More

    ಕಾಮಗಾರಿ ಬೇಡಿಕೆ ಸಲ್ಲಿಸಿ

    ಅಳವಂಡಿ: ನರೇಗಾ ಯೋಜನೆಯಡಿ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಬೇಕಿದೆ. ಹೀಗಾಗಿ ವೈಯಕ್ತಿಕ, ಸಮುದಾಯ ಕಾಮಗಾರಿಗಳ ಬಗ್ಗೆ ಬೇಡಿಕೆ ಸಲ್ಲಿಸಿ ಯೋಜನೆ ತಯಾರಿಕೆಗೆ ಸಹಕಾರಿಸಿ ಎಂದು ತಾಪಂ ತಾಂತ್ರಿಕ ಸಹಾಯಕ ವಿಜಯಕುಮಾರ ಬಳಿಗಾರ ತಿಳಿಸಿದರು.

    ಇದನ್ನೂ ಓದಿ:ಮಂಡ್ಯ-ಕೌಡ್ಲೆ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ: ಎಂಟು ವರ್ಷದಿಂದ ಕಾಮಗಾರಿಗೆ ಹಿಡಿದಿತ್ತು ಗ್ರಹಣ

    ಗ್ರಾಮದ ಗ್ರಾಪಂಯಲ್ಲಿ ಜಿಪಂ, ತಾಪಂ ವತಿಯಿಂದ 2024-25ನೇ ಸಾಲಿನ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ನಡೆದ ಗ್ರಾಮ ಸಭೆಯಲ್ಲಿ ಬುಧವಾರ ಮಾತನಾಡಿದರು.

    ವೈಯಕ್ತಿಕ ಕಾಮಗಾರಿಯಲ್ಲಿ ಬದು ನಿರ್ಮಾಣ, ಅಜೋಲಾ ಘಟಕ, ಕೃಷಿಹೊಂಡ, ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಮೀನು ಕೃಷಿಕೊಳ, ಕೊಳವೆ ಭಾವಿ ಮರುಪೂರಣ ಘಟಕ, ಎರೆಹುಳು ಘಟಕ, ತೆರೆದ ಭಾವಿ, ಹಂದಿ ಕೊಟ್ಟಿಗೆ ಮುಂತಾದವುಗಳನ್ನು ನಿರ್ಮಿಸಿಕೊಳ್ಳಬಹುದು.

    ಜತೆಗೆ ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ನೋಡೆಲ್ ಆಫೀಸರ್ ಶಿವನಗೌಡ ಪಾಟೀಲ ಮಾತನಾಡಿ, ನರೇಗಾ ಯೋಜನೆಯಲ್ಲಿ ಗಂಡು ಹೆಣ್ಣಿಗೆ ಸಮಾನ ಕೂಲಿ, ಒಂದು ಜಾಬ್ ಕಾರ್ಡ್‌ಗೆ 100 ದಿನ ಕೂಲಿ, ಪ್ರತಿ ದಿನಕ್ಕೆ 316 ರೂ. ಕೂಲಿ ಇದ್ದು.

    ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಕೆಲಸದಲ್ಲಿ ಶೇ,50 ರಿಯಾಯಿತಿ, ಗರ್ಭಿಣಿ, ಭಾಣಂತಿ ಮಹಿಳೆಯರಿಗೆ ಅರ್ಧದಷ್ಟು ಕೆಲಸ ಪೂರ್ತಿ ಕೂಲಿ, ಶೇ.60 ಮಹಿಳೆಯರು ಇರುವ ಕಾಮಗಾರಿಯಲ್ಲಿ ಶೇ.10 ರಷ್ಟು ಕೆಲಸದಲ್ಲಿ ರಿಯಾಯಿತಿ, ವೈಯಕ್ತಿಕ ಕಾಮಗಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪ್ರಭಾರ ಪಿಡಿಓ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ತೋಟಯ್ಯ ಅರಳೆಲೆಮಠ, ಮಲ್ಲಪ್ಪ ಬೆನಕಲ್, ವಿಶ್ವನಾಥ ದೋತರಗಾವಿ, ಹನುಮಂತ ಮೂಲಿಮನಿ, ಪ್ರಶಾಂತಗೌಡ, ಹನುಮಪ್ಪ, ಬಸವರಾಜ, ರಾಮಣ್ಣ, ನಿಂಗಪ್ಪ, ರುದ್ರಪ್ಪ, ಸಿಬ್ಬಂದಿಗಳಾದ ಶಿವಮೂರ್ತಿ, ದೇವೆಂದ್ರರಡ್ಡಿ, ಗೀತಾ, ಮಾರುತಿ, ದಾವಲಸಾಬ, ಹನುಮಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts