More

    ಜಲಜನಕ ಚಾಲಿತ ವಾಹನ ಉತ್ಪಾದನೆಗೆ ಕೇಂದ್ರದ ಗ್ರೀನ್ ಸಿಗ್ನಲ್​

    ತಿರುವನಂತಪುರ: ಜಲಜಲಕ ಚಾಲಿತ ವಾಹನಗಳ ಉತ್ಪಾದನೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೈಡ್ರೋಜನ್​ ಫ್ಯುಯೆಲ್​ ಸೆಲ್​ ವಾಹನಗಳ ಉತ್ಪಾದನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಂತಿಮ ಅಧಿಸೂಚನೆ ಈ ತಿಂಗಳ ಕೊನೆಗೆ ಪ್ರಕಟವಾಗಲಿದೆ.

    ಈಗಾಗಲೇ ವಿದ್ಯುತ್​ಚಾಲಿತ ವಾಹನಗಳ ಉತ್ಪಾದನೆಯಾಗಿ ರಸ್ತೆಯಲ್ಲಿ ಸಂಚರಿಸತೊಡಗಿವೆ. ಅವುಗಳ ಹಿನ್ನಡೆ ಏನೆಂದರೆ, 4-5 ಗಂಟೆಗಳ ಅವಧಿಯಲ್ಲೇ ಬ್ಯಾಟರಿ ಚಾರ್ಜ್​ ಖಾಲಿಯಾಗಿ ಬಿಡುತ್ತದೆ. ಆದಾಗ್ಯೂ, ಯಾವ ವಾಹನಗಳ ಬ್ಯಾಟರಿಯಲ್ಲಿ ಹೈಡ್ರೋಜನ್ ಫ್ಯುಯೆಲ್ ಸೆಲ್ ಇದೆಯೋ ಅಂಥವುಗಳನ್ನು ಪೆಟ್ರೋಲ್, ಡೀಸೆಲ್​ ತುಂಬಿಸುವಂತೆ ಕೆಲವೇ ನಿಮಿಷಗಳಲ್ಲಿ ಮರು ಚಾರ್ಜ್​ ಮಾಡುವುದು ಸಾಧ್ಯವಾಗುತ್ತದೆ.

    ಹೈಡ್ರೋಜನ್​ ರೀಫ್ಯೂಯೆಲ್ಲಿಂಗ್ ಸೆಂಟರ್​ಗಳನ್ನು ಪೆಟ್ರೋಲ್ ಬಂಕ್​ಗಳ ಮಾದರಿಯಲ್ಲಿ ಸ್ಥಾಪಿಸುವುದು ಸಾಧ್ಯವಿದೆ. ಜಲಜನಕ ಚಾಲಿತ ವಾಹನಗಳ ಮೈಲೇಜ್​ ಇಲೆಕ್ಟ್ರಿಕ್ ವಾಹನಗಳ ಮೈಲೇಜ್​ಗಿಂತ ಹೆಚ್ಚಿದೆ. ಈ ವಾಹನಗಳು ಮಾಲಿನ್ಯ ಉಂಟುಮಾಡುವುದಿಲ್ಲ. ಆದರೆ, ಇವುಗಳ ಉತ್ಪಾದನಾ ವೆಚ್ಚ ಕೊಂಚ ಅಧಿಕವೇ ಆಗಿದೆ. ಪರಿಣತರು ಹೇಳುವ ಪ್ರಕಾರ, ಈ ವೆಚ್ಚ ಟೆಕ್ನಾಲಜಿ ಅಭಿವೃದ್ಧಿಯಾದಂತೆ ಕಡಿಮೆಯಾಗಲಿದೆ.

    ಇದನ್ನೂ ಓದಿ: ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..

    ಹೈಡ್ರೋಜನ್ ವಾಹನಗಳಲ್ಲಿ ಎಲೆಕ್ಟ್ರೋ ಕೆಮಿಕಲ್ ಇಂಜಿನ್​ಗಳನ್ನು ಬಳಸಲಾಗುತ್ತದೆ. ಆಮ್ಲಜನಕದೊಂದಿಗೆ ಸೇರಿಸಿ ಹೈಡ್ರೋಜನ್​ ಅನ್ನು ಎಲೆಕ್ಟ್ರೋ ಕೆಮಿಕಲ್ ಸೆಲ್​ಗೆ ತಳ್ಳುವ ಮೂಲಕ ವಿದ್ಯುತ್​​ ಉತ್ಪಾದಿಸಲಾಗುತ್ತದೆ. ಈ ಶಕ್ತಿಯಿಂದಲೇ ವಾಹನ ಚಲಾಯಿಸಲ್ಪಡುತ್ತದೆ. ವಿದ್ಯುತ್ ಚಾಲಿತ ವಾಹನಗಳಲ್ಲಿ ಬ್ಯಾಟರಿಯಲ್ಲಿ ಶೇಖರಿಸಲ್ಪಟ್ಟ ವಿದ್ಯುತ್​ ಬಳಸಿಕೊಂಡು ವಾಹನ ಚಲಾಯಿಸಲಾಗುತ್ತದೆ. ಈ ವಾಹನಗಳ ರೂಪ ಬದಲಾಯಿಸದೇ ಹೈಡ್ರೋಜನ್ ಟ್ಯಾಂಕ್ ಅಳವಡಿಸುವುದು ಸಾಧ್ಯವಿದೆ.

    ಹೈಡ್ರೋಜನ್ ಚಾಲಿತ ವಾಹನಗಳ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸುವ ಹೊಣೆಗಾರಿಕೆ ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ಕಾಲೇಜ್ ಆಫ್​ ಇಂಜಿನಿಯರಿಂಗ್​ ಹೆಗಲೇರಿದೆ. ಇದಕ್ಕೆ ಸಂಬಂಧಿಸಿದ ಮೊದಲ ಪ್ರಾಜೆಕ್ಟ್ ಅನ್ನು ಕೇರಳವೇ ಮಂಡಿಸಿದ್ದು, ಪರಿಣಾಮಕಾರಿಯಾಗಿದೆ ಎಂಬ ಮಾತು ಕೇಳಿಬಂದಿದೆ. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್​ – ಈಗೇನಿದೆ ಪರಿಸ್ಥಿತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts