More

    ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುವುದೆಂದರೆ ಇದೇ ಇರಬಹುದೆ?

    ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ 21 ವರ್ಷದ ಯುವತಿಯೊಂದಿಗೆ ಅಪ್ರಾಪ್ತ ವಯಸ್ಸಿನ ಯುವಕನ ವಿವಾಹವನ್ನು ನಿಶ್ಚಯಿಸಿದ ಆರೋಪದ ಮೇಲೆ ಗುರುದ್ವಾರ ಅರ್ಚಕ ಮತ್ತು ಇತರ ಇಬ್ಬರ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎಫ್‌ಐಆರ್ ಆದೇಶಿಸಿದೆ.
    ಇಂದಿರಾ ಕಾಲೋನಿ ನಿವಾಸಿ 19 ವರ್ಷದ ಯುವಕ ಕೆಲವು ತಿಂಗಳ ಹಿಂದೆ ಬಟಾಲಾ ನಿವಾಸಿಯಾಗಿರುವ ಯುವತಿಯನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದ. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು.

    ಇದನ್ನೂ ಓದಿ:  VIDEO| ಆಕಾಶದಿಂದ ವ್ಯಕ್ತಿಯ ತಲೆಯ ಮೇಲೆ ಬಿದ್ದ ಬೆಕ್ಕು: ಮುಂದೇನಾಯ್ತು ನೀವೇ ನೋಡಿ…!

    ಆದರೆ ಜಾತಿ ಭಿನ್ನತೆಯಿಂದಾಗಿ ಅವರ ಪೋಷಕರು ಮದುವೆಯಾಗಲು ಅವಕಾಶ ನೀಡದ ಕಾರಣ ಪ್ರೇಮಿಗಳಿಬ್ಬರೂ ಓಡಿಹೋಗಲು ನಿರ್ಧರಿಸಿದರು. ಜುಲೈ 23 ರಂದು ಅವರು ಗುರುದ್ವಾರ ಗುರು ತೇಜ್ ಬಹದ್ದೂರ್ ಷಾ ಸಾಹಿಬ್‌ ದೇವಸ್ಥಾನಕ್ಕೆ ಹೋದರು. ಅಲ್ಲಿ ಅರ್ಚಕ ಇಂದರ್ಜಿತ್ ಸಿಂಗ್, ಹೈಬೋವಾಲ್ ನಿವಾಸಿಗಳಾದ ರಾಜಿಂದರ್ ಕುಮಾರ್ ಮತ್ತು ಬಿಟ್ಟು ಕುಮಾರ್ ಎಂಬ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವಿವಾಹ ನೆರವೇರಿಸಿದರು.

    ಇದನ್ನೂ ಓದಿ:  ಕಮಲಾಗಿಂತ ಅರ್ಹ ಭಾರತೀಯರನ್ನು ಆಯ್ಕೆ ಮಾಡಬಹುದ್ದಿತ್ತು ಎಂದ ಟ್ರಂಪ್​

    ಮದುವೆಯ ನಂತರ, ಮಹಿಳೆ ತನಗೂ ತನ್ನ ಗಂಡನಿಗೂ ರಕ್ಷಣೆ ಕೋರಿ ಹೈಕೋರ್ಟ್‌ಗೆ ಸಂಪರ್ಕಿಸಿದಳು. ಆದರೆ, ಒಬ್ಬ ಹುಡುಗನ ವಿವಾಹಕ್ಕೆ ಕಾನೂನುಬದ್ಧ ವಯಸ್ಸು 21 ವರ್ಷಗಳು ಆದ್ದರಿಂದ ಈಗ ಮದುವೆಯಾದ ಯುವಕ 19 ವರ್ಷದವನಾಗಿರುವುದರಿಂದ ಅವರಿಬ್ಬರ ವಿವಾಹ ನೆರವೇರಿಸಿದವರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದರು.
    ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪೊಲೀಸರು ಅರ್ಚಕ ಹಾಗೂ ಇಬ್ಬರು ಸಾಕ್ಷಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ : ಚಂದ್ರನಂಗಳದ ಕುಳಿಗೆ ಸಾರಾಭಾಯ್ ಹೆಸರು

    ಪ್ರಸ್ತುತ, ಮಹಿಳೆಯರಿಗೆ ಮದುವೆಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಪುರುಷರಿಗೆ 21 ಆಗಿದೆ. ಮಹಿಳೆಯರಿಗೆ ಕನಿಷ್ಠ ಮದುವೆಯ ವಯಸ್ಸನ್ನು ಮರುಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು ವರದಿ ಸಲ್ಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದಾರೆ.
    “ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ವಯಸ್ಸನ್ನು ಮರುಪರಿಶೀಲಿಸಲು ನಾವು ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯು ವರದಿ ಸಲ್ಲಿಸಿದ ನಂತರ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಅವರು ರಾಷ್ಟ್ರವನ್ನು ಉದ್ದೇಶಿಸಿ ಹೇಳಿದ್ದಾರೆ.

    ಬಾಲಕಿಯ ರೇಪ್​ ಮಾಡಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ, ಉಸಿರುಗಟ್ಟಿಸಿ ಕೊಲೆಗೈದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts