More

    ಆಗಸ್ಟ್‌ನಲ್ಲಿ ಮತ್ತೆ ಶುರುವಾಗಲಿದೆ ವೃತ್ತಿಪರ ಟೆನಿಸ್

    ವಾಷಿಂಗ್ಟನ್: ಕರೊನಾ ಹಾವಳಿಯಿಂದಾಗಿ ಕಳೆದ ಮಾರ್ಚ್‌ನಿಂದಲೂ ಸ್ಥಗಿತಗೊಂಡಿರುವ ವೃತ್ತಿಪರ ಟೆನಿಸ್ ಚಟುವಟಿಕೆಗಳು ಕೊನೆಗೂ ಆಗಸ್ಟ್‌ನಿಂದ ಆರಂಭಗೊಳ್ಳುವುದು ಖಚಿತಗೊಂಡಿದೆ. ಮಹಿಳಾ ಮತ್ತು ಪುರುಷರ ವೃತ್ತಿಪರ ಟೆನಿಸ್ ಟೂರ್ನಿಗಳ ತಾತ್ಕಾಲಿಕ ಕ್ಯಾಲೆಂಡರ್ ಬಿಡುಗಡೆಗೊಂಡಿದೆ. ಆಗಸ್ಟ್ 3ರಿಂದ ಇಟಲಿಯಲ್ಲಿ ಪಲೆರ್ಮೊ ಲೇಡಿಸ್ ಓಪನ್ ನಡೆಯಲಿದೆ ಎಂದು ಮಹಿಳೆಯರ ಟೆನಿಸ್ ಆಡಳಿತ ಸಂಸ್ಥೆ ಡಬ್ಲ್ಯುಟಿಎ ತಿಳಿಸಿದ್ದರೆ, ಆಗಸ್ಟ್ 14ರಿಂದ ವಾಷಿಂಗ್ಟನ್‌ನಲ್ಲಿ ಸಿಟಿ ಓಪನ್ ನಡೆಯಲಿದೆ ಎಂದು ಪುರುಷರ ಟೆನಿಸ್ ಆಡಳಿತ ಸಂಸ್ಥೆ ಎಟಿಪಿ ತಿಳಿಸಿದೆ.

    ಇದನ್ನೂ ಓದಿ: ಆಸೀಸ್ ಕ್ರಿಕೆಟ್ ಅಭಿವೃದ್ಧಿಗೆ ನೆರವಾಗುವರೇ ಇಂಗ್ಲೆಂಡ್ ಮಾಜಿ ನಾಯಕ?

    ಸಿಟಿ ಓಪನ್‌ನಲ್ಲಿ ಮಹಿಳಾ ವಿಭಾಗದ ಸ್ಪರ್ಧೆಗಳೂ ನಡೆಯಲಿವೆ. ನಂತರ ಆಗಸ್ಟ್ 31ರಿಂದ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂಗೆ ಪೂರ್ವಭಾವಿಯಾಗಿ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ ನ್ಯೂಯಾರ್ಕ್‌ನಲ್ಲೇ ನಡೆಯಲಿದೆ. ಇಲ್ಲಿ ಪುರುಷರ ಮತ್ತು ಮಹಿಳೆಯರ ಟೆನಿಸ್ ಸ್ಪರ್ಧೆಗಳೂ ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಕ್ಲೇಕೋರ್ಟ್ ಟೂರ್ನಿಗಳು ಯುರೋಪ್‌ನಲ್ಲಿ ನಡೆಯಲಿವೆ. ಸೆಪ್ಟೆಂಬರ್ 27ರಿಂದ ನಡೆಯಲಿರುವ ಫ್ರೆಂಚ್​ ಓಪನ್‌ಗೆ ಪೂರ್ವಭಾವಿಯಾಗಿ ಮ್ಯಾಡ್ರಿಡ್ ಮತ್ತು ರೋಮ್ ಟೆನಿಸ್ ಟೂರ್ನಿಗಳು ನಡೆಯಲಿವೆ. ಆದರೆ ಇವೆಲ್ಲಾ ಟೂರ್ನಿಗಳು ಪ್ರೇಕ್ಷಕರ ಗೈರುಹಾಜರಿಯಲ್ಲೇ ನಡೆಯಲಿವೆ.

    ಇದನ್ನೂ ಓದಿ: ನತಾಶಾಗೆ ಹಾರ್ದಿಕ್ ಪಾಂಡ್ಯ ರೋಮ್ಯಾಂಟಿಕ್ ಗಿಫ್ಟ್!

    ಯುಎಸ್ ಓಪನ್‌ಗೆ ಲೈನ್ ಅಂಪೈರ್‌ಗಳಿಲ್ಲ!

    ಆಗಸ್ಟ್‌ನಲ್ಲಿ ಮತ್ತೆ ಶುರುವಾಗಲಿದೆ ವೃತ್ತಿಪರ ಟೆನಿಸ್
    ಕರೊನಾ ಭೀತಿಯಿಂದಾಗಿ ಪಂದ್ಯದ ವೇಳೆ ಅತ್ಯಂತ ಕಡಿಮೆ ಜನರು ಕ್ರೀಡಾಂಗಣದಲ್ಲಿರುವಂತೆ ಮಾಡುವ ಸಲುವಾಗಿ ಯುಎಸ್ ಓಪನ್ ಗ್ರಾಂಡ್ ಸ್ಲಾಂನಲ್ಲಿ ಲೈನ್ ಅಂಪೈರ್‌ಗಳು ಇರುವುದಿಲ್ಲ. ಅವರ ಬದಲಾಗಿ ಎಲೆಕ್ಟ್ರಾನಿಕ್ ಲೈನ್-ಕಾಲಿಂಗ್ ವ್ಯವಸ್ಥೆಯನ್ನು ಬಳಸಲಾಗುವುದು. ಆದರೆ ಟೂರ್ನಿಯ 2 ಪ್ರಮುಖ ಮತ್ತು ದೊಡ್ಡ ಕೋರ್ಟ್ ಅರೆನಾದಲ್ಲಿ ಮಾತ್ರ ಲೈನ್ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ ಪ್ರತಿ ಕೋರ್ಟ್‌ನಲ್ಲಿ 6ಕ್ಕೆ ಬದಲಾಗಿ 3 ಬಾಲ್ ಕಿಡ್‌ಗಳಷ್ಟೇ ಇರಲಿದ್ದಾರೆ. ಈ ಬಾರಿ ಮಿಶ್ರ ಡಬಲ್ಸ್, ಜೂನಿಯರ್ಸ್‌ ಮತ್ತು ವೀಲ್‌ಚೇರ್ ಸ್ಪರ್ಧೆಗಳು ಇರುವುದಿಲ್ಲ. ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಇರುವುದಿಲ್ಲ. ಡಬಲ್ಸ್‌ನಲ್ಲಿ 64ಕ್ಕೆ ಬದಲಾಗಿ 32 ಜೋಡಿಗಳಷ್ಟೇ ಡ್ರಾದಲ್ಲಿರುತ್ತವೆ. ಸಿಂಗಲ್ಸ್ ಆಟಗಾರರು ಡಬಲ್ಸ್ ಆಡುವಂತಿಲ್ಲ ಎಂಬುದನ್ನೂ ಸಂಘಟಕರು ಈಗಾಗಲೆ ತಿಳಿಸಿದ್ದಾರೆ. ಎಲ್ಲ ಆಟಗಾರರು ಆಡುವ ಮತ್ತು ಅಭ್ಯಾಸದ ಸಮಯ ಹೊರತಾಗಿ ಉಳಿದೆಲ್ಲ ಸಮಯದಲ್ಲಿ ಮಾಸ್ಕ್ ಧರಿಸಿರಬೇಕು.

    ಲಾಕ್‌ಡೌನ್‌ನಲ್ಲಿ ಲಯ ಕಳೆದುಕೊಂಡರೇ ರೊನಾಲ್ಡೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts