More

    ಗಂಗೆಯಲ್ಲಿ 12 ಗಂಟೆಗಳ ಕಾಲ ತೇಲುತ್ತಲೇ ಇದ್ದ ಮಹಿಳೆ! 10 ಕಿ.ಮೀ ತೇಲಿ ಬಂದ ಮಹಿಳೆಯನ್ನು ರಕ್ಷಿಸಿದ ಮೀನುಗಾರರು

    ಪಟನಾ: ಗಂಗಾ ನದಿಗೆ ಬಿದ್ದ ಮಹಿಳೆಯೊಬ್ಬಳು 12 ಗಂಟೆಗಳ ಕಾಲ ನೀರಿನಲ್ಲೇ ಇದ್ದು, ನಂತರ ಮೀನುಗಾರರಿಂದ ರಕ್ಷಿಸಲ್ಪಟ್ಟ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ನೀರಿಗೆ ಬಿದ್ದ ಸ್ಥಳದಿಂದ ಸುಮಾರು 10 ಕಿ.ಮೀ ದೂರದಲ್ಲಿ ಆಕೆ ಪತ್ತೆಯಾಗಿದ್ದಾಳೆ.

    ಇದನ್ನೂ ಓದಿ: ಶ್ರೀನಗರದಲ್ಲೂ ಅರಳಿತು ಕಮಲ! ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಮೊದಲ ಜಯ ದಾಖಲಿಸಿದ ಬಿಜೆಪಿ!

    ಗಂಗೆಯಲ್ಲಿ 12 ಗಂಟೆಗಳ ಕಾಲ ತೇಲುತ್ತಲೇ ಇದ್ದ ಮಹಿಳೆ! 10 ಕಿ.ಮೀ ತೇಲಿ ಬಂದ ಮಹಿಳೆಯನ್ನು ರಕ್ಷಿಸಿದ ಮೀನುಗಾರರುರಾಘೋಪುರದ ದಿಯಾರಾ ಮೂಲದ ಮಹಿಳೆ ಅನಿತಾ ದೇವಿ ಇತ್ತೀಚೆಗೆ ಗಂಗಾ ನದಿಯ ಪಿಪಾ ಸೇತುವೆ ಮೂಲಕ ಹಾದುಹೋಗುತ್ತಿದ್ದಳು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಕೆಗೆ ಸೇತುವೆ ಮೇಲಿದ್ದಾಗ ತಲೆ ತಿರುಗಿಂದತಾಗಿದೆ. ಆಟೋ ನಿಲ್ಲಿಸಿ, ಸೇತುವೆಯ ಕಂಬಗಳಿಗೆ ಒರಗಿದ್ದಾಳೆ. ಅದೇ ಸಮಯದಲ್ಲಿ ಆಕೆಯ ಕಾಉ ಜಾರಿದ್ದು, ಸೀದಾ ಗಂಗಾ ನದಿಯ ಒಳಗೆ ಬಿದ್ದಿದ್ದಾಳೆ.

    ಇದನ್ನೂ ಓದಿ: ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ… 30 ಗಂಟೆಯ ‘ಪವಾಡ’: ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!

    ಮಹಿಳೆ ನದಿಗೆ ಬಿದ್ದ ಮಾರನೇ ದಿನ ರಾಘೋಪುರ ಪಿಪಾ ಸೇತುವೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಮೀನುಗಾರರು ಮೀನು ಹಿಡಿಯಲು ಸಜ್ಜಾಗುತ್ತಿರುವಾಗ, ಏನೋ ನದಿಯಲ್ಲಿ ತೇಲಿಕೊಂಡು ಬರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು, ತೇಲಿಬರುತ್ತಿದ್ದುದ್ದರ ಹತ್ತಿರ ಹೋಗಿದ್ದಾರೆ. ಆಗ ಅದು ಮಹಿಳೆಯ ದೇಹ ಎನ್ನುವುದು ತಿಳಿದುಬಂದಿದೆ. ತಕ್ಷಣ ದೇಹವನ್ನು ದಡಕ್ಕೆ ಎಳೆದುತರಲಾಗಿದೆ. ಬರೋಬ್ಬರಿ 12 ಗಂಟೆಗಳ ಕಾಲ ತಣ್ಣನೆ ನೀರಲಿದ್ದರೂ ಮಹಿಳೆಯಿನ್ನೂ ಉಸಿರಾಡುತ್ತಲೇ ಇದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್​)

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts