More

    ವಿಪತ್ತು ನಿರ್ವಹಣೆಗೆ ಮೊದಲ ಮಹಿಳಾ ತಂಡ; ದಾಖಲೆ ಬರೆದ ಸ್ತ್ರೀಯರು

    ನವದೆಹಲಿ: ವಿಪತ್ತು ನಿರ್ವಹಣೆಯಲ್ಲಿ ಪರಿಣತರಾದ 100ಕ್ಕೂ ಹೆಚ್ಚು ಮಹಿಳೆಯರು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್​ಡಿಆರ್​ಎಫ್)ಗೆ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ವಿಪತ್ತು ನಿರ್ವಹಣಾ ತಂಡದಲ್ಲಿ ಮಹಿಳಾ ಯೋಧರ ಸೇರ್ಪಡೆಯಾಗಿದ್ದು, ಎನ್​ಡಿಆರ್​ಎಫ್​ಗೆ ಸ್ತ್ರೀ ಶಕ್ತಿಯ ಬಲ ಸಿಕ್ಕಂತಾಗಿದೆ.

    ಇತ್ತೀಚೆಗೆ ಹೊಸದಾಗಿ ನೇಮಕವಾಗಿದ್ದ ಮಹಿಳೆಯರ ತಂಡವನ್ನು ಉತ್ತರ ಪ್ರದೇಶ ಗಢಮುಕ್ತೇಶ್ವರ ಪಟ್ಟಣದ ಗಂಗಾ ನದಿ ತಟದಲ್ಲಿ ಕರ್ತವ್ಯ ನಿರ್ವಹಣೆಗಾಗಿ ನಿಯೋಜಿಸಲಾಗಿತ್ತು. ರಕ್ಷಣಾ ಬೋಟ್ ಮತ್ತು ಸಂಬಂಧಿತ ಉಪಕರಣಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ತಮ್ಮ ಕರ್ತವ್ಯವನ್ನು ಆ ತಂಡದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಎನ್​ಡಿಆರ್​ಎಫ್ ಮಹಾ ನಿರ್ದೇಶಕ ಎಸ್.ಎನ್. ಪ್ರಧಾನ್ ತಿಳಿಸಿದ್ದಾರೆ.

    ಎನ್​ಡಿಆರ್​ಎಫ್ ಆರಂಭವಾದಾಗಿನಿಂದ ಇಂದಿನ ತನಕವೂ ಪುರುಷರೇ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲವು ತಿಂಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಪರಿಣತ ಮಹಿಳೆಯರ ಸೇರ್ಪಡೆಯಾಗಿದ್ದಾರೆ. ಸದ್ಯದಲ್ಲೇ ಮಹಿಳೆಯರ ಸಂಖ್ಯೆ 200ಕ್ಕೂ ಹೆಚ್ಚಾಗಲಿದೆ. ಸದ್ಯ ಮಹಿಳಾ ಪರಿಣತರನ್ನು ಕಾನ್​ಸ್ಟೆಬಲ್ ಮತ್ತು ಸಬ್ ಇನ್​ಸ್ಪೆಕ್ಟರ್, ಇನ್​ಸ್ಪೆಕ್ಟರ್ ದರ್ಜೆಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎನ್​ಡಿಆರ್​ಎಫ್ ಬೆಟಾಲಿಯನ್​ನಲ್ಲಿರುವ 1,000 ಸಿಬ್ಬಂದಿ ಪೈಕಿ 108 ಮಹಿಳೆಯರು ಇರಲಿದ್ದಾರೆ. ಪ್ರಸ್ತುತ ದೇಶಾದ್ಯಂತ ಎನ್​ಡಿಆರ್​ಎಫ್​ನ 12 ಬೆಟಾಲಿಯನ್​ಗಳು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿವೆ.

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts