ಆರ್‌ಸಿಬಿ ವೇಗಿ ಮೊಹಮದ್​ ಸಿರಾಜ್ ಅವರ ಕಾಲೆಳೆದವರು ಈಗ ಬೆನ್ನು ತಟ್ಟುತ್ತಿದ್ದಾರೆ!

siraj web
Published on

ಬೆಂಗಳೂರು: ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಲ್‌ಗಳಿಗೆ ಒಳಗಾದ ತಂಡ ಆರ್‌ಸಿಬಿ. ಅದೇ ರೀತಿ ತಂಡದ ಆಟಗಾರರು ಕೂಡ ಸಾಕಷ್ಟು ಬಾರಿ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ. ಇದೀಗ ಆರ್‌ಸಿಬಿ ತಂಡ ಐಪಿಎಲ್ 13ರಲ್ಲಿ ಭರ್ಜರಿ ನಿರ್ವಹಣೆ ತೋರುವ ಮೂಲಕ ತನ್ನ ಟೀಕಾಕಾರರಿಗೆ ದಿಟ್ಟ ಉತ್ತರ ನೀಡುತ್ತಿದೆ. ಇದೇ ರೀತಿ ತಂಡದ ಆಟಗಾರರು ಕೂಡ ನಿರ್ವಹಣೆಯ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡುತ್ತಿದ್ದಾರೆ. ವೇಗಿ ಮೊಹಮದ್ ಸಿರಾಜ್ ಇದಕ್ಕೊಂದು ತಾಜಾ ಉದಾಹರಣೆ.

ಬುಧವಾರ ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ತೋರಿದ ಅಮೋಘ ಬೌಲಿಂಗ್ ನಿರ್ವಹಣೆಯ ಮೂಲಕ ಮೊಹಮದ್ ಸಿರಾಜ್ ಎಲ್ಲರ ಗಮನಸೆಳೆದಿದ್ದಾರೆ. ಇದರಿಂದ, ಈ ಹಿಂದೆ ಅವರ ಬೌಲಿಂಗ್ ನಿರ್ವಹಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುತ್ತಿದ್ದ ನೆಟ್ಟಿಗರೇ ಈಗ ಅವರ ಅಮೋಘ ಬೌಲಿಂಗ್ ದಾಳಿಯ ಬಗ್ಗೆ ಮೆಚ್ಚುಗೆಯ ಮೀಮ್ಸ್‌ಗಳನ್ನು ಹರಿಬಿಡುವ ಮೂಲಕ ಬೆನ್ನುತಟ್ಟುತ್ತಿದ್ದಾರೆ.

4 ಓವರ್‌ಗಳ ದಾಳಿಯಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ ಸಿರಾಜ್, ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 2 ಮೇಡನ್ ಸಾಧಿಸಿದ ಮೊದಲ ಬೌಲರ್ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಇದರಿಂದಾಗಿ ಆರ್‌ಸಿಬಿ ಅಭಿಮಾನಿಗಳು ಮಾತ್ರವಲ್ಲದೆ, ಒಟ್ಟಾರೆ ಕ್ರಿಕೆಟ್ ಪ್ರೇಮಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net