More

    ಕ್ವಾರಂಟೈನ್​ಗೆ ಒಳಗಾಗಲು ಬಾಯ್​ಫ್ರೆಂಡ್​ ಅನ್ನೇ ಪತಿ ಎಂದು ಬಿಂಬಿಸಿದ ಪೇದೆ

    ನಾಗ್ಪುರ: ಕೋವಿಡ್​-19 ಸೋಂಕಿಗೆ ತುತ್ತಾಗಿರುವ ಆತಂಕದ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಲು ಮಹಿಳಾ ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಿಯತಮನನ್ನೇ ಗಂಡನೆಂದು ಬಿಂಬಿಸಿ, ಸಿಕ್ಕಿಬಿದ್ದಿದ್ದಾರೆ.

    ನಾಗ್ಪುರ ಪೊಲೀಸ್​ ಠಾಣೆಯೊಂದರಲ್ಲಿ ಮಹಿಳಾ ಪೇದೆಯೊಬ್ಬರ ಸಹೋದ್ಯೋಗಿಯೊಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ಒಳಗಾಗುವಂತೆ ಮಹಿಳಾ ಪೇದೆಗೂ ಸೂಚಿಸಲಾಗಿತ್ತು. ಆದರೆ ಅವಿವಾಹಿತಳಾಗಿದ್ದರೂ ತನ್ನ ವಿವಾಹಿತ ಪ್ರಿಯತಮನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಆತನನ್ನೂ ಕ್ವಾರಂಟೈನ್​ಗೆ ಕರೆದೊಯ್ಯಬೇಕು ಎಂಬುದು ಮಹಿಳಾ ಪೇದೆಯ ಬಯಕೆಯಾಗಿತ್ತು.

    ಈ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರಿಯತಮನನ್ನು ತಮ್ಮ ಪತಿಯೆಂದು ಹೇಳಿ ಪೊಲೀಸ್​ ತರಬೇತಿ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ​ ಕೇಂದ್ರದಲ್ಲಿ ಇಬ್ಬರೂ ಒಟ್ಟಾಗಿ ಕ್ವಾರಂಟೈನ್​ಗೆ ಒಳಗಾಗಿದ್ದರು.

    ಇದನ್ನೂ ಓದಿ: ಕರೊನಾ ಔಷಧಿ ಹೆಸರಲ್ಲಿ ಕೊಟ್ಯಾಂತರ ರೂ. ವಂಚಿಸಿದ ವಿದೇಶಿ ಗ್ಯಾಂಗ್​ ಬಂಧನ

    ಇತ್ತ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಮೂರು ದಿನಗಳಿಂದ ಮನೆಗೆ ಬಾರದ್ದರಿಂದ ಆತಂಕಗೊಂಡ ಮಹಿಳಾ ಪೇದೆಯ ಪ್ರಿಯತಮನ ಪತ್ನಿ ಆತನಿಗಾಗಿ ಹುಡುಕಾಡಲಾರಂಭಿಸಿದ್ದಳು. ಕೋವಿಡ್​ ಕ್ವಾರಂಟೈನ್​ಗೆ ಒಳಗಾಗಿರುವ ಶಂಕೆಯಲ್ಲಿ ಎಲ್ಲ ಆಸ್ಪತ್ರೆಗಳನ್ನೂ ತಡಕಾಡಿದ್ದಳು. ಕೊನೆಗೆ ಪೊಲೀಸ್​ ತರಬೇತಿ ಕೇಂದ್ರದ ಕ್ವಾರಂಟೈನ್​ ಕೇಂದ್ರಕ್ಕೆ ಬಂದಾಗ ಪತಿ ಹಾಗೂ ಆತನ ಪ್ರೇಯಸಿಯ ಆಟ ಬಯಲಾಗಿತ್ತು.

    ಆದರೆ, ಆಕೆಗೆ ಪತಿಯನ್ನು ನೋಡಲು ಕೇಂದ್ರದೊಳಗೆ ಹೋಗಲು ಅವಕಾಶ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಪತಿಯ ವಿರುದ್ಧ ಬಜಾಜ್​ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಲ್ಲದೆ, ಪೊಲೀಸ್​ ಆಯುಕ್ತ ಭೂಷಣ್​ಕುಮಾರ್​ ಉಪಾಧ್ಯಾಯ ಅವರನ್ನು ಭೇಟಿಯಾಗಿ ಸಹಾಯ ಯಾಚಿಸಿದ್ದಳು. ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸ್​ ಆಯುಕ್ತರು ಆದೇಶಿಸಿದ್ದಾರೆ.

    ಇದನ್ನೂ ಓದಿ: ಮೂವರು ಬೈಕ್ ಕಳ್ಳರ ಬಂಧನ

    ಅದರಂತೆ ಜೋನ್​ II ಡಿಸಿಪಿ ವಿವೇಕ್​ ಮಸಾಲ್​ ಅವರು ತನಿಖೆ ಆರಂಭಿಸಿದ್ದಾರೆ. ಜತೆಗೆ ಪೊಲೀಸ್​ ಪೇದೆಯ ಪ್ರಿಯಕರನನ್ನು ಬೇರೊಂದು ಕ್ವಾರಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

    ಕಳೆದ ವರ್ಷದ ಅಕ್ಟೋಬರ್​ನಲ್ಲಿ ಸರ್ಕಾರಿ ಯೋಜನೆಯೊಂದರಲ್ಲಿ ಮಹಿಳಾ ಪೇದೆ ಮತ್ತು ಅಂಚೆ ಇಲಾಖೆಯ ಅಧಿಕಾರಿ ಒಟ್ಟಾಗಿ ಕೆಲಸ ಮಾಡಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅದು ದೈಹಿಕ ಸಂಪರ್ಕ ಬೆಳೆಸುವವರೆಗೂ ಮುಂದುವರಿದಿತ್ತು ಎನ್ನಲಾಗಿದೆ.

    ಜೂನಿಯರ್ ರಣಬೀರ್​ ಕಪೂರ್​ ಸಾವು; ಕಾರಣ ಏನಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts