More

    ಸಮಾಜಮುಖಿ ಕಾರ್ಯಕ್ರಮಕ್ಕೆ ಮಹಿಳಾ ದಿನ ವೇದಿಕೆ

    ವಿಜಯವಾಣಿ ಸಹಯೋಗಲ್ಲಿ ವಿಶೇಷ ಕಾರ್ಯಕ್ರಮ

    ಅನಾಥ ಮಕ್ಕಳ ದತ್ತು ಸ್ವೀಕಾರ ಅರಿವು ಕಾರ್ಯಾಗಾರ


    ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
    ಮಕ್ಕಳ ದತ್ತು ಸ್ವೀಕಾರ ಉತ್ತೇಜನ ಕಾರ್ಯಕ್ರಮ, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಮರ, ಹೆಣ್ಣು ಮಕ್ಕಳ ದತ್ತು ಪಡೆದ ಪಾಲಕರಿಗೆ ಸನ್ಮಾನ, ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಹಿಳಾ ದಿನಾಚರಣೆ ಗಮನ ಸೆಳೆಯಿತು.
    ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಸಹಯೋಗದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
    ದತ್ತು ಸ್ವೀಕಾರ ವಿಶೇಷ:
    ಮಹಿಳಾ ದಿನಾಚರಣೆ ಅಂಗವಾಗಿ ವೇದಿಕೆ ಕಾರ್ಯಕ್ರಮದಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆ ಕುರಿತು ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ವಿವರವಾದ ಮಾಹಿತಿ ನೀಡಿದರು. ದತ್ತು ಸ್ವೀಕಾರ ಕುರಿತು ನೆರೆದಿದ್ದ ಸಾರ್ವಜನಿಕರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರಿಗೆ ಅರಿವು ಮೂಡಿಸಲಾಯಿತು. ಈ ಪ್ರಕ್ರಿಯೆಯಲ್ಲಿನ ಸಾಧಕ ಬಾಧಕಗಳೇನು, ಯಾರು ದತ್ತು ಪಡೆಯಲು ಅರ್ಹರು, ಈ ಪ್ರಕ್ರಿಯೆಗೆ ಅನುಸರಿಸಬೇಕಾದ ನಿಯಮಗಳೇನು ಎಂಬುದರ ಬಗ್ಗೆ ವಿಚಾರ ವಿನಿಮಯ ನಡೆಯಿತು. ಸಾರ್ವಜನಿಕರು ಈ ಪ್ರಕ್ರಿಯೆ ಕುರಿತ ಅನುಮಾನಗಳನ್ನು ಬಗೆಹರಿಸಿದ ಸಂಪನ್ಮೂಲ ವ್ಯಕ್ತಿಗಳು ದತ್ತು ಸ್ವೀಕಾರ ಉತ್ತೇಜನಕ್ಕೆ ಮನವಿ ಮಾಡಿದರು. ನಂತರದಲ್ಲಿ ಪಂಚಾಯಿತಿ ಆವರಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿನ ಗಣ್ಯರಿಗೆ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಾಯಿತು.
    ಜಾಗೃತಿ ಮೂಡಿಸಬೇಕಿದೆ:
    ದತ್ತು ಕಾರ್ಯಕ್ರಮಗಳ ಆಗುಹೋಗುಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುದ್ದಣ್ಣ ಹೇಳಿದರು. ಬಡತನ, ಅನಕ್ಷರತೆ, ಕೌಟುಂಬಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಪಾಲಕರು ಮಕ್ಕಳನ್ನು ಅನಾಥರನ್ನಾಗಿ ಮಾಡುವ ಸನ್ನಿವೇಶವನ್ನು ಸಮಾಜದಲ್ಲಿ ಕಾಣಬಹುದಾಗಿದೆ. ಇಂಥ ಅನಾಥಮಕ್ಕಳು ಸಿಕ್ಕಿದಾಗ ತಕ್ಷಣ ನಾವೇನು ಮಾಡಬೇಕು ಎಂಬುದರ ಬಗ್ಗೆ ನಮಗೇ ತಿಳಿದಿರುವುದಿಲ್ಲ. ಕೇವಲ ಕರುಣೆಯ ಮಾತನಾಡಿದರೆ ಪ್ರಯೋಜವಿಲ್ಲ. ಅಂಥ ಮಕ್ಕಳಿಗೆ ಆಸರೆ ನೀಡುವ ಕೆಲಸ ಮಾಡಬೇಕು. ಇದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕಾಗುತ್ತದೆ ಎಂದು ಹೇಳಿದರು. ಬೆಂಗಳೂರಿನಂತ ಮಹಾನಗರಗಳಲ್ಲಿ ಇತ್ತೀಚಿಗೆ ಗ್ರಾಮೀಣ ಪ್ರದೇಶಗಳಲ್ಲೂ ಅನಾಥ ಮಕ್ಕಳು ಪತ್ತೆಯಾದಂಥ ಪ್ರಕರಣಗಳನ್ನು ನಾವು ಕಾಣಬಹುದಾಗಿದ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅನಾಥ ಹೆಣ್ಣು ಶಿಶುಗಳು ಸಿಗುವುದು ಕಂಡುಬರುತ್ತಿದೆ. ಇಂಥ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆದರೆ ಇದನ್ನು ಕಾನೂನಾತ್ಮಕವಾಗಿ ಮಾಡಬೇಕಾಗುತ್ತದೆ ಎಂದರು.
    ಕಾರ್ಯಕ್ರಮ ಅರ್ಥಪೂರ್ಣಗೊಳಿಸಿ:
    ಕೇಂದ್ರ ಸರ್ಕಾರ ಕಾರ, ಸಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಈ ಬಗ್ಗೆ ಇಲಾಖೆ ಹೆಚ್ಚು ಪ್ರಚಾರ ಮಾಡುತ್ತಿದೆ, ಈ ಬಗ್ಗೆ ಇಂದಿನ ಕಾರ್ಯಕ್ರಮದಲ್ಲಿ ತಿಳಿದು ನಿಮ್ಮ ನೆರೆಹೊರೆಯವರಿಗೂ ಮಾಹಿತಿ ನೀಡಬೇಕು ಈ ಮೂಲಕ ಇಂಥ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಮುದ್ದಣ್ಣ ಮನವಿ ಮಾಡಿದರು.ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆದುಕೊಳ್ಳವ ಬಗ್ಗೆ ತಿಳಿಯಬೇಕಿದೆ. ಸಂಬಂಧಿಕರಲ್ಲೇ ಮಗು ದತ್ತು ಪಡೆದರೂ ಅದೂ ಕಾನೂನು ಬದ್ಧವಾಗಿರಬೇಕು. ಅಪರಿಚಿತ ಮಗುವನ್ನು ಕಾನೂನು ಬದ್ಧವಾಗಿ ಸಾಕಿದರೆ ತಪ್ಪಾಗುವುದಿಲ್ಲ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಮಗುವಿಗೂ ಕೂಡ ಉದ್ಯೋಗ ಮತ್ತು ಇತರೆಡೆ ಸಮಸ್ಯೆಯಾಗುತ್ತದೆ. ಮಾಹಿತಿ ನೀಡುವವರಿಗೆ ಯಾವುದೇ ಸಮಸ್ಯೆಯಾಗುವದಿಲ್ಲ. ಚೈಲ್ಡ್ಲೈನ್ ಅಥವಾ ದತ್ತುಪಡೆಯುವ ಕೇಂದ್ರಗಳಿಗೆ ಮಾಹಿತಿ ನೀಡಬೇಕು ಎಂದರು.
    ಹೆಣ್ಣು ಮಕ್ಕಳ ದತ್ತು ಸ್ವೀಕಾರಕ್ಕೆ ಬೇಡಿಕೆ:
    ಅನಾಥ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ಹೇಗೆ, ಅನುಸರಿಸಬೇಕಾದ ಮಾನದಂಡಗಳೇನು ಎಂಬುದರ ಬಗ್ಗೆ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಜಿಲ್ಲಾ ನಿರೂಪಣಾಧಿಕಾರಿ ಅನಿತಾಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ದತ್ತು ಸ್ವೀಕಾರ ಮಾಡುವ ಪಾಲಕರು ಹೆಣ್ಣು ಮಕ್ಕಳ ದತ್ತು ಪಡೆಯಲು ಹೆಚ್ಚು ಉತ್ಸುಕತೆ ತೋರಿಸುತ್ತಿದ್ದಾರೆ ಎಂದರು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದಾರೆ, ಎಲ್ಲ ಕ್ಷೇತ್ರಗಳಲ್ಲೂ ಸಾಧಕಿಯರಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೇ ವೇಳೆ ಬಾಲ್ಯವಿವಾಹ, ಹೆಣ್ಣು ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ, ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಿದರು.
    ಕುಟುಂಬಕ್ಕೆ ಮಗುವಲ್ಲ, ಮಗುವಿಗೆ ಕುಟುಂಬ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts