More

    ಫೇಸ್​​ಬುಕ್​ನಲ್ಲಿ ಫೇಕ್ ವಿಡಿಯೋ ಬಗ್ಗೆ ಮಹಿಳೆಯ ವಿಚಾರಣೆ

    ಬೆಂಗಳೂರು : ಬೆಂಗಳೂರು ಪೊಲೀಸರ ವಿರುದ್ಧ ಫೇಸ್​​ಬುಕ್​ನಲ್ಲಿ ಫೇಕ್​ ವಿಡಿಯೋ ಶೇರ್ ಮಾಡಿದ್ದ ವಿಚಾರವಾಗಿ ಬೆಂಗಳೂರಿನ ನಿವಾಸಿ ಪದ್ಮಾ ಹರೀಶ್ ಎಂಬುವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಎಲ್ಲೋ ಯಾವಾಗಲೋ ವ್ಯಕ್ತಿಯೊಬ್ಬರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್​ ನಡೆಸಿದ್ದ ಘಟನೆಯ ವಿಡಿಯೋ ಹಾಕಿ ಬೆಂಗಳೂರು ಪೊಲೀಸರ ವಿರುದ್ಧ ಬೆಟ್ಟು ಮಾಡಲಾಗಿತ್ತು ಎನ್ನಲಾಗಿದೆ.

    2020ರ ಏಪ್ರಿಲ್​ 3 ರಂದು ಮುಂಬೈನಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನು ಕನ್ನಡದಲ್ಲಿ ಹಿನ್ನೆಲೆ ಧ್ವನಿ ನೀಡಿ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಫೇಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗೆ ಬೆಂಗಳೂರು ಪೊಲೀಸರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಮಿಷನರ್ ಕಮಲ್ ಪಂತ್ ಸೂಚಿಸಿದ್ದರು. ಈ ಬಗ್ಗೆ ದಕ್ಷಿಣ ವಿಭಾಗ ಸಿಐಎನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

    ಇದನ್ನೂ ಓದಿ: ಹಿಂದೆ ಮುಂದೆ ಯೋಚ್ನೆ ಮಾಡ್ದೇ ಮೆಸೇಜ್‌ ಫಾರ್ವರ್ಡ್‌ ಮಾಡ್‌ತಿದ್ರೆ ಅಷ್ಟೇ… ಕಮಿಷನರ್‌ ಏನು ಹೇಳಿದ್ದಾರೆ ನೋಡಿ…

    ಸದ್ಯ, ಈ ಪ್ರಕರಣದಲ್ಲಿ ಓರ್ವ ರಾಜಕೀಯ ಹಿನ್ನೆಲೆಯುಳ್ಳ ಪದ್ಮಾ ಹರೀಶ್ ಎನ್ನುವ ಮಹಿಳೆಗೆ ಪೊಲೀಸರು ನೋಟಿಸ್ ನೀಡಿದ್ದು, ಆಕೆ ವಿಚಾರಣೆಗೆ ಹಾಜರಾಗಿದ್ದಾರೆ. ಫೇಕ್ ವಿಡಿಯೋ ಪೋಸ್ಟ್ ಮಾಡಿದ್ದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್

    ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts