More

    ಅಮಾನತು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಡಬ್ಲ್ಯುಎಫ್‌ಐ ನಿರ್ಧಾರ: ಜ.16 ರಂದು ಸಭೆ

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಆಡಳಿತ ಮಂಡಳಿಯನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ. ಜ.16 ರಂದು ದೆಹಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

    ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘನೆ ಮತ್ತು ಡಬ್ಲ್ಯುಎಫ್‌ಐ ಸಂವಿಧಾನ ಉಲ್ಲಂಘನೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಡಿ.24 ರಂದು ಕುಸ್ತಿ ಫೆಡರೇಶನ್ ನ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತ್ತು.

    ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವುದರಿಂದ ಅಮಾನತು ಸ್ವೀಕಾರಾರ್ಹವಲ್ಲ, ಸರಿಯಾಗಿ ಕಾರ್ಯನಿರ್ವಹಿಸುವ ಫೆಡರೇಶನ್ ಅಗತ್ಯವಿದೆ. ಅಮಾನತು ವಿಷಯವನ್ನು ನ್ಯಾಯಾಲಯಕ್ಕೆ ತೆಗದುಕೊಂಡು ಹೋಗಲಿದ್ದೇವೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

    ನಾವು ಸಂವಿಧಾನ ಬದ್ಧವಾಗಿ ಚುನಾವಣೆ ನಡೆದು ಆಯ್ಕೆಯಾಗಿದ್ದೇವೆ. ಕ್ರೀಡಾ ಸಚಿವಾಲಯ ನಮ್ಮನ್ನು ಕಡೆಗಣಿಸಲು ಹೇಗೆ ಸಾಧ್ಯ. ಅಮಾನತು ಮತ್ತು ಸ್ವತಂತ್ರ ಸಮಿತಿಯನ್ನು ನಾವು ಪರಿಗಣಿಸಲ್ಲ. ನಮ್ಮ ಸಮಿತಿ ಈಗಲೂ ಕಾರ್ಯನಿರ್ವಹಿಸುತ್ತಿದೆ. ಸಮಿತಿಯ ಸಭೆ ಕರೆದು ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತೇವೆ. ನಮ್ಮ ರಾಜ್ಯ ಸಮಿತಿಗಳು ಆಟಗಾರರನ್ನು ಕಳುಹಿಸದಿದ್ದರೆ ಸ್ವತಂತ್ರ ಸಮಿತಿ ಹೇಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತದೆ ಎಂದು ಸಂಜಯ್‌ ಸಿಂಗ್ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟುಮಾಡಿದ ಯಶ್​! ರಾಕಿ ಭಾಯ್​​ ಹೇಳಿದ ಮಾತೇನು? ​

    ಮೈಸೂರಿನ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣಾ ಯೋಜನೆಗೆ US ಮಿಷನ್‍ನ ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts