More

    ದುಡ್ಡಿಗಾಗೇ ಸತ್ತಳು; ಸತ್ತ ಮೇಲೆ ಪ್ರಯಾಣಿಸಿದ್ದು ಐದು ದೇಶಕ್ಕೆ! ಅಂತೂ ಬಯಲಾಯಿತು ಭೂತದ ರಹಸ್ಯ

    ಇಸ್ಲಾಮಾಬಾದ್​: ದುಡ್ಡಿಗಾಗಿ ಏನು ಬೇಕಾದರೂ ಮಾಡುವ ಜನರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ದುಡ್ಡಿಗಾಗಿ ಸತ್ತೇ ಹೋಗಿದ್ದಾಳೆ. ಹಾಗೆ ಸತ್ತ ಅವಳು ಸತ್ತ ಮೇಲೆ ಐದು ದೇಶಗಳಿಗೆ 10 ಬಾರಿ ಪ್ರಯಾಣ ಬೆಳೆಸಿದ್ದಾಳೆ. ಸತ್ತವರು ಪ್ರಯಾಣಿಸುವುದು ಹೇಗೆ? ಭೂತವಾಗಿ ಪ್ರಯಾಣಿಸಿದಳಾ? ಎನ್ನುವುದಕ್ಕೆ ಇಲ್ಲಿದೆ ರೋಚಕ ಕಥೆ.

    ಇದನ್ನೂ ಓದಿ: ಪತ್ರಕರ್ತನಿಗೆ ಗಾಯ: ಬಂದ್ ನಿಂದ ಹಿಂದೆ ಸರಿದ ಕರವೇ ಕಾರ್ಯಕರ್ತರು

    ಆಕೆ ಪಾಕಿಸ್ತಾನ ಮೂಲದ ಮಹಿಳೆ. ಹೆಸರು ಸೀಮಾ ಖಾರ್ಬೆ. ವಿದೇಶಿ ಸಹವಾಸ ಹೊಂದಿದ್ದ ಆಕೆ 2011ರಲ್ಲಿಯೇ ಸತ್ತಿದ್ದಾಳೆ. ಹಾಗಂತ ಡೆತ್​ ಸರ್ಟಿಫಿಕೇಟ್​ ಪ್ರಿಂಟ್​ ಆಗಿದೆ. ಆಕೆಯನ್ನು ಅಂತ್ಯ ಸಂಸ್ಕಾರ ಮಾಡಿರುವುದಾಗಿಯೂ ವರದಿಯಾಗಿದೆ. ಆಕೆಯ ಡೆತ್​ ಸರ್ಟಿಫಿಕೇಟ್​ ಮುಂದಿಟ್ಟುಕೊಂಡು ಮಕ್ಕಳು 11 ಕೋಟಿ ರೂಪಾಯಿ ಇನ್ಶುರೆನ್ಸ್​ ಹಣವನ್ನೂ ಪಡೆದುಕೊಂಡಿದ್ದಾರೆ.

    ಹೀಗೆ ಸತ್ತ ಮಹಿಳೆಯ ಬಗ್ಗೆ ಅಮೆರಿಕ ಇತ್ತೀಚೆಗೆ ಪಾಕಿಸ್ತಾನಕ್ಕೆ ದೂರು ನೀಡಿದೆ. ಈಗಾಗಲೇ ಸತ್ತಿದ್ದಾಳೆ ಎಂದು ದೃಢೀಕರಣವಾಗಿರುವ ಮಹಿಳೆ ನಮ್ಮ ದೇಶಕ್ಕೆ ಬಂದಿದ್ದಾಳೆ ಎಂದು ಅಮೆರಿಕ ದೂರಿನಲ್ಲಿ ಹೇಳಿದೆ. ಬಳಿಕ ಈ ವಿಚಾರವಾಗಿ ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ.

    ಇದನ್ನೂ ಓದಿ: ದೇವೇಗೌಡರ ಎಮೋಷನಲ್, ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್​ ಟ್ರ್ಯಾಪ್​ನಿಂದ ನಮ್ಮ ಶಕ್ತಿ ಕುಂದಿತು: ಎಚ್​ಡಿಕೆ

    2011ರಲ್ಲಿ ಮಹಿಳೆ ಸತ್ತೇ ಇರಲಿಲ್ಲ. ಹಣದ ಆಸೆಗಾಗಿ ಆಕೆಯೇ ಕೆಲವು ಅಧಿಕಾರಿಗಳು ಮತ್ತು ವೈದ್ಯರನ್ನು ಹಿಡಿದು ಮರಣ ಪ್ರಮಾಣ ಮಾಡಿಸಿಕೊಂಡಿದ್ದಾಳೆ. ಅಮ್ಮ ಸತ್ತಿದ್ದಾಳೆಂದು ಹೇಳಿ ಮಕ್ಕಳಿಗೆ ಇನ್ಶುರೆನ್ಸ್​ ಹಣ ಬರುವಂತೆ ಮಾಡಿದ್ದಾಳೆ. ಜೀವವಿಮೆ ಸಂಸ್ಥೆಗೆ ಬರೋಬ್ಬರಿ 11 ಕೋಟಿ ರೂಪಾಯಿ ಮೋಸ ಮಾಡಿದ್ದಾಳೆ. (ಏಜೆನ್ಸೀಸ್​)

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts