More

    ಚೀನಾದಲ್ಲಿ H3N3 ಹಕ್ಕಿಜ್ವರದಿಂದ ಮೃತಪಟ್ಟ ಮಹಿಳೆ

    ಬೀಜಿಂಗ್: H3N3 ಹಕ್ಕಿಜ್ವರದಿದಂದ ಚೀನಾದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಈ ಸೋಂಕು ಹಕ್ಕಿಗಳಲ್ಲಿ ಸಾಮಾನ್ಯವಾಗಿದ್ದು, ಮನುಷ್ಯರಲ್ಲಿ ಕಂಡು ಬರುವುದು ತೀರಾ ಅಪರೂಪ ಎಂದು ಹೇಳಲಾಗಿತ್ತು. ಇದೀಗ ಹಕ್ಕಿಜ್ವರದಿಂದ ಗುವಾಂಗ್​ಡಾಂಗ್​ನ ದಕ್ಷಿಣ ಪ್ರಾಂತ್ಯದ ಮಹಿಳೆ ಮೃತಪಟ್ಟಿರುವುದು ಮೊದಲ ಪ್ರಕರಣ ಇದಾಗಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಬಿಜೆಪಿಯಲ್ಲಿ ಇರುವವರು ಕಾಳಸಂತೆಕೋರರು, ಬೆಟ್ಟಿಂಗ್​ ದಂಧೆಕೋರರು: ಎಚ್​.ಡಿ.ಕುಮಾರಸ್ವಾಮಿ ಆರೋಪ

    ಏವಿಯನ್ ಇನ್​ಫ್ಲುಯೆಂಜಾದ ಉಪತಳಿ ಎಚ್​​3ಎನ್​8 ಹಕ್ಕಿಜ್ವರ ಮಹಿಳೆಯಲ್ಲಿ ಕಾಣಿಸಿಕೊಂಡಿತ್ತು. ಮಹಿಳೆ ಕೋಳಿ ಸಾಕಾಣಿಕೆ ಕೇಂದ್ರದ ಸಂಪರ್ಕಕ್ಕೆ ಬಂದಿರುವ ವೇಳೆ ಸೋಂಕು ತಗುಲಿರಬಹುದು ಎಂದು ವೈದ್ಯರಯ ಅಂದಾಜಿಸಿದ್ದಾರೆ. ಸೋಂಕಿತ ಮಹಿಳೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಳ್ಳುವುದಿಲ್ಲ. ಈ ಸೋಂಕು ಮನುಷ್ಯರಿಗೆ ಸುಲಭವಾಗಿ ಹಬ್ಬುವ ಸಾಮರ್ಥ್ಯ ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

    ಚೀನಾದಲ್ಲಿ ಈವರೆಗೆ ಹಕ್ಕಿಜ್ವರಕ್ಕೆ ತುತ್ತಾದ ಮೂರು ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಕೋಳಿ ಸಾಕಾಣಿಗೆ ಇರುವ ಪ್ರದೇಶದ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ವೈರಲ್ ಸುಲಭವಾಗಿ ಮನುಷ್ಯರಿಗೆ ಹಬ್ಬುವ ಸಾಮರ್ಥ್ಯ ಹೊಂದಿಲ್ಲದಿರುವುದರಿಂದ ಅಪಾಯದ ಪ್ರಮಾಣ ಕಡಿಮೆ ಎಂದು ಡಬ್ಲ್ಯುಎಚ್​ಒ ಹೇಳಿದೆ. (ಏಜೆನ್ಸೀಸ್)

    ಇದನ್ನೂ ಓದಿ: ಈ ಬಾರಿಯೂ ಸ್ಪರ್ಧಿಸಬೇಕೆಂಬುದು ನನ್ನ ಆಶಯ… ನಡ್ಡಾ ಅವರಲ್ಲಿ ಭಾವನೆ ಹಂಚಿಕೊಂಡಿದ್ದೇನೆ; ಜಗದೀಶ್ ಶೆಟ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts