More

    ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್

    ನವದೆಹಲಿ : ಕೋವಾಕ್ಸಿನ್ ಕರೊನಾ ಲಸಿಕೆಯನ್ನು ಮೇ 1 ರಿಂದಲೇ ಕರ್ನಾಟಕ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೆ ನೇರವಾಗಿ ಪೂರೈಸುತ್ತಿರುವುದಾಗಿ ಉತ್ಪಾದಕ ಭಾರತ್ ಬಯೋಟೆಕ್​ ಹೇಳಿದೆ. ಲಸಿಕಾ ಅಭಿಯಾನದ ಯಶಸ್ಸಿಗಾಗಿ ನಿಯಮಿತ ಪೂರೈಕೆಯನ್ನು ಮುಂದುವರಿಸುವುದಾಗಿ ಹೈದರಾಬಾದ್​ ಮೂಲದ ಕಂಪೆನಿ ಭರವಸೆ ನೀಡಿದೆ.

    ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್​, ಛತ್ತೀಸ್‌ಗಡ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ಲಸಿಕೆ ಪೂರೈಸಿರುವುದಾಗಿ ಬಯೋಟೆಕ್​​ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ. ‘ನೀವೂ, ನಿಮ್ಮ ಪ್ರೀತಿಪಾತ್ರರೂ ಲಸಿಕೆ ಪಡೆಯಿರಿ’ ಎಂದು ಜನರಿಗೆ ಹೇಳಿದೆ.

    ಕೇಂದ್ರ ಸರ್ಕಾರದಿಂದ ಲಭ್ಯವಾಗಿರುವ ಹಂಚಿಕೆಯ ಮಾಹಿತಿಗೆ ಅನುಸಾರವಾಗಿ ಲಸಿಕೆಯನ್ನು ನೇರವಾಗಿ ಸರಬರಾಜು ಮಾಡಲು ಆರಂಭಿಸಲಾಗಿದೆ ಎಂದು ಕಂಪೆನಿಯ ಜಂಟಿ ಎಂಡಿ ಸುಚಿತ್ರ ಎಲ್ಲಾ ಈ ಮುನ್ನ ತಿಳಿಸಿದ್ದರು. ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಲಸಿಕೆಯ ಬೆಲೆಯನ್ನು ಡೋಸ್​ಗೆ 400 ರೂಪಾಯಿಯಂತೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಖರೀದಿ ದರವು ಡೋಸ್​ಗೆ 150 ರೂ.ಗಳಾಗಿವೆ. (ಏಜೆನ್ಸೀಸ್)

    “ಸೆಂಟ್ರಲ್ ವಿಸ್ತಾ ಖರ್ಚಲ್ಲಿ 62 ಕೋಟಿ ಡೋಸ್​ ಕರೊನಾ ಲಸಿಕೆ ನೀಡಬಹುದು”

    ನೋಂದಣಿ ಕಾರ್ಯ ಸ್ಥಗಿತ : ಮೇ 23 ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts