More

    ಕರೊನಾ ಗೆದ್ದ 6 ತಿಂಗಳ ಭರವಸೆದಾಯಕ ಸುಂದರ ಮೊಗ ಮತ್ತು 102ರ ಅಜ್ಜಿ

    ನವದೆಹಲಿ: ಇಟಲಿ ಕರೊನಾ ವೈರಸ್​ ಸೋಂಕಿನ ಗ್ರೌಂಡ್​ ಜೀರೋ ಎನಿಸಿದೆ. ಆದರೆ ಇಂಥ ಪರಿಸ್ಥಿತಿಯ ನಡುವೆಯೂ ಸೋಂಕಿನಿಂದ ಬಾಧಿತವಾಗಿದ್ದ 6 ತಿಂಗಳ ಮಗು ಹಾಗೂ 102 ವರ್ಷದ ಅಜ್ಜಿ ಪಿಡುಗನ್ನು ಗೆದ್ದು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

    ಕರೊನಾ ಸೋಂಕು ಗೆದ್ದ ಲಿಯಾನಾರ್ಡೋ ಎಂಬ ಆರು ತಿಂಗಳ ಬಾಲಕನನ್ನು ಭರವಸೆದಾಯಕ ಸುಂದರ ಮೊಗ ಎಂದು ಸ್ಥಳೀಯ ಮೇಯರ್​ ಬಣ್ಣಿಸಿದ್ದಾರೆ. ಅದರಂತೆ 102 ವರ್ಷದ ಇಟಾಲಿಕಾ ಗ್ರೋನ್​ಡೊನಾ ಚಿರಂಜೀವಿ ಎಂದು ಬಣ್ಣಿಸಲ್ಪಟ್ಟಿದ್ದಾರೆ. ಇವರು 1918ರ ಸ್ಪ್ಯಾನಿಶ್​ ಫ್ಲೂಗೆ ತುತ್ತಾಗಿಯೂ ಬದುಕುಳಿದಿದ್ದರು ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ.

    ಇಟಲಿಯ ಉತ್ತರ ಭಾಗದಲ್ಲಿರುವ ಲೊಂಬಾರ್ಡಿ ಬಳಿಯ ಕಾರ್ಬೆಟ್ಟಾದ ದಂಪತಿಯ ಪುತ್ರ ಲಿಯಾನಾರ್ಡೋ ಅಂದಾಜು 50 ದಿನ ಹೋರಾಡಿ, ಕರೊನಾವನ್ನು ಗೆದ್ದಿದ್ದಾನೆ. ಈತನ ತಂದೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಕರೊನಾ ವೈರಸ್​ ಸೋಂಕು ತಗುಲಿತ್ತು. ಆದರೆ ಸೋಂಕು ಮಗುವಿಗೆ ತಗುಲಿ, ವಿಪರೀತ ಜ್ವರ ಮತ್ತು ಹೃದಯ ಬಡಿತ ತೀವ್ರಗೊಳ್ಳುವವರೆಗೂ ಗೊತ್ತಾಗಿರಲಿಲ್ಲ.
    ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದೆವು. ಕರೊನಾ ವೈರಸ್​ ಸೋಂku ತಗುಲಿರುವುದು ಖಚಿತಪಟ್ಟಿತು. ವೈದ್ಯರು ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಿದರು. 50 ದಿನಗಳ ಬಳಿಕ ಆತ ಸಂಪೂರ್ಣ ಗುಣಮುಖನಾದ ಎಂದು ಲಿಯಾನಾರ್ಡೋನ ತಾಯಿ ಹೇಳಿದ್ದಾರೆ.

    102 ವರ್ಷ ವಯಸ್ಸಿನ ಚಿರಂಜೀವಿ: ಉತ್ತರ ಇಟಲಿಯ ಜಿನೊವಾದ ನಿವಾಸಿ 102 ವರ್ಷ ವಯಸ್ಸಿನ ಇಟಾಲಿಕಾ ಗ್ರೋನ್​ಡೊನಾ ಅವರಲ್ಲಿ ಕರೊನಾ ವೈರಸ್​ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಲಘು ಹೃದಯಾಘಾತ ಕೂಡ ಆಯಿತು. ಆದರೆ, 20 ದಿನಗಳ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡು, ಸೋಂಕಿನಿಂದ ಗುಣಮುಖರಾದರು ಎಂದು ವೈದ್ಯರು ತಿಳಿಸಿದ್ದಾರೆ.

    ಇಟಲಿಯ ನ್ಯಾಷನಲ್​ ಹೆಲ್ತ್​ ಇನ್​ಸ್ಟಿಟ್ಯೂಟ್​ನ ದಾಖಲೆಗಳ ಪ್ರಕಾರ ಕರೊನಾ ವೈರಸ್​ ಸೋಂಕಿನಿಂದ ಮೃತಪಟ್ಟವರ ಸರಾಸರಿ ವಯಸ್ಸು 78 ಆಗಿದೆ. ಆದರೆ 102 ವಯಸ್ಸಿನ ಇಟಾಲಿಕಾ ಗ್ರೋನ್​ಡೊನಾ ಇದಕ್ಕೆ ಅಪವಾದ ಎನಿಸಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಿಲ್ಲ. ಆದರೆ ತಾವೇ ತಾವಾಗಿ ಅವರು ಗುಣಮುಖರಾದರು ಎಂದು ವೈದ್ಯರು ತಿಳಿಸಿದ್ದಾರೆ.

    ಇಟಾಲಿಕಾ ಅವರು 1917ರಲ್ಲಿ ಜನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸೆರೋಲಾಜಿಕಲ್​ ಮಾದರಿಯನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಇವರು 1918ರ ಸ್ಪ್ಯಾನಿಶ್​ ಫ್ಲೂ ಸಾಂಕ್ರಾಮಿಕ ರೋಗವನ್ನು ಗೆದ್ದವರು ಎಂಬುದು ಸ್ಪಷ್ಟವಾಯಿತು ಎಂದು ವೈದ್ಯರು ಹೇಳಿದ್ದಾರೆ.

    ಕರೊನಾ ವಾರಿಯರ್​, ಸ್ವಪ್ರೇರಣೆಯಿಂದ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿರುವ ಬಾಲಿವುಡ್​ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts