More

    ಅಮೆರಿಕಕ್ಕೆ ಹೊಸ ಬದುಕು ಕೊಟ್ಟಿದ್ದೀರಿ ನೀವು- ದೇಶವನ್ನು ಉದ್ದೇಶಿಸಿ ಕಮಲಾ ಮಾತು

    ವಾಷಿಂಗ್ಟನ್​: ಅಧ್ಯಕ್ಷೀಯ ಚುನಾವಣೆ ವೇಳೆ ಮತಪತ್ರಗಳು ಬ್ಯಾಲೆಟ್ ಬಾಕ್ಸ್ ಸೇರಿದಾಗ ಪ್ರತಿಯೊಬ್ಬ ಅಮೆರಿಕನ್ನರ ಆತ್ಮವೂ ಪಣಕ್ಕಿಟ್ಟಂತೆ ಇತ್ತು. ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿತ್ತು. ಅಮೆರಿಕಕ್ಕೆ ಹೊಸ ಜನ್ಮವನ್ನೇ ಕೊಟ್ಟಿದ್ದೀರಿ ನೀವು ಎಂದು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರು ದೇಶವನ್ನು ಉದ್ದೇಶಿಸಿದ ಮೊದಲ ಭಾಷಣದಲ್ಲಿ ಹೇಳಿದರು.

    ಉನ್ನತ ಸ್ಥಾನದ ಹೊಣೆಗಾರಿಕೆ ನಿಭಾಯಿಸಲು ಜನರು ನೀಡಿದ ಜನಾದೇಶ ಕೇವಲ ಆರಂಭವಷ್ಟೇ. ಅಮೆರಿಕದ ಅಧ್ಯಕ್ಷೀಯ ಕಚೇರಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ನಾನಾಗಿರಬಹುದು. ಆದರೆ, ನಾನೇ ಕೊನೆಯವಳಲ್ಲ. ಮುಂದೆಯೂ ಮಹಿಳೆಯರ ಆಯ್ಕೆ ಆಗಬಹುದು. ಈ ದೇಶದಲ್ಲಿನ ಅವಕಾಶಗಳ ಕುರಿತು ಈ ಕಾರ್ಯಕ್ರಮ ನೋಡುತ್ತಿರುವ ಪುಟ್ಟ ಹುಡುಗಿಗೂ ಮನದಟ್ಟಾಗಿಬಿಡುತ್ತದೆ. ಹೊಸ ಕನಸುಗಳು ಅವರಲ್ಲೂ ಮೊಳೆತು ಪ್ರೇರಣಾದಾಯಿ ಆಗಬಹುದು.

    ಇದನ್ನೂ ಓದಿ: ಅಮೆರಿಕವನ್ನು ವಿಶ್ವ ಮತ್ತೆ ಗೌರವಿಸುವಂತೆ ಮಾಡುವೆ – ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಮೊದಲ ಮಾತು

    ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಾಗ, ಮತ ಎಣಿಕೆ ಮುಂದುವರಿಯುತ್ತಿರುವಾಗ ಇಡೀ ವಿಶ್ವ ಕುತೂಹಲದಿಂದ ನಿರೀಕ್ಷಿಸುತ್ತಾ ಇತ್ತು. ಅಮೆರಿಕದ ಪ್ರತಿಯೊಬ್ಬ ಪ್ರಜೆಯ ಆತ್ಮ ಪಣಕ್ಕೆ ಇಟ್ಟಂತೆ ಭಾಸವಾಗಿತ್ತು. ಅದೀಗ ನಿರಾಳವಾಗಿದ್ದು, ಅಮೆರಿಕಕ್ಕೆ ಹೊಸ ಬದುಕನ್ನು ಕೊಟ್ಟಿದ್ದೀರಿ. ಹೊಸ ಉಜ್ವಲ ದಿನವನ್ನು ಆರಂಭಿಸುವ ಹೊತ್ತು ನಮ್ಮ ಎದುರಿಗಿದೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಟ ಮತ್ತು ತ್ಯಾಗ ಅತ್ಯಗತ್ಯವಾಗಿದ್ದು, ಅದರಲ್ಲಿ ಸಂತೋಷ ಮತ್ತು ಪ್ರಗತಿಯೂ ಇದೆ. ಉತ್ತಮ ಭವಿಷ್ಯವನ್ನು ನಿರ್ಮಿಸುವ ಶಕ್ತಿಯೂ ನಮಗಿದೆ.

    ಇದನ್ನೂ ಓದಿ: ಬೈಡೆನ್ ಅಮೆರಿಕ ಪ್ರೆಸಿಡೆಂಟ್: ಟ್ರಂಪ್ ಎಕ್ಸಿಟ್, ಕಮಲಾ ಹ್ಯಾರಿಸ್ ಮೊದಲ ಉಪಾಧ್ಯಕ್ಷೆ

    ನನ್ನ ಈ ಯಶಸ್ಸಿಗೆ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಕಾರಣಕರ್ತರಾಗಿದ್ದು ಅವರಿಗೆ ನಾನು ಚಿರಋಣಿ. ಆಕೆ ಅಮೆರಿಕಕ್ಕೆ ಬಂದಾಗ ಕೇವಲ 19 ವರ್ಷ ವಯಸ್ಸು. ಅಂದು ಅಮೆರಿಕಕ್ಕೆ ಕಾಲಿಟ್ಟಾಗ ಇಂತಹ ಒಂದು ಕ್ಷಣ ಬರುತ್ತದೆ ಎಂದು ಅಕೆ ಕನಸಿನಲ್ಲಿಯೂ ಎಣಿಸಿರಲಿಕ್ಕೆ ಸಾಧ್ಯವಿಲ್ಲ. ಆದರೆ ಮಾಡುವ ಕಾರ್ಯದಲ್ಲಿ ಆಕೆ ತುಂಬಾ ನಂಬಿಕೆ ಇಟ್ಟಿದ್ದರು. ಅಮೆರಿಕದಲ್ಲಿ ಇಂತಹ ಅವಕಾಶಗಳು ಸಿಗುತ್ತೆ ಎಂಬುದು ಈಗ ಜಗಜ್ಜಾಹೀರು ಎಂದು ಕಮಲಾ ಹೇಳಿದರು. (ಏಜೆನ್ಸೀಸ್)

    ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಕಮಲಾ ಹ್ಯಾರಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts