More

    ಕಮಲಾಗಿಂತ ಅರ್ಹ ಭಾರತೀಯರನ್ನು ಆಯ್ಕೆ ಮಾಡಬಹುದ್ದಿತ್ತು ಎಂದ ಟ್ರಂಪ್​

    ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿಯನ್ನು ಟ್ರಂಪ್ ಮುಂದುವರಿಸಿದ್ದಾರೆ. ಕಮಲಾರಿಗಿಂತ ಅರ್ಹ ಭಾರತೀಯರನ್ನು ಡೆಮಾಕ್ರಟಿಕ್ ಪಕ್ಷ ಆಯ್ಕೆ ಮಾಡಬಹುದ್ದಿತ್ತು. ಆ ಪಕ್ಷ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್​ಗಿಂತ ಕಮಲಾ ಹೆಚ್ಚು ಕೆಟ್ಟವರು. ಆಕೆಗಿಂತಲೂ ಹೆಚ್ಚು ಭಾರತೀಯರ ಬೆಂಬಲ ನನಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

    ಜೋ ಬಿಡೆನ್ ಒಬ್ಬ ಚೆಲ್ಲಾಟದ ಚೆಲುವೆಯನ್ನು (ಪೊಕಾಹೊಂಟಾಸ್) ಆಯ್ಕೆ ಮಾಡಿರಬಹುದೆಂದು ಭಾವಿಸುತ್ತೇನೆ ಎಂದೂ ಪ್ರತಿಕ್ರಿಯಿಸಿದ್ದಾರೆ. ಆಕೆ ಬಿಡೆನ್​ರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದೂ ಹಲವು ಚರ್ಚೆಗಳನ್ನು ಉಲ್ಲೇಖಿಸಿ ಟ್ರಂಪ್ ಟೀಕಿಸಿದ್ದಾರೆ.

    ಇದನ್ನೂ ಓದಿ: ಮನೆಯ ನಾಲ್ಕು ಕಡೆ ನಾಲ್ಕು ಶವಗಳು; ನಿಧಿಗಾಗಿ ಹಿತ್ತಲಿನಲ್ಲಿ ನಡೆಸಿದ್ದರಾ ಕ್ಷುದ್ರಪೂಜೆ?

    ತಮಿಳುನಾಡು ಗ್ರಾಮಕ್ಕೆ ಜಾಗತಿಕ ಪ್ರಚಾರ: ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದರಿಂದ ಅವರ ಪೂರ್ವಜರ ವಾಸವಿದ್ದ ತಮಿಳುನಾಡಿನ ಕುಗ್ರಾಮ ಈಗ ಜಾಗತಿಕವಾಗಿ ಪ್ರಚಾರವಾಗುತ್ತಿದೆ.
    ತಿರುವರೂರ್ ಜಿಲ್ಲೆಯ ಮನ್ನಾರ್​ಗುಡಿ ಸಮೀಪದ ಪೈಂಗನಾಡು ಕಮಲಾರ ಅಜ್ಜನ ಊರು. ಕಾವೇರಿ ನದಿ ಮುಖಜ ಭೂಮಿಯಲ್ಲಿರುವ ಇದು ಕೃಷಿ ಪ್ರಧಾನ ಹಳ್ಳಿ, ಕಮಲಾರ ತಾಯಿ ಶ್ಯಾಮಲಾರ ತಂದೆ ಪಿ.ವಿ.ಗೋಪಾಲನ್​ರ ಹಿರಿಯ ಅಧಿಕಾರಿಯಾಗಿದ್ದರು. ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕರಾಗಿ ಗುರುತಿಸಿಕೊಂಡಿದ್ದರು. ಕಮಲಾರ ಪೂರ್ವಜರು ಈ ಗ್ರಾಮವನ್ನು ತೊರೆದರೂ ಗ್ರಾಮದ ದೇವಸ್ಥಾನದೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದರು.

    ಕಮಲಾರ ಹೆಸರಿನಲ್ಲಿ ದೇವಾಲಯಕ್ಕೆ 2014ರಲ್ಲಿ ದೇಣಿಗೆ ಕೂಡ ನೀಡಿದ್ದರು. ತಮ್ಮ ಊರಿನ ಹೆಮ್ಮೆಯ ಪುತ್ರಿಯ ವಿಜಯ ಹಾರೈಸಿ ಗ್ರಾಮಸ್ಥರು ಡಿಜಿಟಲ್ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದಾರೆ. (ಏಜೆನ್ಸೀಸ್)

    VIDEO|ಥಾರ್ ಹೊಸ ಅವತಾರ:​ ಅಕ್ಟೋಬರ್ 2ರಂದು ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts