More

    ಮೀನು ತಿಂದ ಬೆನ್ನಲ್ಲೇ ನೋವು: ಆಪರೇಷನ್​ ವೇಳೆ ರೋಗಿಯ ಹೊಟ್ಟೆ ಬಗೆದ ವೈದ್ಯರಿಗೆ ಕಾದಿತ್ತು​ ಶಾಕ್​!

    ಬೀಜಿಂಗ್​: ಸಮುದ್ರ ಆಹಾರ ಇಷ್ಟಪಡುವ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು. ಮೀನು ಮಾಂಸಾಹಾರ ಸೇವಿಸಿದ ವ್ಯಕ್ತಿಯೊಬ್ಬನ ಲಿವರ್,​ ಪ್ಯಾರಾಸೈಟ್​ (ಪರಾವಲಂಬಿ ಹುಳುಗಳು) ಗಳಿಂದ ಗಂಭೀರ ಸೋಂಕಿಗೆ ಒಳಗಾಗಿ ಆತನ ಅರ್ಧ ಲಿವರ್​ ಅನ್ನೇ ತೆಗೆದುಹಾಕಿರುವ ಘಟನೆ ಚೀನಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ನೈರುತ್ಯ ಚೀನಾದ ಸಿಚುವಾನ್​ ಪ್ರಾಂತ್ಯದ ವಲಸೆ ಕಾರ್ಮಿಕ ಮಿಸ್ಟರ್​ ಕ್ಸಿ (55), ಕಳೆದ ಫೆಬ್ರವರಿಯಲ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕ್ಸಿ ಹೊಟ್ಟೆಯಲ್ಲಿ ಸಣ್ಣದಾದ ನೋವು ಕಾಣಿಸಿಕೊಳ್ಳಲು ಹಾಗೂ ಬೇದಿಯಾಗಲು ಆರಂಭಿಸಿತ್ತು. ಆದರೂ ಇದೆಲ್ಲಾ ಸಾಮಾನ್ಯ ಎಂದು ಕ್ಸಿ ಆರಂಭದಲ್ಲಿ ನಿರ್ಲಕ್ಷಿಸಿದ್ದರು. ಆದರೆ, ಜೂನ್​ ತಿಂಗಳಲ್ಲಿ ಮೂರು ದಿನಗಳವರೆಗೆ ಗಂಭೀರವಾದ ಜ್ವರದಿಂದ ಬಳಲಿದ್ದರು.

    ಇದನ್ನೂ ಓದಿ: ಕರೊನಾಗೆ ದೊರೆಗಳು, ಮಂತ್ರಿ, ನಾಯಕರು ಬಲಿಯಾಗಲಿದ್ದಾರೆ: ಕೋಡಿ ಮಠ ಶ್ರೀ ಭವಿಷ್ಯ

    ಇದರ ಬೆನ್ನಲ್ಲೇ ಕ್ಸಿ ತಾವು ಕೆಲಸ ಮಾಡುವ ಪೂರ್ವ ಚೀನಾದ ಜೆಜಿಯಾಂಗ್​ ಪ್ರಾಂತ್ಯದ ಹ್ಯಾಂಗ್​ಜೌ ನಗರದಲ್ಲಿನ ಫಸ್ಟ್​ ಪೀಪಲ್ಸ್​ ಹಾಸ್ಪಿಟಲ್​ಗೆ ದಾಖಲಾಗಿದ್ದರು. ತಕ್ಷಣ ಕ್ಸಿ ಸಿಟಿ ಸ್ಕ್ಯಾನ್​ ನಡೆಸಿದ ವೈದ್ಯರು ಎಕ್ಸ್​ರೇ ವರದಿಯನ್ನು ನೋಡಿ ಒಂದು ಕ್ಷಣ ಗಾಬರಿಯಾಗಿದ್ದಾರೆ. ಕ್ಸಿ ಲಿವರ್​ನ ಎಡಭಾಗದಲ್ಲಿ 7.5 ಇಂಚು ಉದ್ದ, 7 ಇಂಚು ಅಗಲ ಮತ್ತು 4.7 ಇಂಚು ಆಳದ ದಪ್ಪ ಗಡ್ಡೆಯನ್ನು ಗಮನಿಸಿದ್ದರು. ಆರಂಭದಲ್ಲಿ ದ್ರವವನ್ನು ಹರಿಸಿ ಗಡ್ಡೆಯ ಗಾತ್ರವನ್ನು ಸಣ್ಣದಾಗಿಸಲು ವೈದ್ಯರು ಪ್ರಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಇದರಿಂದ ಗಂಭೀರ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದರಿತು ರೋಗಿಯ ಅರ್ಧ ಲಿವರ್​ ಕತ್ತರಿಸುವ ನಿರ್ಧಾರಕ್ಕೆ ವೈದ್ಯರು ಬಂದರು.

    ಅದರಂತೆ ಆಪರೇಷನ್​ ನಡೆಸಿದ ವೈದ್ಯರು ಲಿವರ್​ನಲ್ಲಿ ಕೀವು ತುಂಬಿದ ಉಂಡೆಯನ್ನು ನೋಡಿದ್ದಾರೆ. ಅದರಲ್ಲಿ ಲೈಟ್​ ಬಲ್ಬ್​ ರೀತಿಯ ಹುಳಗಳ ಮೊಟ್ಟೆಗಳನ್ನು ಕಂಡು ವೈದ್ಯರೇ ಬೆರಗಾಗಿದ್ದಾರೆ. ಪ್ಯಾರಾಸೈಟ್​ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗ ಕ್ಲೊನೊರ್ಚಿಯಾಸಿಸ್ ಲಿವರ್​ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದು ವೈದ್ಯರಿಗೆ ಆವಾಗ ಮನವರಿಕೆಯಾಗುತ್ತದೆ.

    ಪ್ಯಾರಾಸೈಟ್​ಗಳು ಮಾನವನ ದೇಹದಲ್ಲೇ ಉತ್ಪತಿಯಾಗುವುದಿಲ್ಲ. ಬದಲಾಗಿ ಅರ್ಧ ಬೇಯಿಸಿದ ಮೀನಿನ ಮಾಂಸವನ್ನು ಸೇವಿಸಿದಾಗ ದೇಹ ಸೇರಿರಬಹುದೆಂದು ವೈದ್ಯರು ನಂಬಿದ್ದರು. ಆದರೆ, ರೋಗಿ ಕ್ಷಿ ಹೇಳುವ ಪ್ರಕಾರ ತವರು ಸಿಚುವಾನ್​ನಲ್ಲಿರುವ ಮನೆಗೆ ಭೇಟಿ ನೀಡಿದಾಗ ಮೀನು ಆಹಾರ ಸೇವಿಸಿದ್ದೇ. ಆದರೆ, ಚೆನ್ನಾಗಿ ಬೇಯಿಸಲಾಗಿತ್ತು. ನೀವು ಹೇಳಿದ ಹಾಗೇ ಅರ್ಧ ಬೇಯಿಸಿರಲಿಲ್ಲ ಎಂದು ಕ್ಸಿ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

    ಅಂದಹಾಗೆ, ಏಷ್ಯಾ ಮತ್ತು ರಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಪರಾವಲಂಬಿ ಹುಳುಗಳು, ಮೀನುಗಳನ್ನು ತಿನ್ನುವ ಮಾನವನು ಸೇರಿದಂತೆ ಸಸ್ತನಿಗಳಿಗೆ ಸೋಂಕು ತರುತ್ತದೆ ಎಂಬುದು ವೈದ್ಯರ ಮಾತಾಗಿದೆ. ಅಲ್ಲದೆ, ಪ್ಯಾರಾಸೈಟ್​ಗಳು ಒಂದು ಬಾರಿಗೆ ಸುಮಾರು 1400 ದಿಂದ 2000 ವರೆಗೆ ಮೊಟ್ಟೆಗಳನ್ನು ಇಡುತ್ತವೆಯಂತೆ. ಇವು ಸುಮಾರು 20 ರಿಂದ 30 ವರ್ಷದವರೆಗೂ ಇರುತ್ತವೆ, ಆದರೆ, ಇಂತಹ ಸೋಂಕುಗಳು ಇತ್ತೀಚಿನ ದಿನಗಳಲ್ಲಿ ತುಂಬಾ ವಿರಳ ಎಂದು ವೈದ್ಯರು ಹೇಳಿದ್ದಾರೆ.

    ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಮಿಸ್ಟರ್​ ಕ್ಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಭಾರತ ಮೂಲದ ಸಿಡಿಸಿ ಅಧಿಕಾರಿಯ ಅಪ್ರತಿಮ ಜನಸೇವೆಗೆ ಚಾಕೋಲೇಟ್ ಕಂಪನಿ ಹೇಗೆ ಕೃತಜ್ಞತೆ ಸಲ್ಲಿಸಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts