More

    ಆಸ್ಪತ್ರೆಗೆ ಸೇರಿಸಿಕೊಳ್ಳದ ವೈದ್ಯರು; ಚಿಕಿತ್ಸೆ ಸಿಗದೆ ಯುವತಿ ಸಾವು

    ಡೆಹ್ರಾಡೂನ್: ವೈದ್ಯಕೀಯ ನಿರ್ಲಕ್ಷ್ಯದಿಂದಾದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ, 24 ವರ್ಷದ ಗರ್ಭಿಣಿಯೊಬ್ಬಳು COVID-19 ಸೋಂಕಿಗೆ ಒಳಗಾಗಿರಬಹುದೆಂದು ಶಂಕಿಸಿ ಆಸ್ಪತ್ರೆಗಳು ಆಕೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ಆಕೆ ಹೆರಿಗೆ ನಂತರ ಸಾವೀಗೀಡಾಗಿದ್ದಾಳೆ.
    ಸುಧಾ ಸಾವಿಗೀಡಾದ ದುರ್ದೈವಿ. ಸೋಮವಾರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಆಕೆಯ ಪತಿ ಕಮಲೇಶ್ ಸೈನಿ ಹೇಳಿದ್ದಾರೆ.
    ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಆಕೆಗೆ ಎರಡು ತಿಂಗಳ ನಂತರ ಬರಬೇಕೆಂದು ಆಸ್ಪತ್ರೆಯೊಂದು ತಿಳಿಸಿತ್ತು. ಒಂದೆರಡು ಆಸ್ಪತ್ರೆಗೆ ಎಡತಾಕಿದರೂ ಅನಗತ್ಯ ಓಡಾಟವಾಯಿತೇ ಹೊರತು ಅದರಿಂದ ಪ್ರಯೋಜನವಾಗಲಿಲ್ಲ.

    ಇದನ್ನೂ ಓದಿ: ‘ನೆಟ್ಟಿ’ಗರ ದೃಷ್ಟಿಯಲ್ಲಿ ಇವರು ‘ಸೂಪರ್​​ ದಾದಿ’; 84ರ ಹರೆಯದಲ್ಲೂ ಈ ಅಜ್ಜಿ ಮಾಡಿದ್ದೇನು ಗೊತ್ತಾ?

    ಏತನ್ಮಧ್ಯೆ ಸ್ಥಳೀಯ ಶಾಸಕರ ಮಧ್ಯಸ್ಥಿಕೆಯ ನಂತರ ಕೊನೆಗೆ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗರ್ಭಧಾರಣೆಯ 7 ನೇ ತಿಂಗಳಲ್ಲಿ ಎರಡು ಶಿಶುಗಳಿಗೆ ಅಕಾಲಿಕ ಜನ್ಮ ನೀಡಿದ ನಂತರ ಆಕೆ ಗುರುವಾರ ನಿಧನರಾದರು.
    ಮಹಿಳೆಯ ಸಾವಿನ ಕುರಿತು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಚಾರಣೆಗೆ ಆದೇಶಿಸಿದ್ದಾರೆ.
    “ನಾನು ಅವಳನ್ನು ಆಸ್ಪತ್ರೆಗೆ ಕರೆದೊಯ್ದಾಗ, ಅವಳು 9 ತಿಂಗಳ ಗರ್ಭಧಾರಣೆಯನ್ನು ಪೂರ್ಣಗೊಳಿಸಿದ ನಂತರ ಬರಲು ವೈದ್ಯರು ಹೇಳಿದರು. ಆಕೆ ರಕ್ತಹೀನತೆಯಿಂದ ಬಳಲುತ್ತಿದ್ದು, ರಕ್ತವನ್ನು ನೀಡಬೇಕು ಎಂದು ಅವರು ಹೇಳಿದರು. ವೈದ್ಯರು ಅವಳನ್ನು ಸರಿಯಾಗಿ ಪರೀಕ್ಷಿಸಲಿಲ್ಲ” ಎಂದು ಸೈನಿ ಆರೋಪಿಸಿದ್ದಾರೆ.

    ಇದನ್ನೂ ಓದಿ: ರೈತರು ಬೇಕಾಗಿದ್ದಾರಂತೆ…!

    ಸುಧಾಗೆ ಆಸ್ಪತ್ರೆಯಲ್ಲಿ ಪ್ರವೇಶವನ್ನು ನಿರಾಕರಿಸಿದ ನಂತರ, ಗಂಟೆಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಹೆರಿಗೆಯ ನಂತರ, ಅವಳ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಕಮಲೇಶ್ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುತ್ತಿದ್ದಂತೆ, ಸುಧಾಗೆ ದೈಹಿಕ ತಾಪಮಾನ ಹೆಚ್ಚಿರುವುದರಿಂದ ಆಕೆಗೆ ಪ್ರವೇಶ ನಿರಾಕರಿಸಲಾಯಿತು.

    ಸುಧಾಳನ್ನು ಎರಡು ಸರ್ಕಾರಿ ಆಸ್ಪತ್ರೆಗಳು ಮತ್ತು ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ಆದರೆ ಅವರೆಲ್ಲರೂ ಅವಳು COVID-19 ರೋಗಿಯಾಗಬಹುದೆಂದು ಹೇಳಿ ಪ್ರವೇಶ ನಿರಾಕರಿಸಿದರು.

    ಇದನ್ನೂ ಓದಿ: ರಾತ್ರಿ ಕರ್ಫ್ಯೂ ವೇಳೆ ಅಂತಾರಾಜ್ಯ ಬಸ್ ಸಂಚಾರ ತಡೆಯದಂತೆ ಕೇಂದ್ರ ಸೂಚನೆ

    ಅಂತಿಮವಾಗಿ, ಸುಧಾ ಕುಟುಂಬವು ಗುರುವಾರ ಕಂಟೋನ್ಮೆಂಟ್ ಶಾಸಕ ಹರ್ಬನ್ಸ್ ಕಪೂರ್ ಅವರನ್ನು ಸಂಪರ್ಕಿಸಲು ಯಶಸ್ವಿಯಾದಾಗ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
    ರೋಗಿಯೊಬ್ಬರು ಗಂಭೀರವಾಗಿದ್ದಾಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವೇಶವನ್ನು ನಿರಾಕರಿಸುವುದು ಹೇಗೆ ಎಂದು ಡೆಹ್ರಾಡೂನ್ ಮುಖ್ಯ ವೈದ್ಯಾಧಿಕಾರಿ ಡಿ ಸಿ ರಾಮೋಲಾ ಪ್ರಶ್ನಿಸಿದ್ದಾರೆ. ಘಟನೆ ಕುರಿತು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts