More

    ಶ್ರೀಲೀಲಾ ಮನೆಯಲ್ಲಿ ನವರಾತ್ರಿ ರಂಗು

    ನಮ್ಮ ಮನೆಯಲ್ಲಿ ನವರಾತ್ರಿ ಅತೀ ಸಂಭ್ರಮದಿಂದ ಆಚರಿಸುವ ಹಬ್ಬ. ಚಿಕ್ಕಂದಿನಿಂದಲೂ ನಮ್ಮ ಮನೆಯಲ್ಲಿ ವಿಜಯದಶಮಿಯ ಆರಣೆಯ ಸಡಗರ ಹೆಚ್ಚೇ. ಹಬ್ಬಕ್ಕೂ ಒಂದು ವಾರ ಮುಂಚೆಯೇ ತಯಾರಿ ಶುರುವಾಗುತ್ತದೆ. ಮೂವರು ಪಂಡಿತರಿಂದ ಬೆಳಗ್ಗೆಯಿಂದ ಆರಂಭವಾದ ಹೋಮ ಹವನ ರಾತ್ರಿವರೆಗೂ ನಡೆಯುತ್ತದೆ. ಮೊದಲ ದಿನದಿಂದ ಆರಂಭವಾದ ಈ ಹೋಮ ಹವನ ಒಂಬತ್ತು ದಿನ ಮುಂದುವರಿಯುತ್ತದೆ. ಒಂದೊಂದು ದಿನ ಒಂದೊಂದು ದೇವಿಯ ಪೂಜಾ ಕಾರ್ಯ ನೆರವೇರುವುದರಿಂದ ಆ ದೇವಿಗೆ ಇಷ್ಟವಾದ ಆಹಾರವನ್ನೇ ನೈವೇದ್ಯವಾಗಿ ಸಿದ್ಧಪಡಿಸಲಾಗುತ್ತದೆ. ವಿಭಿನ್ನ ರೀತಿಯಲ್ಲಿ ಅಲಂಕಾರವನ್ನೂ ಮಾಡಲಾಗುತ್ತದೆ. ಗಣಪತಿ, ಮಹಾವಿದ್ಯಾ, ನವದುರ್ಗೆಯರ ಪೀಠವನ್ನು ಸಿದ್ಧಪಡಿಸಿ ದೇವಸ್ಥಾನದಲ್ಲಿನ ವಿಧಿವಿಧಾನಗಳಂತೆ ನಮ್ಮ ಮನೆಯಲ್ಲಿ ಈ ಹಬ್ಬವನ್ನು ಆಚರಿಸುತ್ತೇವೆ. ಅನ್ನಪೂರ್ಣೆಶ್ವರಿ ದಿನ, ಸರಸ್ವತಿ ದಿನ, ಲಲಿತೆಯ ದಿನ ಹೀಗೆ ಒಂಬತ್ತು ದಿನ ಒಂಬತ್ತು ದೇವಿಯರ ಪೂಜಾ ಕೈಂಕರ್ಯ ನೆರವೇರುತ್ತದೆ. ಈ ಆಚರಣೆಯಲ್ಲಿ ಅಮ್ಮನ ಕೆಲಸವೇ ಹೆಚ್ಚು. ನನ್ನದೇನಿದ್ದರೂ ಅಲಂಕಾರವಷ್ಟೇ. ಸಮಯ ಸಿಕ್ಕಾಗಲೆಲ್ಲ ಜಪಕ್ಕೆ ಕೂರುತ್ತೇನೆ. ಇನ್ನೊಂದು ವಿಶೇಷ ಏನೆಂದರೆ ಚಿಕ್ಕಂದಿನಿಂದ ಹಬ್ಬದ ವೇಳೆಯಲ್ಲಿ ಕೇಸರಿ ಬಾತ್, ಸಿಹಿ ಪೊಂಗಲ್, ಪಾಯಸ ಮಾಡುತ್ತೇನೆ. ಈಗಲೂ ಅದು ಮುಂದುವರಿದಿದೆ. ಮನೆಯಲ್ಲಿ ಗೊಂಬೆಗಳ ರಾಶಿಯನ್ನೇ ಚಂದವಾಗಿ ಅಲಂಕರಿಸಲಾಗಿದೆ.

    | ಶ್ರೀಲೀಲಾ, ನಟಿ

    ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ-19 ಲಕ್ಷ ಉದ್ಯೋಗ, ಉಚಿತ ಲಸಿಕೆ, ಜೆಡಿಯು ಪ್ರಣಾಳಿಕೆ- ಸಾಥ್ ನಿಶ್ಚಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts