿದ್ದರಾಮಯ್ಯ ರಾಜ್ಯದಲ್ಲಿ ಸಮತೋಲ ಕಾಪಾಡಿದ್ದಾರೆ. ಇದೂವರೆಗೂ ನಮ್ಮ ರಾಜ್ಯ ದಿವಾಳಿಯಾಗಲಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ 1.87 ಲಕ್ಷ ರೂ. ಹಣ ನೀಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
  ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಈ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಯಾವುದಕ್ಕೂ ಸ್ಪಂದಿಸಲಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರವನ್ನೇ ಮರೆತಬಿಟ್ಟರು. ಈ ಬಾರಿ ಚುನಾವಣೆ ಎದುರಿಸಲು ಧೈರ್ಯವಿಲ್ಲದೆ ಕ್ಷೇತ್ರದಿಂದ ಲಾಯನಗೊಂಡಿದ್ದಾರೆ. ಕಸ್ತೂರಿ ರಂಗನ್ ವರದಿ, ಹುಲಿಯೋಜನೆ, ಒತ್ತುವರಿ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
  ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ , ಕಡಹಿನಬೈಲು ಗ್ರಾಪಂ ಘಟಕದ ಕಾಂಗ್ರೆಸ್ ಅಧ್ಯಕ್ಷ ಭೀಮನರಿ ಪ್ರಶಾಂತ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಎಲ್ದೋಸ್, ಎಪಿಎಂಸಿ ಉಪಾಧ್ಯಕ್ಷ ಎಸ್.ಡಿ.ರಾಜೇಂದ್ರ, ಕಾಂಗ್ರೆಸ್ ಉಸ್ತುವಾರಿ ಮಾಳೂರುದಿಣ್ಣೆ ರಮೇಶ್, ಎಂ.ಮಹೇಶ್, ಗಾಂಧಿಗ್ರಾಮ ನಾಗರಾಜು, ರವಿಂದ್ರ, ಆಲಂದೂರು ಕೆಂಪಣ್ಣ, ಚೇತನ, ನಂದೀಶ, ಸುಲೇಮಾನ್, ಜೇಮ್ಸ್,ಅಬ್ದುಲ್ ರೆಹಮಾನ್, ಎ.ಬಿ.ರಾಮಚಂದ್ರ, ಜನಾರ್ಧನ, ಡಿ.ಜಿ.ಜಗದೀಶ್ ಮತ್ತಿತರರು ಇದ್ದರು.

  See also  ಚಿಕ್ಕಬಳ್ಳಾಪುರದ 'ಆದಿಯೋಗಿ' ಪ್ರತಿಮೆ ಇಂದು ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಅನಾವರಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts