More

    ಗ್ಲಾಮರ್ ಗೊಂಬೆ ಈಗ ಗ್ಯಾಂಗ್​ಸ್ಟರ್

    ಬೆಂಗಳೂರು: ಶಾನ್ವಿ ಶ್ರೀವಾತ್ಸವ್ ಇದುವರೆಗೂ ಪಕ್ಕದ್ಮನೆ ಹುಡುಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅವರನ್ನು ಬೇರೆ ಇನ್ಯಾವ ಪಾತ್ರದಲ್ಲಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬ್ರಾಂಡ್ ಆಗಿದ್ದ ಅವರು, ಇದೀಗ ಅದರಿಂದ ಹೊರಬಂದಿದ್ದಾರೆ. ಹೊಸ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಈ ಹಿಂದೆ, ‘ನಾನು ಅದು ಮತ್ತು ಸರೋಜ’ ಮತ್ತು ‘ಆನ’ ಚಿತ್ರಗಳನ್ನು ನಿರ್ವಿುಸಿದ್ದ ಪೂಜಾ ವಸಂತ್ ಕುಮಾರ್, ಇದೀಗ ‘ಬ್ಯಾಂಗ್’ ಎಂಬ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಈ ಚಿತ್ರದ ಅರ್ಧ ಚಿತ್ರೀಕರಣ ಸಹ ಮುಗಿದಿದೆ. ಎರಡು ದಿನಗಳಲ್ಲಿ ನಡೆಯುವ ಈ ಕಥೆಯಲ್ಲಿ, ಶಾನ್ವಿ ಸ್ಟೈಲಿಶ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಹೀರೋ ಯಾರು ಎಂಬ ಪ್ರಶ್ನೆ ಬರಬಹುದು. ಇಲ್ಲಿ ಆ ತರಹ ಹೀರೋ, ವಿಲನ್ ಅಂತ ಇರುವುದಿಲ್ಲವಂತೆ. ಕಥೆ ಮತ್ತು ಪಾತ್ರಗಳು ವಿಭಿನ್ನವಾಗಿರುವುದರಿಂದಲೇ ಶಾನ್ವಿ ಒಪ್ಪಿಕೊಂಡು ಬಣ್ಣ ಹಚ್ಚಿದ್ದಾರಂತೆ. ಶಾನ್ವಿ ಜತೆಗೆ ಈ ಚಿತ್ರದಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್ ಮಗಳು ನಟಿ ಶ್ರಾವ್ಯಾ ಸಹ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ಗಣೇಶ್ ಪರಶುರಾಮ್ ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಅವರಿಗೆ ಇದೆ ಮೊದಲ ಚಿತ್ರ. ಋತ್ವಿಕ್ ಮುರಳೀಧರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಉದಯ್ಲೀಲಾ ಛಾಯಾಗ್ರಹಣ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts