More

    ‘ಆದಿಪುರುಷ್​’ನಲ್ಲಿ ಲಕ್ಷ್ಮಣ ಆಗ್ತಾರಾ ಟೈಗರ್​ ಶ್ರಾಫ್​?

    ಮುಂಬೈ: ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಸದ್ಯಕ್ಕೆ ‘ರಾಧೇ ಶ್ಯಾಮ್​’ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್​, ಆ ಚಿತ್ರ ಮುಗಿಸಿದ ನಂತರ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆ ನಂತರ ‘ಆದಿಪುರುಷ್​’ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಮಣಿಕರ್ಣಿಕಾ ನಿರ್ದೇಶಿಸಲು ಕಂಗನಾ ತೀರ್ಮಾನ

    ಈ ಮಧ್ಯೆ, ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಈ ಪೈಕಿ ಯಾವುದು ನಿಜವೋ, ಯಾವುದು ಸುಳ್ಳು ಎಂದು ಗೊತ್ತಾಗದಷ್ಟು ಹಲವು ಗೊಂದಲಗಳಿವೆ. ಈಗ ಅದೆಲ್ಲದರ ಸಾಲಿಗೆ ಇನ್ನೊಂದು ಹೊಸ ವಿಷಯ ಸಹ ಸೇರಿಕೊಂಡಿದೆ. ಅದೇನೆಂದರೆ, ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್​ ಕಾಣಿಸಿಕೊಂಡರೆ, ಲಕ್ಷ್ಮಣನಾಗಿ ಟೈಗರ್​ ಶ್ರಾಫ್​ ಅಭಿನಯಿಸುತ್ತಾರಂತೆ. ಹಾಗಂತ ಒಂದು ಸುದ್ದಿ ಓಡಾಡುತ್ತಿದೆ.

    ಟೈಗರ್​ ಶ್ರಾಫ್​ ಅಷ್ಟು ದೊಡ್ಡ ನಟರಾಗಿದ್ದು, ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಯೊಂದು ಇದೀಗ ಕೇಳಿಬಂದಿದೆ. ಮೇಲಾಗಿ ಹಲವು ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವುದರಿಂದ, ಅದೆಲ್ಲದರಿಂದ ಬಿಡುವು ಮಾಡಿಕೊಂಡು, ಈ ಚಿತ್ರದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆಯೂ ಇದೆ. ಇಷ್ಟಕ್ಕೂ ಈ ವಿಚಾರವಾಗಿ ಟೈಗರ್​ ಶ್ರಾಫ್​ ಆಗಲೀ, ಚಿತ್ರತಂಡದವರಾಗಲೀ ಏನೂ ಮಾತಾಡಿಲ್ಲ. ಹಾಗಾಗಿ, ಸದ್ಯಕ್ಕೆ ‘ಆದಿಪುರುಷ್​’ ಚಿತ್ರದಲ್ಲಿ ಟೈಗರ್​ ನಟಿಸುತ್ತಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

    ಇನ್ನು, ಸಿನಿಮಾ ಸೆಟ್ಟೇರುವ ಮುನ್ನವೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆಯಾಗಿದ್ದು, 2022ರ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆಯೆಂದು ಚಿತ್ರತಂಡವೇ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದೆ. ಶೂಟಿಂಗ್​ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಾಫಿಕ್ಸ್ ಇರಲಿದ್ದು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ತಂಡ ಮೀಸಲಿಡಬೇಕಿದೆ. ಚಿತ್ರದ ಒಟ್ಟಾರೆ ಬಜೆಟ್​ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್​ಎಕ್ಸ್​ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಇದನ್ನೂ ಓದಿ: ಆರ್​ಆರ್​ಆರ್​ ಬಿಡುಗಡೆ: ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಬೋನಿ …

    ‘ಆದಿಪುರುಷ್​’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರವನ್ನು ಮಾಡಿದರೆ, ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ.

    ಗ್ಲಾಮರ್ ಗೊಂಬೆ ಈಗ ಗ್ಯಾಂಗ್​ಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts