More

    ಕರೊನಾ ಹುಟ್ಟಿನ ಬಗ್ಗೆ ಸ್ಪೋಟಕ ವರದಿ ಬಹಿರಂಗ: ಚೀನಾದ ಯುನಾನ್​ ಗುಹೆಯಲ್ಲಿವೆ ವೈರಸ್​ ನಂಟು!

    ವುಹಾನ್​: ಕಳೆದ ವರ್ಷ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ ನಗರದಲ್ಲಿ ಸ್ಪೋಟಗೊಂಡು ಮೃತ್ಯುಕೂಪವನ್ನು ನಿರ್ಮಿಸಿ ಜಾಗತಿಕವಾಗಿ ಎಲ್ಲರನ್ನೂ ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್​ ಹುಟ್ಟಿನ ಬಗ್ಗೆ ಸಾಕಷ್ಟು ಸಂಶಯಗಳು ಸುಳಿದಾಡ ತೊಡಗಿವೆ. ಕರೊನಾ ಹುಟ್ಟಿಗೆ ವುಹಾನ್​ನಗರದಲ್ಲಿನ ಜೀವಂತ ಪ್ರಾಣಿ ಮಾರುಕಟ್ಟೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಅದರ ಹಿಂದೆ ಬೇರೇನೋ ಇದೆ ಎಂದ ಸಂಶಯವು ಇದೆ. ಇದೊಂದು ಜೈವಿಕ ಅಸ್ತ್ರ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿರುವುದರ ನಡುವೆಯೇ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಕರೊನಾ ವೈರಸ್​ ಹುಟ್ಟಿಗೆ ಚೀನಾ ಮಾತ್ರವಲ್ಲ, ಅಮೆರಿಕ ಕೂಡ ಪಾಲದಾರ ಎಂಬುದು ಡೈಲಿ ಮೇಲ್​ ವೆಬ್​ಸೈಟ್​ ಪ್ರಕಟಿಸಿರುವ ದಾಖಲೆಯೊಂದು ತಿಳಿಸಿದೆ. ಚೀನಾದ ಗುಹೆಯೊಂದರಲ್ಲಿ ಹಿಡಿದು ತಂದಂತಹ ಬಾವಲಿಗಳ ಮೇಲೆ ವುಹಾನ್​ನ ಪ್ರಯೋಗಾಲಯದಲ್ಲಿ ಬಹಳ ವರ್ಷಗಳ ಹಿಂದಿನಿಂದ ಪರೀಕ್ಷೆ ನಡೆಯುತ್ತಿದ್ದು, ಅಚ್ಚರಿಯೆಂದರೇ ಈ ಪರೀಕ್ಷೆ ನಡೆಸಲು ಸ್ವತಃ ಅಮೆರಿಕವು ಕೂಡ ನಿಧಿಯನ್ನು ನೀಡಿರುವುದು ಬಹಿರಂಗವಾಗಿದೆ.

    ಡೈಲಿ ಮೇಲ್​ ದಾಖಲೆಯ ಪ್ರಕಾರ ವುಹಾನ್​ನಿಂದ ಸಾವಿರಾರು ಕಿ.ಮೀ ದೂರದಲ್ಲಿರುವ ಯುನಾನ್​ ನಗರದ ಸಮೀಪದ ಗುಹೆಗಳಿಂದ ಬಾವಲಿಗಳನ್ನು ಸಂಶೋಧನೆಗೆಂದು ವಿಜ್ಞಾನಿಗಳು ಕೆಲ ವರ್ಷಗಳ ಹಿಂದೆಯೇ ಹಿಡಿದು ತಂದಿದ್ದಾರೆ. ವುಹಾನ್​ ನಗರದಲ್ಲಿರುವ ರೋಗಸೂಕ್ಷ್ಮಾಣುಗಳ ಅಧ್ಯಯನ ಕೇಂದ್ರ(ವೈರಾಲಜಿ)ದಲ್ಲಿ ಬಾವಲಿಗಳ ಪ್ರಯೋಗ ನಡೆದಿದ್ದು, ಇದಕ್ಕೆ ಅಮೆರಿಕ 3.7 ಮಿಲಿಯನ್​ ಡಾಲರ್​ ನೆರವು ನೀಡಿದೆ ಎಂದು ತಿಳಿದುಬಂದಿದೆ.

    ಆಘಾತಕಾರಿಯೆಂದರೆ ಕೋವಿಡ್​-19 ನಲ್ಲಿರುವ ಜಿನೋಮ್​ಗಳು ಯುನಾನ್​ ಗುಹೆಯಲ್ಲಿ ಹಿಡಿದು ತಂದ ಬಾವಲಿಗಳಲ್ಲೂ ಪತ್ತೆಯಾಗಿವೆ. ಅಲ್ಲದೆ, ಚೀನಾದ ಕೆಲ ಸಚಿವರು ಕೂಡ ವೈರಾಲಜಿ ಸಂಸ್ಥೆಯಿಂದಲೇ ವೈರಸ್​ ಸೋರಿಕೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಇದಾದ ಒಂದು ವಾರದ ಬೆನ್ನಲ್ಲೇ ಡೈಲಿ ಮೇಲ್​ನಲ್ಲಿ ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟವಾಗಿದೆ.

    ವುಹಾನ್​ ವೈರಾಲಜಿ ಸಂಸ್ಥೆಯಲ್ಲಿನ ವಿಜ್ಞಾನಿಗಳು ಮೊದಲು ಸೋಂಕಿಗೆ ತುತ್ತಾಗಿರಬಹುದು. ಬಾವಲಿಯ ರಕ್ತದ ಕಣದಲ್ಲಿನ ವೈರಸ್​ ಮೊದಲು ವಿಜ್ಞಾನಿಗಳಿಗೆ ತಗುಲಿ, ನಂತರ ಅದು ಸ್ಥಳೀಯ ಸಮುದಾಯಕ್ಕೆ ಹರಡಿರಬಹುದು ಎಂದು ಹೆಸರೇಳಲು ಇಚ್ಛಿಸದ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಯುಎಸ್​ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನೆರವಿನೊಂದಿಗೆ ಯೋಜನೆಯ ಭಾಗವಾಗಿ ವಿಜ್ಞಾನಿಗಳು ಬಾವಲಿಗಳ ಮೇಲೆ ಪರೀಕ್ಷೆ ನಡೆಸಿದ್ದು, ಹಣ ಸ್ವೀಕರಿಸಲು ವುಹಾನ್​ ಲ್ಯಾಬ್​ಗೆ ಅಮೆರಿಕ ಲೈಸೆನ್ಸ್ ನೀಡಿರುವುದು ಬಹಿರಂಗವಾಗಿದೆ. ಬಾವಲಿ ಮೇಲೆ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಈ ಹಿಂದೆ ಹಲವು ಅಧ್ಯಯನ ವರದಿಗಳು ಪ್ರಕಟವು ಆಗಿವೆ.

    ಉದಾಹರಣೆಗೆ 2018ರ ಏಪ್ರಿಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರ ಪ್ರಕಾರ ಬಾವಲಿ ಸಂಬಂಧಿತ ಕರೊನಾವೈರಸ್​ 2016ರಲ್ಲಿ ಚೀನಾದ ಹಂದಿ ಫಾರ್ಮ್​ನಲ್ಲಿ ಸ್ಪೋಟಗೊಂಡಿತ್ತು ಎಂದು ತಿಳಿದುಬಂದಿದೆ. ಪ್ರಯೋಗದ ಭಾಗವಾಗಿ ಸಂಶೋಧಕರು ವೈರಸ್​ ಅನ್ನು ಲ್ಯಾಬ್​ಗಳಲ್ಲಿ ಬೆಳೆಸಿ, ಅದನ್ನು ಹಂದಿಮರಿಗಳಿಗೆ ಇಂಜೆಕ್ಟ್​ ಮಾಡಿದ್ದರು. ಬಳಿಕ ಅನಾರೋಗ್ಯಕ್ಕೀಡಾದ ಹಂದಿಮರಿಗಳ ಕರುಳಿನ ಮಾದರಿಗಳನ್ನು ತೆಗೆದುಕೊಂಡು ಅದನ್ನು ಇತರೆ ಹಂದಿ ಮರಿಗಳಿಗೆ ಆಹಾರವಾಗಿ ನೀಡಿದ್ದರು. ಇದರಿಂದ ಬಾವಲಿ ಸಂಬಂಧಿತ ಕೊರೊನಾವೈರಸ್​ನಿಂದ ಉಂಟಾಗುವ ಮಾರಣಾಂತಿಕ ಹಂದಿ ತೀವ್ರ ಅತಿಸಾರ ಸಿಂಡ್ರೋಮ್ ಹರಡಿತ್ತು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    VIDEO| ಜೆಟ್​ ವಿಮಾನದಲ್ಲಿ ಹಾರಾಟ ನಡೆಸುವಾಗ ಆಕಸ್ಮಿಕವಾಗಿ ಹೊರ ಜಿಗಿದ ವ್ಯಕ್ತಿ: ಮುಂದೇನಾಯ್ತು ನೀವೇ ನೋಡಿ…

    ಉತ್ತರ ಪ್ರದೇಶದಲ್ಲಿ 60 ವರ್ಷದ ಮಹಿಳೆಯ ಹತ್ಯೆ, ಸಹಾಯಕ್ಕೆ ಧಾವಿಸದೆ, ದೃಶ್ಯ ಚಿತ್ರೀಕರಿಸಿದವರಿಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts