More

    ಈ ನಿರ್ದೇಶಕನ ಸಿನಿಮಾದಲ್ಲಿ ಅಪ್ಪ ಮಗನಾಗಿ ಕಾಣಿಸಿಕೊಳ್ಳಲಿದ್ದಾರಂತೆ ಶಾರುಖ್!

    ಮುಂಬೈ: ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಕಾಂಬಿನೇಷನ್​ನಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹರಿದಾಡಿದ್ದಾಗ ಅಭಿಮಾನಿ ವಲಯದಲ್ಲಿ ಮನೆ ಮಾಡಿದ್ದ ಸಂಭ್ರಮ ಅಷ್ಟಿಷ್ಟಲ್ಲ. ಕಳೆದ ವರ್ಷವೇ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಇದೂವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಜತೆಗೆ ಶಾರುಖ್​ ನಿಭಾಯಿಸಲಿರುವ ಪಾತ್ರದ ಬಗ್ಗೆಯೂ!

    ಇದನ್ನೂ ಓದಿ:  ಶ್ರೀಲೀಲಾ ಮನೆಯಲ್ಲಿ ನವರಾತ್ರಿ ರಂಗು

    ಹೌದು, ಅಟ್ಲಿ ಮತ್ತು ಶಾರುಖ್​ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆಯಂತೆ. ಈ ಸಿನಿಮಾದಲ್ಲಿ ಶಾರುಖ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಅಭಿಮಾನಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಟ್ಲಿ ನಿರ್ದೇಶನದ ಸಿನಿಮಾಗಳಲ್ಲಿ ದ್ವಿಪಾತ್ರ ಮತ್ತು ತ್ರಿಪಾತ್ರಗಳೇ ಹೈಲೈಟ್​. ಇದೀಗ ಆ ಪ್ರಯೋಗ ಶಾರುಖ್​ ಸಿನಿಮಾದಲ್ಲಿಯೂ ಆಗಲಿದೆ ಎಂದೇ ಹೇಳಲಾಗುತ್ತಿದೆ.

    ಅಪ್ಪ ಮಗನಾಗಿ ಶಾರುಖ್​ ಅವರೇ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ವಾರ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಶಾರುಖ್ ಬಿಜಿಯಾಗಿದ್ದಾರೆ. ಇತ್ತ ರಾಜ್​ಕುಮಾರ್ ಹಿರಾನಿ ಸಿನಿಮಾದಲ್ಲೂ ಶಾರುಖ್​ ನಟಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ, ಕಥೆ ವಿಚಾರವಾಗಿ ರಾಜ್​ಕುಮಾರ್ ಕೆಲಸ ಮುಂದುವರಿಸಿದ್ದಾರೆ. ಹಾಗಾಗಿ 2021ಕ್ಕೆ ಅಟ್ಲಿ ನಿರ್ದೇಶನದ ಸಿನಿಮಾ ಸೆಟ್ಟೇರುವುದು ಖಚಿತ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಏನಾಗತ್ತೆ 1980ರಲ್ಲಿ?: 40 ವರ್ಷ ಹಿಂದಕ್ಕೆ ಹೋದ ಪ್ರಿಯಾಂಕಾ

    ಇತ್ತೀಚಿನ ಕೆಲ ತಿಂಗಳಿಂದ ಸಿನಿಮಾ ಒಪ್ಪಿಕೊಳ್ಳುವ ವಿಚಾರವಾಗಿಯೇ ಶಾರುಖ್​ ಖಾನ್​ ಸುದ್ದಿಯಲ್ಲಿದ್ದರು. ಪಠಾಣ್​ ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದರಂತೆ, ಇದೀಗ ಆ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ನವೆಂಬರ್​ನಲ್ಲಿ ಚಿತ್ರದ ಶೂಟಿಂಗ್​ನಲ್ಲಿ ಶಾರುಖ್​ ಖಾನ್​ ಭಾಗವಹಿಸಲಿದ್ದಾರೆ. ಈ ಮೂಲಕ ಸುದೀರ್ಘ 678 ದಿನಗಳ ಬಳಿಕ ಮತ್ತೆ ಕ್ಯಾಮರಾ ಮುಂದೆ ನಿಲ್ಲುವ ನಿರ್ಧಾರ ತೆಗೆದುಕೊಂಡಿದ್ದಾರೆ ಶಾರುಖ್​.

    ರಿಯಾ ರೀತಿ ಸಂಜನಾಗೂ ಜಾಮೀನು ನೀಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts