More

    ಪತಿಯನ್ನು ಕೊಂದು ಮೋರಿಗೆ ಎಸೆದಿದ್ದ ಪತ್ನಿ

    ಬೆಂಗಳೂರು: ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ದಾಸರಹಳ್ಳಿಯ ಪೇಂಟರ್ ಹರೀಶ್ (24) ಮೃತ ವ್ಯಕ್ತಿ. ಆತನ ಪತ್ನಿ ಕೃಪಾ (22), ಆಕೆಯ ಪ್ರಿಯಕರ ಅಭಿಷೇಕ್ ಮತ್ತು ಮುಲ್ಲಾ ಅಲಿಯಾಸ್ ರವಿ ಬಂಧಿತರು. ಹರೀಶ್ ಮತ್ತು ಕೃಪಾ ದಾಸರಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈ ನಡುವೆ ಕ್ಯಾಬ್ ಚಾಲಕ ಅಭಿಷೇಕ್ ಮತ್ತು ಕೃಪಾ ನಡುವೆ ಅನ್ಯೋನತೆ ಬೆಳೆದಿತ್ತು.

    ಇದನ್ನೂ ಓದಿ: ಜನಪ್ರತಿನಿಧಿಗಳು ನಿಯಮ ಉಲ್ಲಂಘಿಸಿದ್ರೂ ಕ್ರಮ ತೆಗೆದುಕೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    ತಮ್ಮಿಬ್ಬರ ಪ್ರೇಮಕ್ಕೆ ಹರೀಶ್ ಅಡ್ಡಿಯಾಗುತ್ತಾನೆಂದು ಹತ್ಯೆಗೆ ಸಂಚು ರೂಪಿಸಿದ್ದಳು. ಜು. 9ರ ರಾತ್ರಿ ಪತಿ ಮಲಗಿದ ಬಳಿಕ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಕರೆಸಿಕೊಂಡಿದ್ದಳು. ಬೆಳಗಿನ ಜಾವ 5 ಗಂಟೆಯಲ್ಲಿ ನಿದ್ರೆಯಲ್ಲಿದ್ದ ಹರೀಶ್​ನ ಕತ್ತು ಕೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಶವವನ್ನು ದಾಸರಹಳ್ಳಿಯ ರಾಜಕಾಲುವೆಗೆ ಎಸೆದಿದ್ದರು. 11ರಂದು ಅಮೃತ ಹಳ್ಳಿ ಠಾಣೆಗೆ ತೆರಳಿದ ಕೃಪಾ, ಕೆಲಸಕ್ಕೆ ಹೋಗಿದ್ದ ಪತಿ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಳು.

    ಆರೋಗ್ಯ ಸೇತು ಆ್ಯಪ್: ಕೇಂದ್ರದ ಸ್ಪಷ್ಟನೆ ಕೇಳಿದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts