More

    ಕೋರ್ಟ್ ಸ್ಥಾಪನೆಗೆ ಸ್ಥಳ ಪರಿಶೀಲನೆ

    ಜೊಯಿಡಾ: ತಾಲೂಕಿನಲ್ಲಿ ಹೊಸ ನ್ಯಾಯಾಲಯ ಸ್ಥಾಪನೆ ಸಂಬಂಧ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಶನಿವಾರ ಜೊಯಿಡಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

    ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಿವೇಶನ ಹಾಗೂ ಅಲ್ಲಿಯವರೆಗೆ ಕಾರ್ಯನಿರ್ವಹಿಸಲು ಕಟ್ಟಡದ ಬಗ್ಗೆ ಸರ್ವೇಕ್ಷಣೆ ಮಾಡಿದರು. ಆದಷ್ಟು ಬೇಗ ನ್ಯಾಯಾಲಯದ ಪ್ರಕ್ರಿಯೆ ಪ್ರಾರಂಭಿಸಲು ಸಹಕಾರ ನೀಡುವುದಾಗಿ ನ್ಯಾಯಾಧೀಶರು ಭರವಸೆ ನೀಡಿದರು.

    ರಾಜ್ಯದಲ್ಲಿ ನ್ಯಾಯಾಲಯವೇ ಇಲ್ಲದ ತಾಲೂಕು ಕೇಂದ್ರ ಜೊಯಿಡಾ ಆಗಿದೆ. ಜೊಯಿಡಾದಲ್ಲಿ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂದು ಕಾಳಿ ಬ್ರಿಗೇಡ್ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿತ್ತು. ಜೊಯಿಡಾ ಬಂದ್ ಮಾಡುವ ಮೂಲಕ ಜನರು ಕಾಳಿ ಬ್ರಿಗೇಡ್ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಅವರು ಸರ್ಕಾರಕ್ಕೆ ಪತ್ರ ಬರೆದು ನ್ಯಾಯಾಲಯ ಸ್ಥಾಪನೆಗೆ ಬೆಂಬಲ ಸೂಚಿಸಿದ್ದರು.

    ಅನೇಕ ಬಾರಿ ಮುಖ್ಯಮಂತ್ರಿ, ಕಾನೂನು ಸಚಿವ, ಮುಖ್ಯ ನ್ಯಾಯಾಧೀಶರು ಬಳಿ ಮನವಿ ಮಾಡಿ, ಕೋರ್ಟ್ ಸ್ಥಾಪನೆಗಾಗಿ ಆಗ್ರಹ ಮಾಡಲಾಗಿತ್ತು. ನಿರಂತರ ಹೋರಾಟದ ಲವಾಗಿ 2020ರಲ್ಲಿ ಆಗಿನ ಜಿಲ್ಲಾ ನ್ಯಾಯಾಧೀಶರು ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಕೋವಿಡ್ ಕಾರಣ ನ್ಯಾಯಾಲಯ ನನೆಗುದಿಗೆ ಬಿದ್ದಿತ್ತು. ಈಗ ಡಿ.ಎಸ್. ವಿಜಯಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ದಾಂಡೇಲಿ ಜೆಎಂಎ್ಸಿ ನ್ಯಾಯಾಧೀಶ ಮಂಜುನಾಥ ಮುನವಳ್ಳಿ, ವಕೀಲರು, ಅಧಿಕಾರಿಗಳು ಮಾಹಿತಿ ನೀಡಿದರು.

    ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ, ಮಾಜಿ ಮುಖ್ಯ ಸಂಚಾಲಕ ರವಿ ರೇಡಕರ್, ಮುಖ್ಯ ಸಮಿತಿ ಅಧ್ಯಕ್ಷ ಉಮೇಶ್ ವೇಳೀಪ, ಸದಸ್ಯರಾದ ನಾರಾಯಣ ಹೆಬ್ಬಾರ, ಸತೀಶ ನಾಯಕ, ಸಮೀರ್ ಮುಜಾವರ್, ಪ್ರಭಾಕರ ನಾಯಕ, ದಿನೇಶ್ ದೇಸಾಯಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts