More

    ಪಾರ್ಸೆಲ್​ ತೆರೆಯಲು ಮರೆತು 11 ದಿನಗಳ ಬಳಿಕ ಮರಳಿ ನೋಡಿದ ಮಹಿಳೆಗೆ ಕಾದಿತ್ತು ಅಚ್ಚರಿ!

    ಬೀಜಿಂಗ್​: ತನಗೆ ಬಂದ ಪಾರ್ಸೆಲ್ ಅನ್ನು ತೆರೆಯಲು ಮರೆತ ಚೀನಾ ಮಹಿಳೆಯೊಬ್ಬಳು ಸುಮಾರು 11 ದಿನಗಳ ಬಳಿಕ ಅದನ್ನು ಮರಳಿ ನೋಡಿದಾಗ ಆಕೆಗೆ ಆಶ್ಚರ್ಯವೊಂದು ಕಾದಿತ್ತು. ​

    ಅಷ್ಟಕ್ಕೂ 11 ದಿನಗಳ ಬಳಿಕ ಪಾರ್ಸೆಲ್​ನಲ್ಲಿ ಆಗಿದ್ದ ಬದಲಾವಣೆಯೆಂದರೆ ಅದರ ಮೇಲಿನ ಮೂಲೆಯೊಂದರಲ್ಲಿ ಚಿಕ್ಕ ಚಿಕ್ಕ ಅಣಬೆಗಳು ಬೆಳೆದು ನಿಂತಿದ್ದವು. ಅಣಬೆ ನೋಡಿದ ಮಹಿಳೆಗೆ ಅಚ್ಚರಿಯಾಗುವುದರ ಜತೆಗೆ ಉಪಯೋಗವು ಆಗಿದೆ.

    ಇದನ್ನೂ ಓದಿ: ಮೊದಲ ಬಾರಿಗೆ ಕರೊನಾ ರೋಗಿಯ ಶವಪರೀಕ್ಷೆ: ಬಯಲಾಯ್ತು ಭಯಾನಕ ಸಂಗತಿಗಳು!

    ಪಾರ್ಸೆಲ್​ ತೆರೆಯಲು ಮರೆತು 11 ದಿನಗಳ ಬಳಿಕ ಮರಳಿ ನೋಡಿದ ಮಹಿಳೆಗೆ ಕಾದಿತ್ತು ಅಚ್ಚರಿ!

    ಘಟನೆಯ ಸಂಪೂರ್ಣ ವಿವರಣೆಗೆ ಬರುವುದಾದರೆ, ನೈರುತ್ಯ ಚೀನಾದ ಸಿಚುವಾನ್​ ಪ್ರಾಂತ್ಯದ ಲಾಂಗ್​ಚಾಂಗ್​ ನಗರದ ನಿವಾಸಿ ದೈ, ಒಂದು ಬಾಕ್ಸ್​ ತುಂಬ ಹೂವಿನ ಗೊಬ್ಬರವನ್ನು ಆನ್​ಲೈನ್​ ಮೂಲಕ ಖರೀದಿಸಿದ್ದಳು. ನಿಗದಿಯಂತೆ ಪಾರ್ಸೆಲ್​ ಡಿಲಿವರಿಯೂ ಆಗಿತ್ತು. ಆದರೆ, ಅದನ್ನು ತೆರೆಯಲು ಆಕೆ ಮರೆತಿದ್ದಳು. 11 ದಿನಗಳ ಬಳಿಕ ನೆನಪಾಗಿ ತೆರೆಯಲು ಪಾರ್ಸೆಲ್​​ ಹುಡುಕಾಡಿ ನೋಡಿದಾಗ ಪತ್ತೆಯಾದ ಪಾರ್ಸೆಲ್​ನ ಒಂದು ಮೂಲೆಯಲ್ಲಿ ಅಣಬೆಗಳು ಬೆಳೆದಿದ್ದವು.

    ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅ. 15ರಂದು ಚೀನಾ ಮಾಧ್ಯಮದಲ್ಲಿ ಬಿಡುಗಡೆಯಾಗಿದ್ದು, ಸದ್ಯ ಭಾರಿ ವೈರಲ್​ ಆಗಿದೆ. ಅನಿರೀಕ್ಷಿತ ಪ್ರಸಂಗದ ಬಗ್ಗೆ ಮಾತನಾಡಿರುವ ದೈ, ಪಾರ್ಸೆಲ್​ ಮೇಲೆ ಬೆಳೆದಿದ್ದ ಅಣಬೆಗಳನ್ನು ರುಚಿಯಾದ ಸೂಪ್​ ಮಾಡಿ ಸೇವಿಸಿಬಿಟ್ಟೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)

    ಆರ್‌ಸಿಬಿ ತಂಡದ ಹೊಸ ಸ್ಟಾರ್, ಸಿರಾಜ್ ಕಾಲೆಳೆದವರು ಈಗ ಬೆನ್ನು ತಟ್ಟುತ್ತಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts