More

    ಮಹಿಳಾ ಸ್ವಾವಲಂಬನೆಗೆ ಮುನ್ನುಡಿ

    -ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ವಿಶ್ವಾದ್ಯಂತ ಭಾರಿ ಬೇಡಿಕೆ ಇರುವ ಉಡುಪಿ ಕೈಮಗ್ಗದ ಸೀರೆ ಅಳಿವಿನ ಅಂಚಿನಲ್ಲಿರುವುದನ್ನು ಮನಗಂಡು ಉಡುಪಿ ಜಿಲ್ಲಾಡಳಿತ ಎನ್‌ಆರ್‌ಎಲ್‌ಎಂ(ನ್ಯಾಷನಲ್ ರೂರಲ್ ಲೈವಲೀಹುಡ್ ಮಿಷನ್) ಯೋಜನೆಯಲ್ಲಿ ಮಣಿಪಾಲದಲ್ಲಿ 25 ಮಂದಿ ಮಹಿಳೆಯರಿಗೆ ಕೈಮಗ್ಗದ ಸೀರೆ ನೇಯ್ಗೆ ತರಬೇತಿ ನೀಡುತ್ತಿದೆ.

    ಉಡುಪಿಯಲ್ಲಿ ಕೆಲವು ದಶಕಗಳ ಹಿಂದೆ ಒಂದು ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಇದ್ದು ಸಹಸ್ರಾರು ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಸ್ವ ಉದ್ಯೋಗದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿಗಾರ್ ಇಂದ್ರಾಳಿಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ತರಬೇತಿ ಸಂಸ್ಥೆಯಲ್ಲಿ 50 ವರ್ಷದಿಂದ ನಾನಾ ರಾಜ್ಯದಲ್ಲಿ ತರಬೇತಿ ನೀಡಿದ ಕೇರಳದ ಚಂದ್ರನ್ 5 ಕೈ ಮಗ್ಗದಲ್ಲಿ ಸಾಂಪ್ರದಾಯಿಕ ಸೀರೆ ನೇಯ್ಗೆ ತರಬೇತಿ ನೀಡುತ್ತಿದ್ದಾರೆ.

    ಹಲವಾರು ಬಣ್ಣದಲ್ಲಿ ತಯಾರಾಗುವ 4 ಮೀಟರ್ ಅಗಲ, 6.5 ಮೀಟರ್ ಉದ್ದದಸೀರೆ ನೇಯ್ಗೆಯವರಿಗೆ 4 ತಿಂಗಳ ತರಬೇತಿಗೆ ಶಿಷ್ಯ ವೇತನ, ಪ್ರಯಾಣ ಭತ್ಯೆ, ಊಟ ಉಪಾಹಾರ ನೀಡಲಾಗುತ್ತದೆ. ತರಬೇತಿ ಹೊಂದಿದ ನಂತರ ಮನೆಯಲ್ಲಿ 12-10 ಅಡಿ ಜಾಗ ಇದ್ದವರು ಮನೆಯಲ್ಲಿ ಮಗ್ಗವನ್ನು ಇರಿಸಿ ಮನೆಯಲ್ಲಿ ಸೀರೆ ನೇಯ್ಗೆ ಮಾಡಲು ಸಂಘ ಅವಕಾಶ ಕಲ್ಪಿಸಲಿದೆ. ಮನೆಯಲ್ಲಿ ಮಾಡಲು ಅವಕಾಶ ಇಲ್ಲದವರಿಗೆ ಉಡುಪಿಯಲ್ಲಿ ಹಲವಾರು ಮಗ್ಗವನ್ನು ಇರಿಸಿ ಪ್ರತ್ಯೇಕ ಕೇಂದ್ರ ಮಾಡುವ ಯೋಜನೆ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ್ದು.

    ಬಹು ಬೇಡಿಕೆಯ ಉಡುಪಿ ಸೀರೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚು ತಯಾರು ಮಾಡಲು ನಿರಂತರವಾಗಿ ಇಲ್ಲಿ ತರಬೇತಿ ನೀಡಿ ಸಹಕಾರಿ ತತ್ವದಡಿ ನೂರಾರು ಮಂದಿಗೆ ಉದ್ಯೋಗದ ಜತೆ ಪರಂಪರಾಗತ ಕಲೆ ಮತ್ತು ವೃತ್ತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸುವ ಕಾರ್ಯ ಉಡುಪಿಯಲ್ಲಿ ಆಗುತ್ತಿದೆ.

    ಭಾರತದಲ್ಲಿ ಹಲವಾರು ಪರಂಪರಾಗತ ಕಲೆ ಮತ್ತು ವೃತ್ತಿ ಅವಸಾನದ ಅಂಚಿನಲ್ಲಿವೆ. ಅವುಗಳನ್ನು ಉಳಿಸಿ, ಬೆಳೆಸುವ ಪ್ರಯತ್ನ ನಮ್ಮ ಸಂಘದ್ದು. ಉಡುಪಿ ಮಗ್ಗದ ಸೀರೆಗೆ ವಿಶ್ವಾದ್ಯಂತ ಖ್ಯಾತಿ, ಬೇಡಿಕೆ ಇದೆ.

    -ರತ್ನಾಕರ ಶೆಟ್ಟಿಗಾರ್ ಇಂದ್ರಾಳಿ, ಅಧ್ಯಕ್ಷರು, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts