More

    ಕ್ರೀಡಾಂಗಣದ ಹೊರಗೆ ಕಾದಾಡಿದ ಕುಸ್ತಿಪಟುಗಳು ! ಒಲಂಪಿಕ್​ ಚಾಂಪಿಯನ್​ ಸುಶೀಲ್​ಕುಮಾರ್​ ವಿರುದ್ಧ ಎಫ್​.ಐ.ಆರ್​.

    ನವದೆಹಲಿ : ಉತ್ತರ ದೆಹಲಿಯ ಛತ್ರಸಾಲ್ ಕ್ರೀಡಾಂಗಣದ ಆವರಣದಲ್ಲಿ ನಡೆದ ಎರಡು ಆಟಗಾರರ ಗುಂಪುಗಳ ಘರ್ಷಣೆಯಲ್ಲಿ ಯುವ ಕುಸ್ತಿ ಆಟಗಾರರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಏಪ್ರಿಲ್​ 4 ರ ತಡರಾತ್ರಿ ನಡೆದ ಈ ದುರ್ಘಟನೆಯ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್​.ಐ.ಆರ್​.ನಲ್ಲಿ ಎರಡು ಬಾರಿ ಒಲಂಪಿಕ್​ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರಿದೆ ಎನ್ನಲಾಗಿದೆ.

    ಕುಮಾರ್, ಅಜಯ್​, ಪ್ರಿನ್ಸ್​, ಸೋನು, ಸಾಗರ್, ಅಮಿತ್ ಮತ್ತಿತರ ಕುಸ್ತಿ ಆಟಗಾರರ ನಡುವೆ ಕ್ರೀಡಾಂಗಣದ ಪಾರ್ಕಿಂಗ್​ನಲ್ಲಿ ಘರ್ಷಣೆ ಆರಂಭವಾಯಿತು. ಈ ಹೊಡೆದಾಟದಲ್ಲಿ ಸಾಗರ್​ ಮತ್ತು ಅವರ ಮಿತ್ರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಯಿತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ತನಿಖೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    “ಕೃತ್ಯ ನಡೆದ ಸ್ಥಳ ಮತ್ತು ಐದು ವಾಹನಗಳನ್ನು ಪರಿಶೀಲಿಸಲಾಯಿತು. ಒಂದು ಸ್ಕಾರ್ಪಿಯೋದಲ್ಲಿ ಐದು ಲೈವ್​ ಕಾರ್ಟ್​​ರಿಡ್ಜ್​​ಗಳಿರುವ ಒಂದು ಡಬಲ್ ಬ್ಯಾರೆಲ್ ಲೋಡೆಡ್​ ಗನ್ ಮತ್ತು ಎರಡು ಮರದ ದಂಡಗಳು ಸಿಕ್ಕಿವೆ. ಅವೆಲ್ಲವನ್ನು ಜಪ್ತಿ ಪಡಿಸಿಕೊಂಡಿದ್ದು, ಫೊರೆನ್ಸಿಕ್​ ತಜ್ನರು ಸಹ ಪರಿಶೀಲನೆ ನಡೆಸಿದ್ದಾರೆ” ಎಂದು ವಾಯುವ್ಯ ದೆಹಲಿ ಎಡಿಸಿಪಿ ಗುರೀಖ್​​ಬಲ್ ಸಿಂಗ್ ಸಿಧು ಹೇಳಿದ್ದಾರೆ.

    ತನಿಖೆ ನಡೆಯುತ್ತಿರುವಂತೆಯೇ, ಗಾಯಗೊಂಡು ಸಿವಿಲ್​ ಲೈನ್ಸ್​​ ಟ್ರಾಮಾ ಸೆಂಟರ್​ ಸೇರಿದ್ದ ಸಾಗರ್​ ಎಂಬ 23 ವರ್ಷದ ಕುಸ್ತಿಪಟು ಸಾವಪ್ಪಿದ್ದು ತಿಳಿದುಬಂತು. ಅವರ ಮಿತ್ರ ಸೋನುಗೆ ಗಂಭೀರವಾಗಿ ಗಾಯಗಳಾಗಿದ್ದು, ಕೊಲೆ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದಿದ್ದಾರೆ. (ಏಜೆನ್ಸೀಸ್)

    ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts