More

    ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

    ಕೋಲ್ಕತ್ತ: ಮೂವತ್ತು ವರ್ಷಗಳವರೆಗೆ ಆಕೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದ್ದಳು. ಆದರೆ, ಇತ್ತೀಚೆಗಷ್ಟೇ ಆಕೆಗೆ ತಾನ್ಯಾರು ಎಂಬುದು ತಿಳಿದಿದೆ. ಮಾತ್ರವಲ್ಲ, ಆಕೆ ತಂಗಿ ಕೂಡ ಇದರಿಂದ ಹೊರತಾಗಿರಲಿಲ್ಲ. ಇಂಥದ್ದೊಂದು ದೈಹಿಕ ತೀರಾ ಅಪರೂಪದ್ದಲ್ಲವೆಂಬುದು ವೈದ್ಯರ ಅಭಿಪ್ರಾಯ.

    ಹೊಟ್ಟೆನೋವೆಂದು ದಾಖಲಾಗಿದ್ದ ಮಹಿಳೆಯನ್ನು ಪರೀಕ್ಷೆಗೊಳಪಡಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಒಂಭತ್ತು ವರ್ಷಗಳ ದಾಂಪತ್ಯ ಜೀವನವನ್ನೂ ಪೂರ್ಣಗೊಳಿಸಿರುವ ಮಹಿಳೆಗೆ ಇದ್ದದ್ದು ವೃಷಣದ ಕ್ಯಾನ್ಸರ್​…!

    ಇದನ್ನೂ ಓದಿ; ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!

    ಇಂಥದ್ದೊಂದು ದೈಹಿಕ ಸ್ಥಿತಿ 22,000 ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ ಎಂಬುದು ವೈದ್ಯರ ವಿವರಣೆ. ವಿಶೇಷವೆಂದರೆ ಈಕೆಯ ತಾಯಿಯ ಕಡೆಯ ಇಬ್ಬರು ಸಂಬಂಧಿಕರಲ್ಲೂ ಇದೇ ಕಾಯಿಲೆ (ಆ್ಯಂಡ್ರೋಜೆನ್​ ಇನ್​ಸೆನ್ಸಿಟಿವಿಟಿ ಸಿಂಡ್ರೋಮ್​) ಇರುವುದು ಗೊತ್ತಾಗಿದೆ. ಹೀಗಾಗಿ ಇದೊಂದು ಅನುವಂಶೀಯ ಕಾಯಿಲೆ ಎಂದು ಹೇಳಲಾಗಿದೆ.

    ಪಶ್ಚಿಮ ಬಂಗಾಳದ ಬಿರ್​ಭೂಮ್​ ನಿವಾಸಿಯಾದ ಮಹಿಳೆ ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದಾಳೆ. ಕೆಳಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ನೇತಾಜಿ ಸುಭಾಶ್ಚಂದ್ರ ಬೋಸ್​ ಕ್ಯಾನ್ಸರ್​ ಆಸ್ಪತ್ರೆಗೆ ದಾಖಲಾಗಿದ್ದಳು. ಡಾ. ಅನುಪಮ್​ ದತ್ತಾ ಹಾಗೂ ಡಾ. ಸೌಮೇನ್​ ದಾಸ್​ ವಿವಿಧ ಪರೀಕ್ಷೆ ನಡೆಸಿದ್ದರು.

    ಧ್ವನಿ, ಎದೆಭಾಗ, ಗುಪ್ತಾಂಗಗಳು ಹೆಣ್ಣಿನಂತೆಯೇ ಇದ್ದವು. ಆದರೆ, ಗರ್ಭಕೋಶ ಹಾಗೂ ಅಂಡಾಶಯಗಳು ಇರಲಿಲ್ಲ. ಇದಲ್ಲದೇ, ಆಕೆ ಎಂದೂ ಮುಟ್ಟಾಗಿರಲಿಲ್ಲ ಎಂದು ಡಾ. ದತ್ತಾ ಹೇಳಿದ್ದಾರೆ.

    ಇದನ್ನೂ ಓದಿ; ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ 

    ವೃಷಣಗಳು ಆಕೆಯ ದೇಹದೊಳಗೆ ಸೇರಿಕೊಂಡಿದ್ದವು. ಅವುಗಳಿಂದ ಹಾರ್ಮೋನ್​ ಬಿಡುಗಡೆಯಾಗುತ್ತಿರಲಿಲ್ಲ. ಇನ್ನೊಂದೆಡೆ ಆಕೆಯ ಸ್ತ್ರೀ ಹಾರ್ಮೋನ್​ಗಳು ಮಹಿಳೆಯಾಗಿ ಕಾಣುವಂತೆ ಮಾಡಿದ್ದವು. ಮಕ್ಕಳಿಗಾಗಿ ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಸದ್ಯ ಆಕೆಗೆ ಕಿಮೋಥೆರಪಿ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾಳೆ. ಗಂಡ- ಹೆಂಡತಿ ಇಬ್ಬರಿಗೂ ಕೌನ್ಸೆಲ್ಲಿಂಗ್​ ನೀಡಲಾಗಿದ್ದು, ಹಿಂದಿನಂತೆಯೇ ಜೀವನ ನಡೆಸಲು ಸಲಹೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts