ಮಾಸ್ಕೋ: ಗಂಡನನ್ನು ತೊರೆದು ಮಲ ಮಗನನ್ನೇ ಮದುವೆಯಾಗಿ ಗರ್ಭಿಣಿಯಾಗಿರುವ ರಷ್ಯಾದ ಪ್ರಭಾವಿ ಮಹಿಳೆಯೊಬ್ಬರು ಮಲ ಮಗನಿಗೆ ತನ್ನ ಮೇಲಿರುವ ಆಕರ್ಷಣೆಯನ್ನು ಉಳಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ನಿರ್ಧರಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪಶ್ಚಿಮ ರಷ್ಯಾ ವಲಯದ ಕ್ರಾಸ್ನೊಡರ್ ಕ್ರೈ ನಗರದ ನಿವಾಸಿ ಮರಿನಾ ಬಲ್ಮಶೆವಾ (35) ಎಂಬಾಕೆ ಈ ಮೊದಲು ಅಲೆಕ್ಸಿ (45) ಅವರನ್ನು ವರಿಸಿದ್ದರು. 2007ರಿಂದ ಸುಮಾರು 10 ವರ್ಷಗಳ ಅವರ ವೈವಾಹಿಕ ಜೀವನವು ಡಿವೋರ್ಸ್ನಿಂದ ಕೊನೆಯಾಗಿದೆ. ಅಲೆಕ್ಸಿಗೂ ಈ ಮೊದಲೇ ಮದುವೆಯಾಗಿ ಡಿವೋರ್ಸ್ ಸಹ ಆಗಿತ್ತು. ವಿಚಿತ್ರವೇನೆಂದರೆ ಇದೀಗ ಅಲೆಕ್ಸಿಯ ಮೊದಲ ಪತ್ನಿಯ ಮಗ ವ್ಲಾಡಿಮಿರ್ ಶಾವ್ಯರಿನ್ನನ್ನೇ ಮರಿನಾ ವರಿಸಿದ್ದಾಳೆ.
ಇದನ್ನೂ ಓದಿ: ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ ಮಹಿಳೆ: ವಿಡಿಯೋ ವೈರಲ್ ಬೆನ್ನಲ್ಲೇ ಯೂಟ್ಯೂಬರ್ ಅರೆಸ್ಟ್!
ವ್ಲಾಡಿಮಿರ್ 7 ವರ್ಷದ ಬಾಲಕನಾಗಿದ್ದಾಗಿನಿಂದಲೂ ಮರಿನಾಳೇ ಸಾಕಿ ಸಲುಹಿದ್ದಳು. ಇದೀಗ ಗಂಡನಿಗೆ ಡಿವೋರ್ಸ್ ನೀಡಿ ಮಲಮಗನೊಂದಿಗೆ ಮದುವೆಯಾಗಿದ್ದಾಳೆ. ಸದ್ಯ ಮಲಮಗನಿಗೆ 20 ವರ್ಷ ವಯಸ್ಸಾಗಿದ್ದು, ಮರಿನಾಗೆ 35 ವರ್ಷ. ಕಳೆದ ವರ್ಷ ಸ್ಥಳೀಯ ನೋಂದಣಿ ಕಚೇರಿಯಲ್ಲಿ ಇಬ್ಬರು ಮದುವೆಯಾದ ವಿಡಿಯೋವನ್ನು ಮರಿನಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ತುಂಬು ಗರ್ಭಿಯಾಗಿರುವ ಮೆರಿನಾ ಮಗುವಿನ ನಿರೀಕ್ಷೆಯಲ್ಲಿದ್ದಾಳೆ.
ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರ ಮಾಡಿರುವ ಮರಿನಾ, ವರ್ಷಗಳ ಹಿಂದೆಯೇ ಅತಿಯಾದ ಚರ್ಮವನ್ನು ತೆಗೆದು ಹಾಕುವ ಅಬ್ಡೋಮಿನೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಮುಖ, ಕುತ್ತಿಗೆ ಹಾಗೂ ಹಣೆ ಸೇರಿದಂತೆ ಇನ್ನುಳಿದ ಕಾಸ್ಮೆಟಿಕ್ ಸರ್ಜರಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ನಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ವಿಚಿತ್ರವಾಗಿ ವರ್ತಿಸತೊಡಗಿದ್ದಾಳೆ: ಏನು ಮಾಡಲಿ?
ನನ್ನ ಯುವ ಪತಿಗಾಗಿ ಮೇಕಪ್ ಮಾಡಿಕೊಳ್ಳುವಂತೆ ಅನೇಕರು ಸಲಹೆ ನೀಡಿದರು. ಆದರೆ, ನನ್ನ ಸೌಂದರ್ಯವನ್ನು ನೋಡದೇ ಆತ ಪ್ರೀತಿಯಲ್ಲಿ ಬಿದ್ದಿದ್ದ. ನಾನು ಈ ಹೇಗೆ ಇದ್ದೇನೆ ಅದಕ್ಕಿಂದ ಉತ್ತಮವಾಗಿ ಕಾಣಲು ಬಯಸಿಲ್ಲ. ಆದರೂ ಆತನ ಆಕರ್ಷಣೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಮದುವೆ ನಂತರ ಮರಿನಾ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಮಗುವಿನ ಬೆಳವಣಿಗೆಗೆ ಕಾರಣವಾಗಿ ತಾಯಿ ಸ್ಥಾನ ತುಂಬಿದ ಮಹಿಳೆ ಅದೇ ಬಾಲಕನನ್ನು ವರಿಸುವುದು ಅನೈತಿಕ ಎಂದು ಜರಿದಿದ್ದಾರೆ. ಹೀಗೆ ಮರಿನಾ ವಿರೋಧಿಸಿ ಹಲವಾರು ಕಾಮೆಂಟ್ಗಳು ಹರಿದುಬಂದಿವೆ. ಇದೇ ವಿಚಾರದಿಂದ ಇದೀಗ ರಷ್ಯಾದಲ್ಲಿ ಮರಿನಾ ಹೆಡ್ಲೈನ್ ಆಗಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಆರು ತಿಂಗಳ ಗರ್ಭಿಣಿಯನ್ನು ರೇಪ್ ಮಾಡಿ ಮದುವೆಯಾದ! ಇನ್ನೂ ಮೂರು ಜನರ ಜತೆ ಮಲಗೆಂದು ಹೇಳಿದ!
5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!
ಯುವತಿಗೆ ಮನಸೋತು ಸಲಿಂಗಕಾಮ ತೊರೆದವನ ರುಂಡ-ದೇಹ ಇಬ್ಭಾಗ! ಬೆಚ್ಚಿಬೀಳಿಸುತ್ತೆ ಈ ಘಟನೆ
ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?