More

    110ನೇ ವರ್ಷದಲ್ಲಿ ಹೊಸ ಕೇಶ, ಹೊಸ ಹಲ್ಲು: ‘ಮರುಹುಟ್ಟನ್ನು’ ಸಂಭ್ರಮಿಸಿದ ಮಹಿಳೆ

    ಬಡ್ಜ್: ವಯಸ್ಸಾಗುತ್ತಿದ್ದಂತೆ ಕೂದಲು-ಹಲ್ಲು ಉದುರಿಹೋಗುವುದು ಸರ್ವೇಸಾಮಾನ್ಯ. ಮಾತ್ರವಲ್ಲ, ಹಾಗೇ ಹೋದ ಕೂದಲು-ಹಲ್ಲು ಮರಳಿ ಬರುವುದು ಅತ್ಯಪರೂಪ ಎಂದರೂ ಸರಿಯೇ. ಅಂಥ ಒಂದು ಅತ್ಯಪರೂಪದ ವಿದ್ಯಮಾನಕ್ಕೆ ಶತಾಯುಷಿ ಮಹಿಳೆಯೊಬ್ಬರು ನಿದರ್ಶನವಾಗಿದ್ದಾರೆ.

    ಅಂದರೆ ಇಲ್ಲೊಬ್ಬರು 110 ವರ್ಷದ ಮಹಿಳೆಗೆ ಹೊಸದಾಗಿ ಕೂದಲು ಬಂದಿದೆ. ಮಾತ್ರವಲ್ಲ, ಹೊಸದಾಗಿ ಹಲ್ಲು ಕೂಡ ಬಂದಿದೆ. ಇವೆರಡರ ಮರುಹುಟ್ಟನ್ನು ಈ ಮಹಿಳೆ ಮತ್ತು ಮನೆಯವರು ಸಂಭ್ರಮಿಸಿದ್ದಾರೆ. ಪಶ್ಚಿಮಬಂಗಾಳದ ಬಡ್ಜ್ ಎಂಬಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿದೆ.

    ಸಖಿಬಾಲಾ ಮೊಂಡಲ್ ಎಂಬಾಕೆ ಈ ವಿಶೇಷಕ್ಕೆ ಸಾಕ್ಷಿಯಾಗಿದ್ದಾರೆ. ಹೊಸ ಕೇಶ, ಹೊಸ ದಂತದ ಹುಟ್ಟನ್ನು ಸಖಿಬಾಲಾ ಮೊಂಡಲ್ ತನ್ನ 80 ವರ್ಷದ ಪುತ್ರಿ, ಮೊಮ್ಮಕ್ಕಳೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ತೀರಾ ವಯಸ್ಸಾದ ಮೇಲೆ ಹೀಗೆ ಹೊಸದಾಗಿ ಕೇಶ-ದಂತ ಬರುವುದು ಅತ್ಯಪರೂಪದ ಸಂಗತಿ ಎಂದು ವೈದ್ಯರೂ ಅಭಿಪ್ರಾಯಪಟ್ಟಿದ್ದಾರೆ.

    ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts