More

    ಕಾಲಮಿತಿ ಇಲ್ಲದ ಕೊಡುಗೆ ಕೌಶಲ : ಪ್ರಧಾನಿ ಮೋದಿ

    ನವದೆಹಲಿ: ಕೌಶಲ ಎಂಬುದಕ್ಕೆ ಯಾವುದೇ ಕಾಲಮಿತಿ ಇಲ್ಲ. ಕಾಲಾನುಕ್ರಮದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ ವೃದ್ಧಿಯಾಗುತ್ತ ಹೋಗುತ್ತದೆ. ಅದು ನಮಗೆ ನಾವೇ ಕೊಡಬಹುದಾದ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

    ವಿಶ್ವ ಯುವ ಕೌಶಲ ದಿನದಂದು ಅವರು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯ ಐದನೇ ವರ್ಷಾಚರಣೆ ನಿಮಿತ್ತ ಇಂದು ಏರ್ಪಡಿಸಿದ ಡಿಜಿಟಲ್ ಶೃಂಗವನ್ನು ಉದ್ದೇಶಿಸಿ ಮಾತನಾಡಿದರು.

    ಇಂದಿನ ಕರೊನಾ ಸೋಂಕಿನ ಸನ್ನಿವೇಶದಲ್ಲಿ ನಮ್ಮ ಕೆಲಸದ ಸಂಸ್ಕೃತಿ, ಉದ್ಯೋಗದ ಸ್ವರೂಪಕ್ಕೆ ಅನುಗುಣವಾಗಿ ಬದಲಾಗಿದೆ. ಯಾವಾಗಲೂ ಬದಲಾಗುತ್ತಿರುವ ಅಥವಾ ಪರಿಷ್ಕರಣೆ ಕಂಡು ಸುಧಾರಿತ ರೂಪದಲ್ಲಿರುವ ಟೆಕ್ನಾಲಜಿ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಈ ಬದಲಾವಣೆಯ ಕಾಲಘಟ್ಟದಲ್ಲಿ ಯುವ ಜನರೂ ಹಿಂದೆ ಬಿದ್ದಿಲ್ಲ. ಹೊಸ ಹೊಸ ಕೌಶಲಗಳನ್ನು ಕಲಿತು ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ.

    ಇದನ್ನೂ ಓದಿ: ಜಲಜನಕ ಚಾಲಿತ ವಾಹನ ಉತ್ಪಾದನೆಗೆ ಕೇಂದ್ರದ ಗ್ರೀನ್ ಸಿಗ್ನಲ್​

    ಈ ರೀತಿ ತ್ವರಿತಗತಿಯಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ನಮ್ಮ ಕೌಶಲಗಳನ್ನು ಕಾಯ್ದುಕೊಳ್ಳುವುದು ಹೇಗೆ ಎಂದು ಜನ ಆಗಾಗ ನನ್ನ ಬಳಿ ಕೇಳುತ್ತಿರುತ್ತಾರೆ. ಕೋವಿಡ್ 19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಈ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಇಂದಿಗೂ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ವಿಚಾರವಾಗಿ ಕೌಶಲ ಮತ್ತು ಮರುಕೌಶಲ, ಕೌಶಲಅಭಿವೃದ್ಧಿ ಮಾಡಿಕೊಳ್ಳುತ್ತಿರಬೇಕು.

    ಕೆಲವು ಜನರಿಗೆ ತಿಳಿವಳಿಕೆ ಮತ್ತು ಕೌಶಲದ ನಡುವೆ ಗೊಂದಲ ಸೃಷ್ಟಿಸಿಕೊಂಡಿರುತ್ತಾರೆ. ಪುಸ್ತಕಗಳನ್ನು ಓದಿ, ಇಂಟರ್​ನೆಟ್​ನಲ್ಲಿ ವಿಡಿಯೋ ನೋಡಿ ಮಾಹಿತಿ ಪಡೆದುಕೊಂಡಿದ್ದರೆ ಅದು ತಿಳಿವಳಿಕೆ ಎನಿಸುತ್ತದೆಯೇ ಹೊರತು, ಕೌಶಲವೆನಿಸಲಾರದು. ವಿಡಿಯೋ ನೋಡಿ ಸೈಕಲ್​ ತುಳಿಯುವುದನ್ನು ಕಲಿಯಲು ಸಾಧ್ಯವೇ? ಸೈಕಲ್ ತುಳಿಯುವುದು ಒಂದು ಕೌಶಲ ಅದನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನಿ ಕಿವಿ ಮಾತು ಹೇಳಿದರು.

    LIVE : ಕೌಶಲ ಎಂಬುದು ನಮ್ಮ ಬದುಕಿನ ಚಾಲನಾ ಶಕ್ತಿ- ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts