More

    ದೆಹಲಿಯ ದ್ವಾರಕಾದಲ್ಲಿ ಬಂತು ಪ್ರಾಣಿಗಳಿಗೇ ಮೀಸಲಾದ ಮಸಣ; ಸಿಗಲಿದೆ ವಿಧಿ ವಿಧಾನಗಳ ಅಂತ್ಯಸಂಸ್ಕಾರ

    ನವದೆಹಲಿ: ರಾಷ್ಟ್ರ ರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಾಣಿಗಳಿಗೇ ಮೀಸಲಾದ ಮಸಣವೊಂದು ನಿರ್ಮಾಣವಾಗುತ್ತಿದೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್​ 700 ಚದರ ಮೀಟರ್ ವ್ಯಾಪ್ತಿಯ ಮಸಣವನ್ನು ನಿರ್ಮಿಸುತ್ತಿದೆ. ಬೆಕ್ಕು ಮತ್ತು ನಾಯಿಗಳ ಮರಣಾನಂತರ ಅವುಗಳ ಶವ ಸಂಸ್ಕಾರಕ್ಕೆಂದೇ ಮೀಸಲಾದ ಮೊದಲ ಸಾರ್ವಜನಿಕ ಪ್ರಾಣಿ ಸ್ಮಶಾನ ಇದಾಗಿರಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮನುಷ್ಯರ ಅಂತ್ಯ ಸಂಸ್ಕಾರ ಯಾವ ರೀತಿ ವಿಧಿ ವಿಧಾನದಂತೆ ನೆರವೇರಿಸಲಾಗುತ್ತದೋ ಅದೇ ರೀತಿ ಪ್ರಾಣಿಗಳ ಸಂಸ್ಕಾರಕ್ಕೆ ನಿಗದಿಯಾಗಿರುವ ವಿಧಿ ವಿಧಾನಗಳನ್ನು ಇಲ್ಲಿ ನೆರವೇರಿಸುವ ಚಿಂತನೆ ಇದ್ದು, ಚಿತಾ ಭಸ್ಮವನ್ನು 15 ದಿನ ಕಾಲ ಸಂರಕ್ಷಿಸುವುದಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಅಂತ್ಯ ಸಂಸ್ಕಾರ ಶುಲ್ಕ ನಿಗದಿ ಮಾಡಲಾಗಿದ್ದು, ಮೂವತ್ತು ಕಿಲೋ ತೂಕ ತನಕದ ನಾಯಿಯ ಅಂತ್ಯ ಸಂಸ್ಕಾರಕ್ಕೆ 2,000 ರೂಪಾಯಿ, ಅದಕ್ಕೂ ಮೇಲಿನ ತೂಕದ್ದಕ್ಕೆ 3,000 ರೂಪಾಯಿ ನಿಗದಿ ಮಾಡಲಾಗಿದೆ.

    ಇದನ್ನೂ ಓದಿ: ಕೃಷಿ ಕಾನೂನು ವಿಚಾರ: ಡಿ.31ಕ್ಕೆ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಕೇರಳ ಸರ್ಕಾರ

    ಎರಡು ಅಂತ್ಯ ಸಂಸ್ಕಾರ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು, ಒಂದು ಘಟಕ 150 ಕಿಲೋ ಸಾಮರ್ಥ್ಯದ್ದಾದರೆ ಇನ್ನೊಂದು ಬೀದಿ ನಾಯಿಗಳಿಗಾಗುವಂತೆ 100 ಕಿಲೋ ಸಾಮರ್ಥ್ಯದ್ದಾಗಿರಲಿದೆ. ಇದು ಪಿಪಿಪಿ ಮಾಡೆಲ್​ನಲ್ಲಿ ಕಾರ್ಯಾಚರಿಸಲಿದ್ದು, ಸಾರ್ವಜನಿಕ ಟೆಂಡರ್​ ಕರೆಯಲು ಪಾಲಿಕೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಹೌಸ್ ಆಫ್ ಲಾರ್ಡ್ಸ್​ ಪ್ರತಿನಿಧಿಯಾಗಲೆತ್ನಿಸಿದ ಖಲಿಸ್ತಾನ ಬೆಂಬಲಿಗ: ರಾಜತಾಂತ್ರಿಕ ಬಿಕ್ಕಟ್ಟು ತಪ್ಪಿಸಿತು ಬ್ರಿಟನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts