More

    ವರ್ಷದ ಮೊದಲ ಬೆಳೆಗಳಿಗೆ ರೈತರಿಂದ ಪೂಜೆ ಸಲ್ಲಿಕೆ

    ಆಲ್ದೂರು: ಪಟ್ಟಣದಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ಮನೆಗೆ ಮಾವಿನ ತೋರಣ ಕಟ್ಟಿ , ರಂಗೋಲಿ ಹಾಕಿ ವರ್ಷದ ಮೊದಲ ಹಬ್ಬವನ್ನು ಬರಮಾಡಿಕೊಂಡರು.
    ಸಂಕ್ರಾಂತಿ ಸುಗ್ಗಿ ಕಾಲವಾಗಿದ್ದು ರೈತರು ತಾವು ಬೆಳೆದ ಬೆಳೆಯನ್ನು ಪೂಜಿಸಿ ಮನೆಗೆ ತರುವ ಪರ್ವ ಕಾಲವಾಗಿದೆ. ಈಗಾಗಲೇ ಮಲೆನಾಡು ಭಾಗದಲ್ಲಿ ಕಾಫಿ ಹಾಗು ಭತ್ತದ ಕಟಾವು ಪ್ರಾರಂಭವಾಗಿದ್ದು ರೈತರು ತಾವು ಬೆಳೆದ ಬೆಳೆಯನ್ನು ಮನೆ ಮುಂದೆ ರಾಶಿ ಮಾಡಿ ಪೂಜಿಸಿ ಧನ್ಯತಾಭಾವ ಮೆರೆದರು.
    ಮಕರ ಸಂಕ್ರಾಂತಿ ಪ್ರಯುಕ್ತ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ತಮ್ಮ ನೆರೆ ಹೊರೆಯವರಿಗೆ ಎಳ್ಳು-ಬೆಲ್ಲ ಹಂಚಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts