More

    ದತ್ತಗಿರಿ ಶಾಲೆ ವಿದ್ಯಾರ್ಥಿಗಳ ಸೃಜನಶೀಲತೆ ಅನಾವರಣ

    ಬೀದರ್: ಇಲ್ಲಿಯ ಬಸವನಗರ ಕಾಲೊನಿಯ ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪ್ರಾಜೆಕ್ಟ್ ಡೇ’ ಕಾರ್ಯಕ್ರಮವು ಮಕ್ಕಳ ಸೃಜನಶೀಲತೆ ಅನಾವರಣಕ್ಕೆ ವೇದಿಕೆಯಾಯಿತು.
    ನರ್ಸರಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಸ್ವತಃ ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಮಾದರಿಗಳು ಸಹಪಾಠಿಗಳು, ಪಾಲಕರು, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಗಮನ ಸೆಳೆದವು.
    ಉತ್ತರಾಖಂಡದ ಕೇದಾರನಾಥ ದೇವಸ್ಥಾನ, ಬಸವಕಲ್ಯಾಣದ ಅನುಭವ ಮಂಟಪ, ಚಂದ್ರಯಾನ 3 ಮೊದಲಾದ ಮಾದರಿಗಳು ಪ್ರಮುಖ ಆಕರ್ಷಣೆಯಾಗಿದ್ದವು.
    ವಿದ್ಯಾರ್ಥಿಗಳು ಕೇದಾರನಾಥ ದೇವಸ್ಥಾನದ ಇತಿಹಾಸವನ್ನು ಪಟಪಟನೇ ವಿವರಿಸಿದರು. ಅನುಭವ ಮಂಟಪದಲ್ಲಿ ಕುಳಿತಿದ್ದ ಅಲ್ಲಮಪ್ರಭು, ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ, ಅಕ್ಕ ನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ ಪಾತ್ರಧಾರಿಗಳು ಮಂತ್ರಮುಗ್ಧಗೊಳಿಸಿದರು.
    ಭೂಮಿ, ಸೂರ್ಯ, ಚಂದ್ರ, ಉಪಗ್ರಹ, ರಾಕೇಟ್, ಜಲ, ವಾಯು, ಸೌರ ವಿದ್ಯುತ್ ಉತ್ಪಾದನೆ, ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ, ಜಾಗತಿಕ ತಾಪಮಾನ, ನವೀಕರಿಸಬಹುದಾದ ಇಂಧನ ಮೂಲ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಸೂಕ್ಷ್ಮದರ್ಶಕ, ಬೆಳೆ ಉತ್ಪಾದನೆ ಹಾಗೂ ನಿರ್ವಹಣೆ, ಹನಿ ನೀರಾವರಿ, ಮನುಷ್ಯನ ಶರೀರ, ಉತ್ತಮ ಹವ್ಯಾಸಗಳು, ಆಹಾರಧಾನ್ಯ, ಗೊಂಬೆ ನೃತ್ಯ, ಭಾರತದ ವಿವಿಧ ರಾಜ್ಯಗಳ ವೇಷ, ಭೂಷಣ, ಭಾರತಾಂಬೆ, ಕವಿಗಳು, ಮಹಾ ಪುರುಷರು ಸೇರಿದಂತೆ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಇಂಗ್ಲಿಷ್, ಕನ್ನಡ, ಹಿಂದಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿದ್ದವು.
    ಅನೇಕ ವಿದ್ಯಾರ್ಥಿಗಳು ತಿಂಡಿ, ತಿನಿಸು, ಹಣ್ಣಿನ ರಸದ ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದರು. ಮಕ್ಕಳು ಹಾಗೂ ಪಾಲಕರು ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟರು. ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಡಾ. ನೀತಾ ಶೈಲೇಂದ್ರ ಬೆಲ್ದಾಳೆ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿದರು. ದತ್ತಗಿರಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪೂಜ್ಯ ಅವಧೂತಗಿರಿ ಮಹಾರಾಜ, ಅಧ್ಯಕ್ಷ ರಮೇಶಕುಮಾರ ಪಾಂಡೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ದುಕಾನದಾರ್, ಖಜಾಂಚಿ ಪ್ರಭಾಕರ ಆರ್. ಮೈಲಾಪುರ, ಕಾರ್ಯಕಾರಿಣಿ ಸದಸ್ಯರಾದ ರವಿ ಮಲಸಾ, ಬಸವರಾಜ ದೇಗಲಮಡಿ, ಶಾಂತಾಬಾಯಿ ಯರಮಲ್ಲೆ, ಪ್ರಾಚಾರ್ಯೆ ಮಹಾದೇವಿ ಬೀದೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts