More

    ರೇಷ್ಮೆ ಸಾಕಾಣಿಕೆ ಮನೆ ಭಸ್ಮ, ಅಪಾರ ಹಾನಿ

    ಬ್ಯಾಡಗಿ: ಆಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಹುಳು ಸಾಕುವ ಮನೆ ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಕಲ್ಲೇದೇವರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಜರುಗಿದೆ.

    ಗ್ರಾಮದ ರೇಷ್ಮೆ ಬೆಳೆಗಾರ ಬಸಪ್ಪ ಮಲ್ಲಪ್ಪ ಬಣಕಾರ ಎಂಬುವರು ರೇಷ್ಮೆ ಹುಳು ಸಾಕಾಣಿಕೆ ಮಾಡಲು ಹೊಲದಲ್ಲಿ ಮನೆ ನಿರ್ವಿುಸಿದ್ದರು. ಆಕಸ್ಮಿಕ ಬೆಂಕಿ ಹೊತ್ತಿಕೊಂಡು ರೇಷ್ಮೆ ಹುಳುಗಳಿಗೆ ಅಗತ್ಯವಾದ 600 ಚಂದ್ರಿಕೆಗಳು, ಕಟ್ಟಿಗೆಯ ರ್ಯಾಕ್, ಒಂದೂವರೆ ಎಕರೆ ಹನಿ ನೀರಾವರಿ ಪೈಪ್​ಗಳು ಹಾಗೂ ಹೊಂದಿಕೊಂಡಿದ್ದ ಜಾನುವಾರು ಕೊಟ್ಟಿಗೆಗೂ ಬೆಂಕಿ ವ್ಯಾಪಿಸಿ ಸಂಪೂರ್ಣ ಕರಕಲಾಗಿದೆ. ಎರಡು ವರ್ಷಗಳಿಂದ ರೇಷ್ಮೆ ಹುಳು ಸಾಕಾಣಿಕೆಗೆ ಮುಂದಾಗಿದ್ದ ರೈತ ಈಗ ಸಾಲದಲ್ಲಿ ಮುಳುಗಿದ್ದಾನೆ. ಸ್ಥಳಕ್ಕೆ ರೇಷ್ಮೆ ಸಹಾಯಕ ನಿರ್ದೇಶಕ ಎಂ.ಎಸ್. ಪಾಟೀಲ, ವಿಸ್ತರ್ಣಾಧಿಕಾರಿ ಕೆ.ಎಚ್. ಪೂಜಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಡಗಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts