More

    ವ್ಯಕ್ತಿಯನ್ನು ಬೆತ್ತಲೆ ಓಡಿಸಿದ ಹೆಣ್ಣು ಹಂದಿಗೆ ಮರಣದಂಡನೆ ಶಿಕ್ಷೆ: ವರ್ಷದ ಕೊನೆಗೆ ಹಂದಿಯ ಅಂತ್ಯ!

    ಬರ್ಲಿನ್​: ಕಳೆದ ವಾರ ಜರ್ಮನಿ ರಾಜಧಾನಿ ಬರ್ಲಿನ್​ನ ಕೆರೆಯೊಂದರ ಬಳಿ ಹಂದಿಯೊಂದನ್ನು ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಬೆನ್ನಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದೀಗ ಆ ಹಂದಿಗೆ ಮರಣದಂಡನೆ ಶಿಕ್ಷೆ ಎದುರಾಗಿದೆ.

    ಇದೇನಪ್ಪಾ ಕೇವಲ ಅಟ್ಟಾಡಿಸಿದ್ದಕ್ಕೆ ಹಂದಿಗೆ ಇಂಥಾ ಕಠೋರ ಶಿಕ್ಷೆನಾ ಎಂದು ಹುಬ್ಬೇರಿಸುವ ಮುನ್ನ ಮುಂದೆ ಓದಿ. ಅಂದಹಾಗೆ ಈ ಘಟನೆ ಬರ್ಲಿನ್​ನ ಗ್ರನ್​ವೆಲ್​ ಫಾರೆಸ್ಟ್​ನ ಬಾತಿಂಗ್ ಸ್ಪಾಟ್ ಆಗಿರುವ ಟ್ಯೂಫೆಲ್ಸೀ ಲೇಕ್​ನಲ್ಲಿ ನಡೆದಿತ್ತು.

    ಇದನ್ನೂ ಓದಿ: VIDEO| ಹಾಡಹಗಲಲ್ಲೇ ಲವರ್​ನಿಂದ ಕಿಡ್ನಾಪ್​ ಆಗಿದ್ದ ಯುವತಿ ಪತ್ತೆ: ಕಾರು ಬಿಟ್ಟು ಪ್ರಿಯಕರ ಪರಾರಿಯಾಗಿದ್ದೇಕೆ?

    ಬೆತ್ತಲೆ ವ್ಯಕ್ತಿ ಹೆಣ್ಣು ಹಂದಿಯನ್ನು ಅಟ್ಟಿಸಿಕೊಂಡು ಹೋಗ್ತಾ ಇರೋದನ್ನು ನೋಡಿ ಜನ ದಂಗಾಗಿ ನಿಂತಿರುವ ದೃಶ್ಯ ಮತ್ತು ಹಂದಿಯ ಹಿಂದೆಯೇ ಎರಡು ಹಂದಿಮರಿಗಳೂ ಓಡ್ತಿರೋ ದೃಶ್ಯ ಫೋಟೋದಲ್ಲಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

    ಶುಕ್ರವಾರ ಘಟನೆ ಬಗ್ಗೆ ಮಾತನಾಡಿರುವ ಬರ್ಲಿನ್​ ಅರಣ್ಯ ಸಚಿವಾಲಯದ ವಕ್ತಾರ, ಅಕ್ಟೋಬರ್​ನಲ್ಲಿ ಬೇಟೆ ಕಾಲ ಆರಂಭವಾದ ಹೆಣ್ಣು ಹಂದಿ ಮತ್ತದರ ಎರಡು ಮರಿಗಳು ಬೇಟೆಯಾಗಲಿವೆ ಎಂದಿದ್ದಾರೆ. ಅಂದೇ ಆ ಹಂದಿಗಳನ್ನು ಕೊಲ್ಲಬಹುದಿತ್ತು. ಆದರೆ, ಅದು ಸಕಾಲವಾಗಿರಲಿಲ್ಲ. ಅಲ್ಲದೆ, ಮರಿಗಳು ಇನ್ನು ಸಣ್ಣದಾಗಿದ್ದವು. ಆದರೆ, ನಮ್ಮ ಏಜೆನ್ಸಿ ಆ ಹಂದಿ ಮರಿಗಳ ಮೇಲೆ ಕಣ್ಣಿಟ್ಟಿದೆ ಎಂದಿದ್ದಾರೆ.

    ಇನ್ನು ಕರೆಯ ಸುತ್ತಮುತ್ತಲು ಇರುವ ಪ್ರದೇಶ ಬೇಟೆಗಾರರಿಂದಲೇ ಪ್ರಸಿದ್ಧಿಯಾಗಿದೆ. ಈ ವರ್ಷದ ಕೊನೆಯಲ್ಲಿ ಅವುಗಳ ಅಂತ್ಯ ಸಾಧ್ಯವಿದೆ ಎಂದು ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇನ್ನು ಕಾಡು ಹಂದಿಗಳನ್ನು ಬರ್ಲಿನ್​ನಲ್ಲಿ ಪರವಾನಗಿ ಪಡೆದ ಬೇಟೆಗಾರರು ನಿಯಮಿತವಾಗಿ ಬೇಟೆಯಾಡುತ್ತಲೇ ಇರುತ್ತಾರೆ. ಆಫ್ರಿಕ್​ ಹಂದಿ ಜ್ವರದಂತಹ ಕಾಯಿಲೆಗಳು ಜರ್ಮನಿಯಾದ್ಯಂತ ಹರಡಬಾರದು ಎಂಬ ಕಾರಣಕ್ಕೆ ಹಂದಿಗಳ ಸಂಖ್ಯೆ ಹೆಚ್ಚಾಗದಂತೆ ಜರ್ಮನಿಯಲ್ಲಿ ಎಚ್ಚರ ವಹಿಸಲಾಗುತ್ತಿದೆ.

    ಪ್ರತಿ ವರ್ಷ ಸುಮಾರು 1000 ದಿಂದ 2000 ಕಾಡು ಹಂದಿಗಳನ್ನು ಬರ್ಲಿನ್​ನಲ್ಲಿ ಬೇಟೆಯಾಡಲಾಗುತ್ತದೆ. ಇನ್ನು ಹಂದಿಗಳು ಕೆಲವೊಮ್ಮೆ ಆಹಾರಕ್ಕಾಗಿ ವಸತಿ ಪ್ರದೇಶಕ್ಕೆ ಬಂದಾಗ ಮಾನವರ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿವೆ. ಇದರಿಂದ ಅನೇಕರು ಗಾಬರಿಯೂ ಆಗಿದ್ದಾರೆ.

    ಇದನ್ನೂ ಓದಿ: ಹುಟ್ಟಿನಮೂಲ ಕೆದಕಿ ಟ್ರಂಪ್ ವಾಗ್ದಾಳಿ: ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ವಿರುದ್ಧ ಟೀಕೆ

    ಅಂದಹಾಗೆ ಅಡೆಲೆ ಲಾಂಡೌರ್​ ಎಂಬ ಮಹಿಳೆ ಕಳೆದ ವಾರ ಹಂದಿಯ ಫೋಟೋಗಳನ್ನು ತೆಗೆದು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ- ನೇಚರ್ ಸ್ಟ್ರೈಕ್ಸ್ ಬ್ಯಾಕ್​! ಬಿಡಾಡಿ ಹಂದಿ ಟ್ಯೂಫೆಲ್ಸೀಯಲ್ಲಿ ಬೇಟೆಗಿಳಿದುದು ಹೀಗೆ.. ಲೇಕ್​ನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಬ್ಯಾಗ್​ನಿಂದ ಪಿಜ್ಜಾ ತಿಂದು ತೇಗಿದ ಬಿಡಾಡಿ ಹಂದಿ ಮತ್ತು ಅದರ ಮರಿಗಳು ಇನ್ನೂ ಹೆಚ್ಚಿನ ತಿನಿಸಿಗಾಗಿ ಹುಡುಕಾಡುತ್ತಿದ್ದವು. ಆಗ ಅವುಗಳ ಕಣ್ಣಿಗೆ ಹಳದಿ ಬಣ್ಣದ ಬ್ಯಾಗ್ ಬಿದ್ದಿದೆ. ಸೀದಾ ಮುನ್ನುಗ್ಗಿ ಹಳದಿ ಬಣ್ಣದ ಬ್ಯಾಗ್ ಕಚ್ಚಿಕೊಂಡು ಓಡತೊಡಗಿತು. ಲೇಕ್​ನಲ್ಲಿ ಈಜಾಡುತ್ತಿದ್ದ ಈ ವ್ಯಕ್ತಿ ಸೀದಾ ಹುಟ್ಟುಡುಗೆಯಲ್ಲೇ ಓಡತೊಡಗಿದ ಎಂದು ಬರೆದುಕೊಂಡಿದ್ದರು. (ಏಜೆನ್ಸೀಸ್​)

    PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts