More

  ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಮುಂದೆ ಬೆತ್ತಲೆಯಾಗಿ ತಿರುಗಾಡಿದ ವ್ಯಕ್ತಿ!

  ದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಗುರುವಾರ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ಯಾಂಪಸ್‌ನೊಳಗೆ ವಿದ್ಯಾರ್ಥಿನಿಯರ ಮುಂದೆ ಅಪರಿಚಿತ ಯುವಕನೊಬ್ಬ ಬೆತ್ತಲೆಯಾಗಿ ತಿರುಗಾಡುತ್ತಿದ್ದ. ಅಷ್ಟೇ ಅಲ್ಲ, ಆಡಳಿತ ಕಟ್ಟಡದ ಬಳಿ ವಿದ್ಯಾರ್ಥಿನಿಯರನ್ನು ನೋಡಿದ ಯುವಕ ಅಶ್ಲೀಲ ಕೃತ್ಯಗಳನ್ನು ಮಾಡಲು ಆರಂಭಿಸಿದ್ದಾನೆ.

  ಜೆಎನ್‌ಯು ಆಡಳಿತ ಬ್ಲಾಕ್‌ನ ಪಕ್ಕದಲ್ಲಿರುವ ಸ್ಥಳೀಯ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಅಲ್ಲಿ ಅಪರಿಚಿತ ಯುವಕ ಮಹಿಳೆಯರನ್ನು ದಿಟ್ಟಿಸುತ್ತಾ ಅನುಚಿತವಾಗಿ ಸ್ಪರ್ಶಿಸುತ್ತಿದ್ದನು.

  ಮೂಲಗಳ ಪ್ರಕಾರ, ಈ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿ ಮುಖ್ಯದ್ವಾರದಲ್ಲಿ ಭದ್ರತೆ ಹೆಚ್ಚಿಸುವಂತೆ ಒತ್ತಾಯಿಸಿದರು. ಸೆಕ್ಯೂರಿಟಿ ಸಮ್ಮುಖದಲ್ಲಿಯೇ ಇದೆಲ್ಲ ನಡೆಯುತ್ತಿದ್ದರೂ ಏನೂ ಮಾಡಲಾಗದೆ ಸುಮ್ಮನಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

  ಇದೀಗ ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
  ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ಅವರು ತಕ್ಷಣ ವಿಶ್ವವಿದ್ಯಾಲಯದ ಭದ್ರತಾ ಶಾಖೆಗೆ ತಿಳಿಸುವಂತೆ ಕಾಲೇಜು ಆಡಳಿತವು ಸದ್ಯ ವಿದ್ಯಾರ್ಥಿಗಳನ್ನು ಎಚ್ಚರಿಸಿದೆ.

  ಇದೀಗ ಘಟನೆಯನ್ನು ಖಂಡಿಸಿರುವ ವಿಶ್ವವಿದ್ಯಾನಿಲಯವು ಹೇಳಿಕೆಯಲ್ಲಿ, “ಅಪರಿಚಿತ ವ್ಯಕ್ತಿ ಸಾರ್ವಜನಿಕವಾಗಿ ನಗ್ನ ಕೃತ್ಯದಲ್ಲಿ ತೊಡಗಿದ್ದದು ಜೆಎನ್‌ಯು ಭದ್ರತಾ ಶಾಖೆಯ ಗಮನಕ್ಕೆ ಬಂದಿದೆ. ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದೆ. ಆಡಳಿತವು ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅದು ಹೇಳಿದೆ.

  ಮದುವೆ ಮನೆಯಲ್ಲಿ ನೋಡನೋಡುತ್ತಿದ್ದಂತೆ ಹಠಾತ್ ಕುಸಿದು ಸಾವನ್ನಪ್ಪಿದ ಯುವಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts