More

    ಕರೊನಾ ಔಷಧಿ ಹೆಸರಲ್ಲಿ ಕೊಟ್ಯಂತರ ರೂ. ವಂಚಿಸಿದ ವಿದೇಶಿ ಗ್ಯಾಂಗ್​ ಬಂಧನ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಅನ್ನು​ ಬಂಡವಾಳ ಮಾಡಿಕೊಂಡು ಔಷಧಿ ಹೆಸರಿನಲ್ಲಿ ಕೊಟ್ಯಾಂತರ ರೂಪಾಯಿ ವಂಚಿಸಿದ ಮೋಸಗಾರರ ಗ್ಯಾಂಗ್​ ಅನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಇದನ್ನೂ ಓದಿ: ಚೀನಾಕ್ಕೆ ನಮ್ಮಿಂದ ಒಂದು ಇಂಚು ಭೂಮಿ ತೆಗೆದುಕೊಳ್ಳಲು ಸಾಧ್ಯವಿಲ್ಲ

    ಕರೊನಾ ಔಷಧಿ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡೊದಾಗಿ ವಿದೇಶಿ ಗ್ಯಾಂಗ್​ ಆನ್​ಲೈನ್ ಮೂಲಕ ವಂಚಿಸಿದೆ. ಬಂಧಿತರನ್ನು ಎಗ್ಬೆ ಹ್ಯೂಬರ್ಟ್ ಎನೋ, ಎನ್ದೇಪ್ ಕಾಲೀನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರಿಗೆ ಸಾಥ್ ನೀಡಿದ್ದ ಅಸ್ಸಾಂ ಮೂಲದ ಬದ್ರೂಲ್ ಹಸನ್ ಲಸ್ಕರ್ ಹಾಗೂ ದಿದಾರುಲ್ ಆಲೋಮ್ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಬ್ಯುಸಿನೆಸ್ ವಿಸಾದಲ್ಲಿ ಬಂದು ಅವಧಿ ಮುಗಿದಿದ್ದರು ಜಯನಗರದ ಮನೆಯೊಂದರಲ್ಲಿ ಆರೋಪಿಗಳು ವಾಸವಾಗಿದ್ದರು. ಅಸ್ಸಾಂ ಮೂಲದವರ ಮೂಲಕ ವಿವಿಧ ಬ್ಯಾಂಕ್​ ಗಳಲ್ಲಿ ಖಾತೆ ತೆರೆದು ವಂಚನೆ ಮಾಡುತ್ತಿದ್ದರು. ಇದಕ್ಕಾಗಿ 10ಕ್ಕೂ ಹೆಚ್ಚು ನಕಲಿ ವೆಬ್​ಸೈಟ್​ಗಳನ್ನು ಆರೋಪಿಗಳು ಸೃಷ್ಠಿಸಿದ್ದರು.

    ನಾಯಿ ಮರಿ ಮಾರಾಟ, ಔಷಧ, ಎಲೆಕ್ಟ್ರಿಕ್​ ವಸ್ತುಗಳ ಮಾರಾಟ ಮಾಡೋದಾಗಿ ಜಾಹಿರಾತು ಕೂಡ ನೀಡಿದ್ದರು. ನಂಬಿ ಕೊಳ್ಳಲು ಹೋದವರ ಅಕೌಂಟ್ ಹ್ಯಾಕ್ ಮಾಡಿ ವಂಚಕರು ಹಣ ಲೂಟಿ ಮಾಡುತ್ತಿದ್ದರು. ಇದೇ ರೀತಿ ಕೋಟ್ಯಾಂತರ ಹಣವನ್ನು ಗ್ಯಾಂಗ್​ ವಂಚಿಸಿದೆ.

    ಇದನ್ನೂ ಓದಿ: ಐಪಿಎಲ್​ ಆಯೋಜಿಸಲು ಸಜ್ಜಾಗಿದೆ ಯುಎಇ..!

    ಬನಶಂಕರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಮೊಬೈಲ್ ಫೋನ್​ಗಳು, ಲ್ಯಾಪ್​ಟಾಪ್​ಗಳು, ಬ್ಯಾಂಕ್ ಅಕೌಂಟ್ ಪಾಸ್ ಬುಕ್ಗಳು, ಆಧಾರ್ ಕಾರ್ಡ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಗುಂಡಿನ ಕಾಳಗದಲ್ಲಿ ಉಗ್ರ ಹತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts