More

    ಅಂದಗಾತಿ ಪತ್ನಿಗೆ ಟಾರ್ಚರ್!: ತಲೆ ಬೋಳಿಸಿಕೊಂಡು ವಿಕಾರವಾಗಿರಲು ಒತ್ತಾಯಿಸಿ ಚಿತ್ರಹಿಂಸೆ

    ಅವಿನಾಶ ಮೂಡಂಬಿಕಾನ

    ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಯಾದ ಬಳಿಕ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ, ಬ್ಲಾ್ಯಕ್​ವೆುೕಲ್, ಹಲ್ಲೆ, ಲೈಂಗಿಕ ದೌರ್ಜನ್ಯ ಎಸಗುವ ಗಂಡಂದಿರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಹೈಕೋರ್ಟ್ ವಕೀಲ ತನ್ನ ಪತ್ನಿ ಸುಂದರವಾಗಿ ಕಾಣಬಾರದು ಎಂಬ ಕಾರಣಕ್ಕೆ ಕೂದಲು ಕತ್ತರಿಸಿಕೊಳ್ಳುವಂತೆ ಚಿತ್ರಹಿಂಸೆ ಕೊಟ್ಟಿದ್ದು, ಇದಕ್ಕೊಪ್ಪದಿದ್ದಕ್ಕೆ ಮನೆಯಿಂದ ಹೊರದಬ್ಬಿದ್ದಾನೆ. ಮನೆಯಿಂದ ಹೊರಬಂದು ದಿಕ್ಕು ತೋಚದ ಮಹಿಳೆ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾಳೆ. ಸಿಬ್ಬಂದಿ ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಸ್ವಾಧಾರ್ ಗೃಹಕ್ಕೆ ಕರೆದೊಯ್ದು ಆಶ್ರಯ ಕೊಟ್ಟಿದ್ದಾರೆ.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಏನಿದು ಪ್ರಕರಣ?: 8 ವರ್ಷಗಳ ಹಿಂದೆ ದಂಪತಿಗೆ ಮದುವೆಯಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಕೆಲ ದಿನಗಳ ಬಳಿಕ ಪತ್ನಿಗೆ ಹಲ್ಲೆ ನಡೆಸಿ ಕಿರುಕುಳ ನೀಡಲು ಆರಂಭಿಸಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ಸಂತ್ರಸ್ತೆಯ ಪಾಲಕರು ಅನುಸರಿಸಿಕೊಂಡು ಹೋಗುವಂತೆ ಮಗಳಿಗೆ ಬುದ್ಧಿವಾದ ಹೇಳುತ್ತಿದ್ದರು. ಬೇರೆ ದಾರಿ ಕಾಣದೆ ಪತಿಯ ಹಿಂಸೆ ಸಹಿಸಿಕೊಂಡಿದ್ದಳು.

    ಇದನ್ನೂ ಓದಿ:  ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?

    ರಾಜ್ಯದಲ್ಲಿವೆ  193 ಸಾಂತ್ವನ ಕೇಂದ್ರ

    ರಾಜ್ಯದಲ್ಲಿರುವ 193 ಸಾಂತ್ವನ ಕೇಂದ್ರಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿವೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಫೋನ್ ಮೂಲಕ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈ ಹೆಲ್ಪ್​ಲೈನ್​ಗೆ 1,294ಕ್ಕೂ ಅಧಿಕ ಕರೆಗಳು ಬಂದಿದ್ದು, ಅದರಲ್ಲಿ 200ಕ್ಕೂ ಅಧಿಕ ಕರೆಗಳು ದೌರ್ಜನ್ಯಕ್ಕೆ ಸಂಬಂಧಿಸಿದವುಗಳಾಗಿವೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳೊಂದಿಗೆ ತಜ್ಞರು ಆಪ್ತ ಸಮಾಲೋಚನೆ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಸಾಂಸ್ಥಿಕ ಮರುವಸತಿ ಕಲ್ಪಿಸಲು ಸ್ವಧಾರ್ ಗೃಹ ಹೆಸರಲ್ಲಿ ತಾತ್ಕಾಲಿಕ ಶೆಲ್ಟರ್ ವ್ಯವಸ್ಥೆ ಮಾಡಲಾಗಿದೆ.

    ಇದಾದ ಬಳಿಕ ಪತ್ನಿ ಸುಂದರವಾಗಿ ಕಾಣಬಾರದು ಎಂಬ ಕಾರಣಕ್ಕೆ ಆಕೆಯ ಕೂದಲು ಕತ್ತರಿಸಿಕೊಳ್ಳಲು ಸೂಚಿಸಿದ್ದ. ಆಕೆ ಇದಕ್ಕೆ ಸಮ್ಮತಿಸದಿದ್ದಾಗ ಬಲವಂತವಾಗಿ ತಾನೇ ಕತ್ತರಿಯಿಂದ ಕೂದಲು ಕತ್ತರಿಸಿ ವಿಕೃತಿ ತೋರಿಸಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ, ನೀನು ಸುಂದರವಾಗಿ ಕಾಣಬಾರದು. ನೀನು ಮನೆಯಿಂದ ಹೊರ ಹೋದಾಗ ನಿನ್ನನ್ನು ಯಾರೂ ನೋಡಬಾರದು. ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ, ಪ್ರತಿದಿನ ಹಲ್ಲೆ ನಡೆಸುತ್ತಿದ್ದ. ಪತಿಯ ಹಿಂಸೆಯಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪತಿಯನ್ನು ಠಾಣೆಗೆ ಕರೆಸಿದ ಪೊಲೀಸರು ರಾಜಿಸಂಧಾನ ಮಾಡಿಸಿ ಕಳಿಸಿದ್ದರು. ಕಳೆದ ಜನವರಿಯಲ್ಲಿ ಮತ್ತೆ ಕೂದಲು ಕತ್ತರಿಸುವಂತೆ ಪತ್ನಿಗೆ ಹಿಂಸೆ ಕೊಟ್ಟು ಹಳೇ ಚಾಳಿ ಮುಂದುವರಿಸಿದ್ದ. ಕೂದಲು ಕತ್ತರಿಸದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಸಿದ್ದ. ಇದರಿಂದ ಆತಂಕಗೊಂಡ ಪತ್ನಿ ತನ್ನಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೂದಲನ್ನು ಕತ್ತರಿಸಿಕೊಂಡಿದ್ದಳು.

    ಇದನ್ನೂ ಓದಿ: ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ

    ಮನೆಯಿಂದ ಹೊರಹಾಕಿದ: ತಲೆಯನ್ನು ಪೂರ್ತಿ ಬೋಳಿಸಿ ಕೊಳ್ಳುವಂತೆ ಪತಿ ಬೆದರಿಸಿದ್ದ. ಅದಕ್ಕೊಪ್ಪದಿದ್ದಾಗ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿ ಅಮಾನವೀಯವಾಗಿ ವರ್ತಿಸಿದ್ದಾನೆ. ಇಬ್ಬರು ಮಕ್ಕಳ ಜತೆ ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದ ಸಂತ್ರಸ್ತೆ, ಪರಿಚಿತರ ಸಲಹೆ ಮೇರೆಗೆ ಮಹಿಳಾ ಸಹಾಯವಾಣಿಗೆ ಭೇಟಿ ನೀಡಿ ಅಳಲು ತೋಡಿಕೊಂಡಿದ್ದಳು. ಅಲ್ಲಿನ ಸಿಬ್ಬಂದಿ ಆಕೆಯನ್ನು ವಿದ್ಯಾರಣ್ಯಪುರದ ಸ್ವಾಧಾರ್ ಗೃಹಕ್ಕೆ ಕಳಿಸಿದ್ದಾರೆ. ಬಳಿಕ ಸ್ವಾಧಾರ್ ಗೃಹದ ಸಿಬ್ಬಂದಿ ವಿಚಾರಣೆಗೆ ಹಾಜರಾಗುವಂತೆ ಪತಿಗೆ ನೋಟಿಸ್ ನೀಡಿದ್ದರು. ತನ್ನ ತಂದೆಯನ್ನು ವಿಚಾರಣೆಗೆ ಕಳಿಸಿದ್ದ ಪತಿ, ಪ್ರಕರಣದಿಂದ ಪಾರಾಗಲು ಯತ್ನಿಸಿದ್ದ. ಆದರೆ, ಇದಕ್ಕೊಪ್ಪದ ಸಿಬ್ಬಂದಿ ಆತನೇ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ತನ್ನ ಪ್ರಭಾವ ಬಳಸಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ನಿ ವಿರುದ್ಧವೇ ದೂರು ನೀಡಿದ್ದಾನೆ.

    ಹಲ್ಲು ಮುರಿದ ಸಿಟ್ಟಿಗೆ ಸ್ನೇಹಿತನನ್ನೇ ಕೊಂದರು: 16ರಂದು ಆರ್.ಆರ್.ನಗರದಲ್ಲಿ ನಡೆದಿದ್ದ ಕೊಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts