ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್​ – ಈಗೇನಿದೆ ಪರಿಸ್ಥಿತಿ?

ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ತಾರ್ಕಿಕ ಹಂತ ತಲುಪಿದ್ದು, ಸಚಿನ್​ ಪೈಲಟ್​ ಮತ್ತು ಬಳಗವನ್ನು ಪಕ್ಷದ ಮತ್ತು ಸರ್ಕಾರದ ಪ್ರಮುಖ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ. ಈ ನಡುವೆ ಸಚಿನ್ ಪೈಲಟ್​ ಬುಧವಾರ ನಡೆಸುವುದಾಗಿ ಘೋಷಿಸಿರುವ ಸುದ್ದಿಗೋಷ್ಠಿಯ ಕಡೆಗೆ ಎಲ್ಲರ ಗಮನನೆಟ್ಟಿದೆ. ಏತನ್ಮಧ್ಯೆ, ಬಣಗಳ ಬಲ ಪ್ರದರ್ಶನದ ಕಾರಣ ಗೆಹ್ಲೋಟ್ ಸರ್ಕಾರದ ಅಸ್ತಿತ್ವ ಪ್ರಶ್ನಿಸುವಂತೆ ನಂಬರ್​ ಗೇಮ್ ಶುರುವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಅಶೋಕ್​ ಗೆಹ್ಲೋಟ್​ ಸರ್ಕಾರ ಬಹಳ ಕಡಿಮೆ ಅಂತರದ ಬಹುಮತವನ್ನು ಹೊಂದಿದೆ. ಈ ನಂಬರ್​ ಗೇಮ್​ ಲೆಕ್ಕಾಚಾರದ ಚಿತ್ರಣ ಹೀಗಿದೆ ನೋಡಿ:
ರಾಜಸ್ಥಾನದ ವಿಧಾಸಭೆಯ ಸದಸ್ಯ ಬಲ 200
ಸರಳ ಬಹುಮತಕ್ಕೆ ಬೇಕಾದ ಸದಸ್ಯ ಬಲ 101
ಸ್ಪೀಕರ್ ಸೇರಿ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 107

ಬದಲಾದ ಸನ್ನಿವೇಶದಲ್ಲಿ ಜೈಪುರದ ಫೇರ್​ಮೋಂಟ್​ ಹೋಟೆಲ್​ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ಶಾಸಕರ ಸಂಖ್ಯೆ ಗೆಹ್ಲೋಟ್ ಅವರನ್ನೂ ಸೇರಿಸಿ 88.
ಗೆಹ್ಲೋಟ್ ಸರ್ಕಾರಕ್ಕೆ ಭಾರತೀಯ ಟ್ರೈಬಲ್ ಪಾರ್ಟಿಯ ಇಬ್ಬರು, ಸಿಪಿಐ(ಎಂ)ನ ಒಬ್ಬ ಶಾಸಕ ಮತ್ತು 10 ಪಕ್ಷೇತರರ ಬೆಂಬಲವಿದೆ. ಹೀಗೆ ಒಟ್ಟು ಸದಸ್ಯ ಬಲ 101.
ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿರುವ ಅಶೋಕ್ ಗೆಹ್ಲೋಟ್ ಸಲ್ಲಿಸಿದ ಪಟ್ಟಿಯ ಪ್ರಕಾರ ಸರ್ಕಾರಕ್ಕೆ ಇರುವ ಶಾಸಕರ ಬೆಂಬಲ 104.
ಈ ನಡುವೆ, ಫೇರ್​ಮೋಂಟ್ ಸಭೆಯ ನಂತರ ಹಿಂದಿರುಗಿದ ಬಿಟಿಪಿಯ ಇಬ್ಬರು ಶಾಸಕರ ನಿಲುವು ಬದಲಾಗಿದ್ದು, ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸರಿಯಾದ ಸಮಯದಲ್ಲಿ ತಿಳಿಸುತ್ತೇವೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ನಿರ್ಧಾರ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..

ಇದೇ ರೀತಿ ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ ನಾಲ್ವರು ಶಾಸಕರು ಭಾನುವಾರ ಬಣ ಬದಲಾಯಿಸಿ ಗೆಹ್ಲೋಟ್​ಗೆ ಬೆಂಬಲ ಘೋಷಿಸಿದ್ದಾರೆ. ಈ ಬೆಳವಣಿಗೆ ನಡುವೆ, ಸಚಿನ್ ಪೈಲಟ್ ಸೇರಿ ಅವರೊಂದಿಗೆ ಇರುವ ಕಾಂಗ್ರೆಸ್ ಶಾಸಕರ ಸಂಖ್ಯಾ ಬಲ 19. ಮೂವರು ಪಕ್ಷೇತರ ಶಾಸಕರ ಬೆಂಬಲವಿದೆ.

ಹೀಗೂ ಆಗಬಹುದು: ಸಚಿನ್ ಪೈಲಟ್​ ಅವರೂ ಸೇರಿ 19 ಶಾಸಕರನ್ನು ಅನರ್ಹಗೊಳಿಸಿದರೆ, ಆಗ ಸದನದ ಸದಸ್ಯ ಬಲ 181ಕ್ಕೆ ಕುಸಿಯಲಿದೆ. ಬಹುಮತಕ್ಕೆ 91 ಸಂಖ್ಯಾ ಬಲ ಇದ್ದರೆ ಸಾಕು. ಈ ದಾರಿಯೂ ಗೆಹ್ಲೋಟ್ ಮುಂದಿದೆ. ಹಾಗೇನಾದರೂ ಆದರೆ, ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸಂಖ್ಯಾಬಲ 75. ಇವರು ಪ್ರಯತ್ನಿಸಿ ಪೈಲಟ್ ಜತೆಗಿರುವ ಮೂವರು ಪಕ್ಷೇತರರು, 10 ಇತರೆ ಪಕ್ಷೇತರು, ಇಬ್ಬರು ಸಿಪಿಐಎಂ ಸದಸ್ಯರು, ಇಬ್ಬರು ಬಿಟಿಪಿ ಸದಸ್ಯರ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಗೆಹ್ಲೋಟ್​ಗೆ ಸಂಕಷ್ಟ ಶುರುವಾಗಲಿದೆ. (ಏಜೆನ್ಸೀಸ್)

ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…