More

    ಇಂದು ವಿಶ್ವ ಕ್ಯಾನ್ಸರ್​ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ

    ಸಾಮಾಜಿಕ ಹಿನ್ನೆಲೆ, ಆಥಿರ್ಕ ಸ್ಥಿತಿಗತಿ ಭೇದವಿಲ್ಲದೆ ಕ್ಯಾನ್ಸರ್​ ಕಾಯಿಲೆಗೆ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಕ್ಯಾನ್ಸರ್​ ಚಿಕಿತ್ಸೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ, ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ “ಕಿದ್ವಾಯಿ ಸ್ಮಾರಕ ಗಂಥಿ’, ಗುಣಮಟ್ಟದ ಚಿಕಿತ್ಸೆಯನ್ನು ಸಾಮಾನ್ಯರಿಗೂ ದೊರಕಿಸುವ ನಿಟ್ಟಿನಲ್ಲಿ ನಿರತವಾಗಿದೆ. ವಿಶ್ವ ಕ್ಯಾನ್ಸರ್​ ದಿನದ ಅಂಗವಾಗಿ “ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಫೋನ್​ಇನ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ಅವರು ಕ್ಯಾನ್ಸರ್​ಗೆ ಕಾರಣ, ತಪಾಸಣೆ, ಚಿಕಿತ್ಸೆ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ.

    ಇಂದು ವಿಶ್ವ ಕ್ಯಾನ್ಸರ್​ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನಮಹಿಳೆಯೊಬ್ಬರು ತಮಗೆ ಸ್ತನ ಕ್ಯಾನ್ಸರ್​ ಇರಬಹುದು ಎಂಬ ಅನುಮಾನ ಬಂದರೂ ತಪಾಸಣೆ ಹಾಗೂ ಚಿಕಿತ್ಸೆಗೆ ತೆರಳಲಿಲ್ಲ. ಕಾರಣ, ತನಗೆ ಸ್ತನ ಕ್ಯಾನ್ಸರ್​ ಇದೆ ಎನ್ನುವ ವಿಚಾರ ಬಹಿರಂಗವಾದರೆ ಮಗಳ ಮದುವೆಗೆ ತೊಡಕಾಗಬಹುದು ಎಂಬ ಭಯ. ಕ್ಯಾನ್ಸರ್​ ಕಾಯಿಲೆಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಸಾಕಷ್ಟು ಮುನ್ನಡೆದಿದ್ದರೂ ಸಮಾಜದಲ್ಲಿ ಇದರ ಕುರಿತು ಇನ್ನೂ ಇರುವ ಪೂರ್ವಗ್ರಹ, ಕುಟುಂಬದ ಗೌರವಕ್ಕೆ ಹೆದರಿ ಕಾಯಿಲೆಯನ್ನು ಮುಚ್ಚಿಡುವುದು ಮತ್ತು ಆಧುನಿಕ ಜೀವನಶೈಲಿಗಳಿಂದಾಗಿ ರೋಗ ಉಲ್ಬಣವಾಗುತ್ತಿದೆ. ಕ್ಯಾನ್ಸರ್​ ರೋಗವನ್ನು ಸಮಾಜ ನೋಡುವ ದೃಷ್ಟಿಕೋನವೇ ಬದಲಾಗಬೇಕಿದೆ.

    ಕ್ಯಾನ್ಸರ್​ಗೆ ಇಂಥದ್ದೇ ಕಾರಣ ಎಂದು ಹೇಳುವುದು ಎಲ್ಲ ಸಮಯದಲ್ಲೂ ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ ಕ್ಯಾನ್ಸರ್​ನ ಶೇಕಡ 35-40 ಪ್ರಕರಣಗಳಿಗೆ ತಪು$್ಪ ಆಹಾರಪದ್ಧತಿಯೇ ಕಾರಣ. ಆಧುನಿಕ ಜೀವನಶೈಲಿಗೆ ಮಾರುಹೋಗಿರುವ ಅನೇಕರು ಸರಿಯಾದ ಸಮಯಕ್ಕೆ, ಗುಣಮಟ್ಟದ ಹಾಗೂ ಸರಿಯಾದ ಆಹಾರ ಸೇವನೆ ಮಾಡುವುದಿಲ್ಲ. ಹೆಚ್ಚೆಚ್ಚು ಕಾರ್ಬೊಹೈಡ್ರೇಟ್​ ಹೊಂದಿರುವ ಹಾಗೂ ಹೆಚ್ಚೆಚ್ಚು ಕ್ಯಾಲೊರಿಯನ್ನು ದೇಹಕ್ಕೆ ಸೇರಿಸುವ ಆಹಾರ ಸೇವನೆ ಮಾಡುತ್ತಾರೆ. ಉದಾಹರಣೆಗೆ ಚೀನಾದಲ್ಲಿ ಸ್ವಲ್ಪ ಅನ್ನ ಹಾಗೂ ಹೆಚ್ಚೆಚ್ಚು ತರಕಾರಿಗಳನ್ನು ಸೇವಿಸುತ್ತಾರೆ. ಆದರೆ ಭಾರತದಲ್ಲಿ ಸ್ವಲ್ಪ ಪಲ್ಯದ ಜತೆಗೆ ತಟ್ಟೆ ಭತಿರ್ ಅನ್ನ ಸೇವಿಸುತ್ತಾರೆ. ಹೆಚ್ಚು ಕ್ಯಾಲೊರಿ ಆಹಾರ ಸೇವಿಸುವುದರಿಂದ ದೇಹದಲ್ಲಿ ಹಾಮೋರ್ನುಗಳ ಸಂಖ್ಯೆ ಹೆಚ್ಚುತ್ತದೆ. ಅಂಥವರಿಗೆ ಕ್ಯಾನ್ಸರ್​ ಬಂದರೆ ತೀವ್ರಗತಿಯಲ್ಲಿ ದೇಹದಲ್ಲೆಲ್ಲ ಹರಡುತ್ತದೆ. ಹಸಿ ಹಾಗೂ ಬೇಯಿಸಿದ ತರಕಾರಿಗಳು ಆಹಾರದಲ್ಲಿ ಹೆಚ್ಚು ಒಳಗೊಳ್ಳಬೇಕು. ಮಾಂಸಾಹಾರದ ಕುರಿತು ಹೇಳುವುದಾದರೆ, ಕೋಳಿ, ಮೀನಿನಂಥ ಮಾಂಸವನ್ನು (ವೈಟ್​ ಮೀಟ್​) ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ರೆಡ್​ ಮೀಟ್​ ಸೇವನೆಯಿಂದ ಅಪಾಯ ಹೆಚ್ಚು.

    ತಂಬಾಕು ಡೇಂಜರ್​
    ದೇಶದಲ್ಲಿ ಶೇ.30 ಕ್ಯಾನ್ಸರ್​ಗೆ ತಂಬಾಕು ಕಾರಣ. ಧೂಮಪಾನ ಅಥವಾ ಜಗಿಯುವ ಮೂಲಕ ತಂಬಾಕು ಸೇವನೆ ನಡೆಯುತ್ತದೆ. ಇವೆರಡೂ ಕ್ಯಾನ್ಸರ್​ ಆಪಾಯಕ್ಕೊಡ್ಡುತ್ತವೆ. ಆಗಾಗ್ಗೆ ಗುಟ್ಕಾ ಮಾರಾಟಕ್ಕೆ ತಡೆ ಒಡ್ಡಲಾಗುತ್ತದೆಯಾದರೂ ಮತ್ತೆ ಆರಂಭವಾಗುತ್ತವೆ. ಇದನ್ನು ಮಾರುವವರಿಗೆ ಸ್ಥಳದಲ್ಲೇ 5 ಸಾವಿರ ರೂ. ದಂಡ ವಿಧಿಸುವ ಜತೆಗೆ ಜಾಮೀನುರಹಿತ ಪ್ರಕರಣ ದಾಖಲಿಸುವಂಥ ಕಠಿಣ ಕಾನೂನು ಜಾರಿಯಾಗಬೇಕು.

    ದೈಹಿಕ ವ್ಯಾಯಾಮವಿರಲಿ
    ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದರಿಂದ ಕ್ಯಾನ್ಸರ್​ ಸೇರಿ ಯಾವುದೇ ಆರೋಗ್ಯ ಸಮಸ್ಯೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ದೇಹದಿಂದ ಬೆವರು ಹೊರಬರುವಂತೆ ವ್ಯಾಯಾಮ ಮಾಡಬೇಕು. ಕನಿಷ್ಠ ಪ್ರತಿದಿನ ನಾಲ್ಕೈದು ಕಿಲೋಮೀಟ್​ ನಡಿಗೆಯಾದರೂ ಅಳವಡಿಸಿಕೊಳ್ಳಬೇಕು.

    ಧ್ಯಾನದಿಂದ ಅನುಕೂಲ
    ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಔಷಧದಷ್ಟೇ ಮಹತ್ವವು ಮಾನಸಿಕ ಕ್ಷಮತೆಯನ್ನೂ ಆಧರಿಸಿರುತ್ತದೆ. ಯಾವುದೇ ರೋಗಿ ಮಾನಸಿಕ ಕ್ಷಮತೆ ಹೊಂದಿದ್ದರೆ, ಧೈರ್ಯದಿಂದ ಇದ್ದರೆ ಕ್ಯಾನ್ಸರ್​ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಕುಟುಂಬವರ್ಗ, ಸಮಾಜದ ಸಹಕಾರದ ಜತೆಗೆ ಕ್ಯಾನ್ಸರ್​ ರೋಗಿಗಳಿಗೆ ವೈದ್ಯರ ಮಾರ್ಗದರ್ಶನವೂ ಬೇಕಾಗತ್ತದೆ. ಕೇವಲ ಔಷಧ ನೀಡಿ ಸುಮ್ಮನಾಗುವುದಲ್ಲ. ರೋಗಿಗೆ ಚಿಕಿತ್ಸೆಯ ನಂತರದ ಸ್ಥಿತಿ, ಅಡ್ಡಪರಿಣಾಮಗಳು, ಜೀವನಶೈಲಿಯ ಬದಲಾವಣೆಗಳ ಕುರಿತು ಮಾನಸಿಕವಾಗಿ ಸಿದ್ಧಪಡಿಸಿದ ನಂತರ ಚಿಕಿತ್ಸೆ ನೀಡಬೇಕು. ಅದೇ ರೀತಿ, ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ಮಾನಸಿಕ ಕ್ಷಮತೆ ಹೆಚ್ಚುತ್ತದೆ.

    ಸಣ್ಣ ವಯಸ್ಸಿನಲ್ಲಿ ಮದುವೆ ಬೇಡ
    ಮಹಿಳೆಯರಲ್ಲಿ ಹೆಚ್ಚಾಗಿ ಎರಡು ರೀತಿಯ ಕ್ಯಾನ್ಸರ್​ಗಳು ಕಾಣಿಸಿಕೊಳ್ಳುತ್ತವೆ. ಗರ್ಭಕೋಶದ ಕಂಠ ಕ್ಯಾನ್ಸರ್​ ಹಾಗೂ ಸ್ತನ ಕ್ಯಾನ್ಸರ್​. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಋತುಮತಿಯಾದ ಕೂಡಲೇ ಮದುವೆ ಮಾಡುತ್ತಿದ್ದರು. ಇದರಿಂದಾಗಿ ಗರ್ಭಕಂಠದ ಕ್ಯಾನ್ಸರ್​ ಹೆಚ್ಚಾಗುತ್ತಿತ್ತು. ಈಗ ಈ ಸಮಸ್ಯೆ ಕಡಿಮೆಯಾಗಿದೆಯಾದರೂ ಕಡಿಮೆ ವಯಸ್ಸಿನಲ್ಲಿ ಅಂದರೆ 20-21ಕ್ಕೆ ಮುನ್ನ ವಿವಾಹ ಮಾಡದಿರುವುದು ಉತ್ತಮ. ಇತ್ತೀಚಿನ ಜೀವನಶೈಲಿ, ಕ್ಯಾಲೊರಿಯುಕ್ತ ಆಹಾರ ಸೇವನೆಯಿಂದ ಹಾಮೋರ್ನುಗಳಲ್ಲಿ ವ್ಯತ್ಯಾಸವಾಗಿ ಸಣ್ಣ ವಯಸ್ಸಿಗೇ ಋತುಮತಿಯಾಗುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಮುಂತಾದ ಕಾರಣಗಳಿಂದ 30 ದಾಟಿದ ನಂತರ ಮದುವೆಯಾಗುತ್ತದೆ. ಇಷ್ಟು ಸುದೀರ್ ಅವಧಿಯಲ್ಲಿ ಹಾಮೋರ್ನುಗಳ ವ್ಯತ್ಯಾಸದಿಂದಾಗಿ ಭವಿಷ್ಯದಲ್ಲಿ ಸ್ತನಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಮಹಿಳೆಯರು ಅಂದಾಜು 25-26ರ ಆಸುಪಾಸಿನಲ್ಲಿ ಮದುವೆಯಾಗುವುದು ಕ್ಯಾನ್ಸರ್​ ತಡೆ ದೃಷ್ಟಿಯಿಂದ ಉತ್ತಮ.

    ತಪಾಸಣೆ ಅತಿಮುಖ್ಯ
    ಭಾರತದಲ್ಲಿ ಶೇಕಡ 50 ಕ್ಯಾನ್ಸರ್​ ರೋಗಿಗಳು ಅಂತಿಮ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಇದರಿಂದಾಗಿಯೇ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಕಿದ್ವಾಯಿ ವತಿಯಿಂದ ಕ್ಯಾನ್ಸರ್​ ತಪಾಸಣೆ ಶಿಬಿರ ನಡೆಸಿ ಮುಂದಿನ ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿ ಎಂದು ಚೀಟಿ ನೀಡಿದರೆ ಬಹುತೇಕರು ಬರುವುದೇ ಇಲ್ಲ. ಮಕ್ಕಳ ಭವಿಷ್ಯ, ಕುಟುಂಬದ ಗೌರವದ ಅಳುಕಿನಲ್ಲಿ ಸುಮ್ಮನಾಗುತ್ತಾರೆ. ಆರೋಗ್ಯ ಎನ್ನುವುದು ಅನೇಕರಿಗೆ ಎರಡನೇ ಆದ್ಯತೆಯಾಗಿದೆ. ಪ್ರಾರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಗುಣಪಡಿಸಲು ಸಾಕಷ್ಟು ಸೌಲಭ್ಯಗಳಿವೆ.

    ತಾಳ್ಮೆಯೂ ಅಗತ್ಯ
    ಕ್ಯಾನ್ಸರ್​ ಕಾಯಿಲೆ ದಿನೇದಿನೇ ಹೆಚ್ಚುತ್ತಿದ್ದು, ಸದ್ಯ ರಾಜ್ಯದಲ್ಲಿ ತಪಾಸಣೆಗೆ ಒಳಗಾಗುವ ಒಂದು ಲಕ್ಷ ಮಂದಿಯಲ್ಲಿ ಶೇಕಡ 16 ಮಂದಿ ಒಂದಲ್ಲ ಒಂದು ಕ್ಯಾನ್ಸರ್​ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಶೇ. 34 ಸ್ತನ ಕ್ಯಾನ್ಸರ್​ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ಕ್ಯಾನ್ಸರ್​ಗೆ ದೀರ್ಘಾವಧಿ ಚಿಕಿತ್ಸೆ ಅಗತ್ಯ. ಹಾಗಾಗಿ, ರೋಗಿಗಳು ಹಾಗೂ ಸಂಬಂಧಿಕರು ತಾಳ್ಮೆ ವಹಿಸಬೇಕಾಗುತ್ತದೆ.
    ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆಗೆ ನಿತ್ಯ 1,800ಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಇದಲ್ಲದೆ ಾಲೋಅಪ್​ಗಾಗಿ ಬರುವವರು, ಒಳರೋಗಿಗಳು ಸೇರಿದರೆ ಈ ಸಂಖ್ಯೆ 2 ಸಾವಿರ ಮೀರುತ್ತದೆ. ಇದರಿಂದ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಮೇಲಿನ ಒತ್ತಡ ತಗ್ಗಿಸಲು ರಾಜ್ಯದ ಇತರ ಭಾಗಗಳಲ್ಲೂ ಕಿದ್ವಾಯಿ ಆಸ್ಪತ್ರೆಯ ಶಾಖೆಗಳನ್ನು ತೆರೆಯುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಕಲಬುರಗಿಯಲ್ಲಿ 100 ಹಾಸಿಗೆಗಳ ಕ್ಯಾನ್ಸರ್​ ಆಸ್ಪತ್ರೆ ಕಾರ್ಯಾರಂಭವಾಗಿದೆ. ತುಮಕೂರಿನಲ್ಲೂ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್​ ಚಿಕಿತ್ಸಾ ವಿಭಾಗದಲ್ಲಿ ಸೇವೆ ಒದಗಿಸಲಾಗುತ್ತಿದೆ. ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕ್ಯಾನ್ಸರ್​ ಚಿಕಿತ್ಸೆ ಲಭ್ಯವಿದೆ.

    ಪೆಟ್​ ಸಿಟಿ ಸ್ಕ್ಯಾನ್
    ನಾನಾ ಬಗೆಯ ಕ್ಯಾನ್ಸರ್​ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಕಾಯಿಲೆಯ ನಿಖರ ಹಂತ ಅರಿತು ಚಿಕಿತ್ಸೆ ನೀಡಲು ಅತ್ಯಗತ್ಯವಾಗಿರುವ “ಪೆಟ್​ ಸಿಟಿ ಸ್ಕ್ಯಾನ್‌ ಯಂತ್ರಗಳ ಅಳವಡಿಕೆ ಕಿದ್ವಾಯಿ ಕ್ಯಾನ್ಸರ್​ ಸಂಸ್ಥೆಯಲ್ಲಿ ಮಾಡಲಾಗುತ್ತಿದ್ದು, ಮುಂದಿನ ತಿಂಗಳಿಂದ ಸೇವೆ ಆರಂಭವಾಗಲಿದೆ. ಪೆಟ್​ ಸಿಟಿ ಸ್ಕಾ$ನ್​ ಪರೀೆಗೆ ಖಾಸಗಿಯಲ್ಲಿ 25-30 ಸಾವಿರ ರೂ. ಆಗುತ್ತದೆ. ಕಿದ್ವಾಯಿಯಲ್ಲಿ ಸೇವೆ ಆರಂಭವಾದರೆ ಬಡವರಿಗೆ ಉಚಿತವಾಗಿ ಸೇವೆ ಒದಗಿಸಲು ಈ ಪರೀೆಗಳನ್ನು ಆಯುಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇತರರಿಗೆ ಶೇ. 50-60 ರಿಯಾಯಿತಿ ದರದಲ್ಲಿ ಪರೀೆ ನಡೆಸಲಾಗುವುದು.

    ಇ-ಆಸ್ಪತ್ರೆ
    ರೋಗಿಗಳು ಕಾಯುವುದನ್ನು ತಪ್ಪಿಸಲು ಆನ್​ಲೈನ್​ ಮೂಲಕ ಸಂದರ್ಶನ ಹಾಗೂ ತಪಾಸಣೆಯ ಸಮಯ ನಿಗದಿಪಡಿಸಿ ಮೊಬೈಲ್​ಗೆ ಸಂದೇಶ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಇದರ ಜತೆಗೆ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಲೆದಾಡುವುದನ್ನು ತಪ್ಪಿಸಲು ಇ-ಆಸ್ಪತ್ರೆ ವ್ಯವಸ್ಥೆ ಶ್ರೀದಲ್ಲೇ ಜಾರಿಯಾಗಲಿದೆ.

    ಕಾಳಜಿಯ ಕಂದಕ ಅಳಿಸೋಣ
    ಪ್ರತಿ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್​ ದಿನ ಆಚರಿಸಲಾಗುತ್ತದೆ. ಹಾಗೆಯೇ ಪ್ರತಿ ವರ್ಷವೂ ಒಂದು ಘೋಷವಾಕ್ಯ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಈ ವರ್ಷ “ಕಾಳಜಿಯ ಕಂದಕ ಅಳಿಸೋಣ’ ಎಂಬ ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ಯಾನ್ಸರ್​ ಗುಣಪಡಿಸಲು ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಸಿಗಬೇಕು ಎನ್ನುವುದು ಈ ಘೋಷಣೆಯ ಅರ್ಥ.

    * ಕ್ಯಾನ್ಸರ್​ ಚಿಕಿತ್ಸೆಗೆ ಹೋಗುವ ವೇಳೆ 2-3ನೇ ಹಂತ ತಲುಪಿರುತ್ತದೆ. ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣ ಹೊಂದಬಹುದು ಎನ್ನುತ್ತಾರೆ. ಆದರೆ ಆರಂಭಿಕ ಹಂತದಲ್ಲೇ ಅದು ಹೇಗೆ ತಿಳಿಯುತ್ತದೆ?
    -ಕೆಮ್ಮು, ವಾಂತಿ, ಹೊಟ್ಟೆನೋವು, ಜ್ವರ, ತೂಕಕಡಿಮೆ, ಹಸಿವಾಗದಿರುವುದು, ವಾಂತಿಬೇಧಿ, ಗಂಟು ಕಾಣಿಸಿಕೊಳ್ಳುವುದು ಇತ್ಯಾದಿ ಲಕ್ಷಣಗಳು ಒಂದು ವಾರಕ್ಕಿಂತ ಹೆಚ್ಚಿನ ಸಮಯ ಕಾಣಿಸಿಕೊಂಡಲ್ಲಿ ಒಮ್ಮೆ ಸ್ಕ್ರೀನಿಂಗ್​ ಮಾಡಿಸಿಕೊಳ್ಳುವುದು ಸೂಕ್ತ. ಇದರಿಂದ ರೋಗವನ್ನು ಬೇಗ ಪತ್ತೆ ಹಚ್ಚಬಹುದು. ಅಂದರೆ ನಿದಿರ್ಷ್ಟ ವಯಸ್ಸು ತಲುಪಿದ ನಂತರ ಸ್ಕ್ರೀನಿಂಗ್​ ಇಲ್ಲವೆ ಸಾಮಾನ್ಯ ವೈದ್ಯಕಿಯ ಪರೀೆ ಮಾಡಿಸಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ, 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೆ ಒಮ್ಮೆ ಮ್ಯಾಮೋಗ್ರಾಂ, ಪ್ಯಾಪ್ಸ್​ಮಿಯರ್​ ಮಾಡಿಸಿದರೆ ಸ್ತನ ಕ್ಯಾನ್ಸರ್​, ಗರ್ಭಕೋಶ ಕಂಠದ ಕ್ಯಾನ್ಸರ್​ ಇದ್ದಲ್ಲಿ ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬಹುದು.
    |ಶಿವಣ್ಣ , ಬೆಂಗಳೂರು

    * ಶ್ವಾಸಕೋಶದ ಕ್ಯಾನ್ಸರ್​ಗೆ ಕಲಬುರಗಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಆದರೆ ಅಲ್ಲಿ ಚಿಕಿತ್ಸೆಯಲ್ಲಿ ಮೋಸ ಮಾಡುತ್ತಿದ್ದಾರೆ. ಹಣ ಕೊಡಿ ಎಂದು ಕೇಳಿದರು. ಹಾಗಾಗಿ ಬೇಸರಗೊಂಡು ಚಿಕಿತ್ಸೆಗೆ ಹೋಗುತ್ತಿಲ್ಲ.
    -ಚಿಕಿತ್ಸೆಗಾಗಿ ನಿಮ್ಮ ಬಳಿ ಹಣ ಕೇಳಿದವರ ಕುರಿತು ಲಿಖಿತ ರೂಪದಲ್ಲಿ ದೂರು ಕೊಡಿ. ಅದಕ್ಕೆ ಸಂಬಂಧಪಟ್ಟಂತೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕಿಯ ವಿವರಗಳನ್ನು ಪಡೆದು ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ಬಂದು ಸಂಪಕಿರ್ಸಿ.

    * 2003ರಲ್ಲಿ ಸ್ತನ ಕ್ಯಾನ್ಸರ್​ನಿಂದ ಚಿಕಿತ್ಸೆ ಪಡೆದು ಈಗ ಗುಣಹೊಂದಿದ್ದೇನೆ? ಕ್ಯಾನ್ಸರ್​ ರೋಗಿಗಳು ನೇತ್ರದಾನ, ದೇಹದಾನ ಮಾಡಬಹುದಾ?
    -ಕ್ಯಾನ್ಸರ್​ನಿಂದ ಗುಣ ಹೊಂದಿದ್ದರೆ ಈಗ ನೇತ್ರದಾನಕ್ಕೆ ತೊಂದರೆ ಆಗುವುದಿಲ್ಲ. ದೇಹದಾನ ಸಹ ಮಾಡಬಹುದು.

    |ದೇವುರಾವ್​ ಪಾಟೀಲ್​, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts