More

    ಆ ಒಂದು ಘಟನೆಯಿಂದ ಈಕೆಯ ಸುಂದರ ಮುಖ ಈಗ ಹೇಗಾಗಿದೆ ಗೊತ್ತಾ? ಧೈರ್ಯವಿದ್ರೆ ಮಾತ್ರ ನೋಡಿ!

    ಸಿಡ್ನಿ: ಆಕಸ್ಮಿಕವಾಗಿ ಕ್ಯಾಂಪ್​ ಫೈರ್​ಗೆ ಬಿದ್ದ ಯುವತಿಯೊಬ್ಬಳ ಮುಖ ಸಂಪೂರ್ಣ ಸುಟ್ಟ ಹೋಗಿ ಮುಖ ಗುರುತು ಹಿಡಿಯದಷ್ಟು ವಿಕಾರವಾಗಿದ್ದು, ಆಕೆಯನ್ನು “ಜೋಂಬಿಯಾ” ಎಂದೇ ಕರೆಯುತ್ತಿದ್ದಾರೆ.

    ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಹೆಲಿಯಾ ಟೆನೆಂಟ್​ (29) ಎಂಬಾಕೆ ಇದೀಗ ತನ್ನ ಗುರುತನ್ನೇ ಕಳೆದುಕೊಂಡು ದುಃಖದ ಕಡಲಲ್ಲಿ ಮುಳುಗಿದ್ದಾಳೆ. ಕರೊನಾ ಸಮಯದಲ್ಲಿ ಟೆನೆಂಟ್​ ಹೀಗಾಗಿದ್ದು, ಕರೊನಾ ರೋಗಿಗಳೇ ತುಂಬಿ ಇತರೆ ರೋಗಿಗಳಿಗೆ ಚಿಕಿತ್ಸೆ ವಿರಳವಾಗಿರುವ ಸಮಯದಲ್ಲಿ ದಿನವೊಂದಕ್ಕೆ ಒಂದು ಗಂಟೆ ಮಾತ್ರ ಟೆನೆಂಟ್​ ಚಿಕಿತ್ಸೆಗೆ ಸಮಯ ನೀಡಲಾಗಿತ್ತು. ಈಕೆ ಒಬ್ಬಳೇ ಹೊರ ರೋಗಿಯು ಆಗಿದ್ದಾಳು.

    ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಪಾಕ್ ಪ್ರೇಮಿ: ವಾಟ್ಸಾಪ್ ಗ್ರೂಪ್​ನಲ್ಲಿ ಪಾಕ್​ ಪರ ಪೋಸ್ಟ್

    ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಹಾಟ್ಸ್​ಪುರ್ ಮೂಲದ ನಿವಾಸಿಯಾಗಿರುವ ಟೆನೆಂಟ್​ ಫ್ರೆಂಡ್​ ಜತೆಗೆ ಸ್ವಯಂಪ್ರೇರಿತವಾಗಿ ಕ್ಯಾಂಪಿಂಗ್ ತೆರಳಿದ್ದರು. ರಾತ್ರಿ ಕ್ಯಾಂಪಿಂಗ್​ ಫೈರ್​ ಹಾಕಿದ್ದ ಸಮಯದಲ್ಲಿ ಆಕೆಯ ಕುರ್ಚಿ ಮೇಲೆ ಕುಳಿತಿದ್ದಾಗ ನಿದ್ರೆಯ ಮಂಪರಿನಿಂದ ತೂಕಡಿಸಿ ಉರಿಯುವ ಬೆಂಕಿಯ ಮೇಲೆ​ ಬೀಳುತ್ತಾಳೆ. ಈ ವೇಳೆ ಆಕೆಯ ಫ್ರೆಂಡ್​ ನಿದ್ರೆಯಲ್ಲಿದ್ದರು.

    ನರಳಾಡುವ ಧ್ವನಿ ಕೇಳಿ ಎಚ್ಚರಗೊಂಡ ಫ್ರೆಂಡ್​ ಕ್ಯಾಂಪ್​ ಫೈರ್​ ಮೇಲೆ ಬಿದ್ದು ಒದ್ದಾಡುತ್ತಿದ್ದ ಟೆನೆಂಟ್​ ನೋಡಿ ಗಾಬರಿಯಾಗಿ ಎಲ್ಲಿಗೂ ಕದಲದೆ ಗರಬಡಿದಂತೆ ನಿಂತಿರುತ್ತಾರೆ. ಇದರ ಬೆನ್ನಲ್ಲೇ ವಾಸ್ತವಕ್ಕೆ ಬಂದು ಓಡಿ ಹೋಗಿ ಬೆಂಕಿಯ ಮೇಲೆ ಬಿದ್ದಿದ್ದ ಟೆನೆಂಟ್​ಳನ್ನು ಎಳೆದುಕೊಳ್ಳುತ್ತಾರೆ. ಬಳಿಕ ನೋವು ಕಡಿಮೆಯಾಗಲೆಂದು ಆಕೆಯ ಮೇಲೆ ತಣ್ಣನೆಯ ನೀರನ್ನು ಸುರಿಯುತ್ತಾರೆ. ​

    ಇದನ್ನೂ ಓದಿ: ಮಗಳಿಗೆ ನಿಶ್ಚಯವಾಗಿದ್ದ ವರನಿಗೆ ಫೋನ್​ ಮಾಡಿ ಮನೆಗೆ ಕರೆಸಿಕೊಂಡ ಮಹಿಳೆ ಹೀಗಾ​ ಮಾಡೋದು?

    ಆ ಒಂದು ಘಟನೆಯಿಂದ ಈಕೆಯ ಸುಂದರ ಮುಖ ಈಗ ಹೇಗಾಗಿದೆ ಗೊತ್ತಾ? ಧೈರ್ಯವಿದ್ರೆ ಮಾತ್ರ ನೋಡಿ!

    ಬಳಿಕ ಆಕೆಯನ್ನು ಮೆಲ್ಬೋರ್ನ್​ನಲ್ಲಿ ಆಲ್ಫ್ರೆಡ್​ ಆಸ್ಪತ್ರೆಗೆ ದಾಖಲಿಸುತ್ತಾರೆ. ಅಷ್ಟರಲ್ಲಾಗಲೇ ಆಕೆ ಕೋಮಾಗೆ ಜಾರಿರುತ್ತಾಳೆ. ಸುಮಾರು 8 ದಿನಗಳವರೆಗೆ ಕೋಮಾದಲ್ಲೇ ಇರುತ್ತಾಳೆ. ಕೋಮಾದಿಂದ ಎಚ್ಚರಗೊಂಡ ಬಳಿಕ ಆಕೆಯನ್ನು ಬರ್ನ್​ ವಾರ್ಡ್​ಗೆ ಸ್ಥಳಾಂತರಿಸಿ, ಸರ್ಜರಿ ಮಾಡುತ್ತಾರೆ. ಸುಮಾರು ಎರಡೂವರೆ ತಿಂಗಳು ಸರ್ಜರಿ ನಡೆಸಿದ್ದು, ಹಾನಿಗೊಳಗಾದ ಆಕೆಯ ಚರ್ಮವನ್ನು ತೆಗೆದುಹಾಕಿ, ಮುಖ, ಕುತ್ತಿಗೆ, ಕಣ್ಣುರೆಪ್ಪೆಗಳು ಮತ್ತು ಬಾಯಿಗೆ ಚರ್ಮದ ನಾಟಿ ಮಾಡಿದ್ದು, ಆಕೆಯ ಮುಖ ಸಂಪೂರ್ಣವಾಗಿ ಬದಲಾಗಿದೆ. (ಏಜೆನ್ಸೀಸ್​)

    ‘ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts