More

    ಹಲ್ಲು ಮುರಿದ ಸಿಟ್ಟಿಗೆ ಸ್ನೇಹಿತನನ್ನೇ ಕೊಂದರು: 16ರಂದು ಆರ್.ಆರ್.ನಗರದಲ್ಲಿ ನಡೆದಿದ್ದ ಕೊಲೆ

    ಬೆಂಗಳೂರು: ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್​ನಲ್ಲಿ ಮೇ 16ರಂದು ವಿಜಯ್ಕುಮಾರ್ (30) ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ನಾಲ್ವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ರಂಜಿತ್ (30), ಬಂಗಾರಪ್ಪನಗರದ ಚೇತನ್ (30), ಚನ್ನಪಟ್ಟಣದ ರೋಹಿತ್ ಅಲಿಯಾಸ್ ಜಾಕಿ (24) ಹಾಗೂ ನವೀನ್ (29) ಬಂಧಿತರು.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಆರೋಪಿಗಳು ಹಾಗೂ ಕೊಲೆಯಾದ ವಿಜಯ್ ಕುಮಾರ್ ಸ್ನೇಹಿತರಾಗಿದ್ದರು. ಮೇ16ರಂದು ಬ್ಯಾಟರಾಯನಪುರದ ಬ್ಯಾಂಕ್ ಕಾಲನಿಯಲ್ಲಿ ನಿರ್ಗತಿಕರಿಗೆ ಊಟ ವಿತರಿಸಿದ್ದರು. ಅಂದೇ ರಾತ್ರಿ 10 ಗಂಟೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಚೇತನ್ ಮತ್ತು ವಿಜಯ್ ನಡುವೆ ಗಲಾಟೆಯಾಗಿತ್ತು. ಇಬ್ಬರು ಪರಸ್ಪರ ಅವಾಚ್ಯವಾಗಿ ನಿಂದಿಸಿಕೊಂಡಿದ್ದರು. ಗಲಾಟೆ ತಡೆಯಲು ಹೋಗಿದ್ದ ರಂಜಿತ್ ಬಿದ್ದು ಹಲ್ಲು ಮುರಿದುಕೊಂಡಿದ್ದ. ಬಳಿಕ ವಿಜಯ್ ಪಾರ್ಟಿಯಲ್ಲಿ ಅರ್ಧಕ್ಕೆ ಎದ್ದು ಹೋಗಿದ್ದ.

    ಇದನ್ನೂ ಓದಿ:  ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?

    ಅಪಹರಿಸಿ ಕೊಲೆ: ರಂಜಿತ್, ಚೇತನ್, ರೋಹಿತ್ ಮತ್ತು ನವೀನ್ ತಡರಾತ್ರಿವರೆಗೂ ಕಂಠಮಟ್ಟ ಮದ್ಯ ಸೇವಿಸಿದ್ದರು. ತನ್ನ ಹಲ್ಲು ಮುರಿದು ಹೋದ ಎಂಬ ಕಾರಣಕ್ಕೆ ವಿಜಯ್ ಮೇಲೆ ರಂಜಿತ್ ಆಕ್ರೋಶಗೊಂಡಿದ್ದ. ಈ ವೇಳೆ ವಿಜಯ್ನನ್ನು ಮುಗಿಸಲು ಎಲ್ಲರೂ ಸೇರಿ ಸಂಚು ರೂಪಿಸಿದ್ದರು. ಬಳಿಕ ಚೇತನ್ ತನ್ನ ಆಟೋದಲ್ಲಿ ಮೂವರು ಸ್ನೇಹಿತರ ಜತೆ ಸುಬ್ರಮಣ್ಯನಗರದಲ್ಲಿರುವ ವಿಜಯ್ ಮನೆಗೆ ತೆರಳಿದ್ದ. ಆಗ ಅಲ್ಲಿ, ಸ್ನೇಹಿತ ಮದ್ಯ ತರುತ್ತಾನೆಂದು ಮನೆ ಮುಂದೆ ಕಾಯುತ್ತಿದ್ದ ವಿಜಯ್ನನ್ನು ಅಪಹರಿಸಿದ ಆರೋಪಿಗಳು ಬಿಇಎಂಎಲ್ ಲೇಔಟ್​ನ ಅಮುಗಂ ದೇವಸ್ಥಾನದ ಬಳಿ ಥಳಿಸಿ ವಿಜಯ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.

    ಇದನ್ನೂ ಓದಿ: ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ

    ಸಿಸಿ ಕ್ಯಾಮರಾ ಸುಳಿವು: ಆರೋಪಿಗಳು ಮೇ 16ರ ತಡರಾತ್ರಿ ಆಟೋದಲ್ಲಿ ಬಂದು ಹೋಗಿರುವ ದೃಶ್ಯ ಬಿಇಎಂಎಲ್ ಲೇಔಟ್ ರಸ್ತೆಯಲ್ಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಆಟೋ ನಂಬರ್ ಪರಿಶೀಲಿಸಿದಾಗ ಚೇತನ್ ಸುಳಿವು ಸಿಕ್ಕಿತ್ತು. ಬಳಿಕ ಚೇತನ್​ನ ಫೋನ್ ನಂಬರ್ ಲೊಕೇಷನ್ ಆಧರಿಸಿ ಮತ್ತು ಕ್ಯಾಮರಾ ದೃಶ್ಯಗಳ ಜಾಡು ಹಿಡಿದು ತನಿಖೆ ಮುಂದುವರಿಸಿದಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    PHOTOS/VIDEO| ಬೆಂಗಳೂರು ವಿಮಾನ ನಿಲ್ದಾಣ ಪರಿಚಯಿಸಿದೆ ‘ಸ್ಪರ್ಶ ರಹಿತ ಪ್ರಯಾಣ’ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts