More

    ಸುಶಾಂತ್​ ಸಿಂಗ್​ ಅವರ 50 ಸಿಮ್​ ಕಾರ್ಡ್​ಗಳು ಎಲ್ಲಿ? ಅವನ್ನು ಏಕೆ ಸೀಜ್​ ಮಾಡಲಾಗಿಲ್ಲ…?

    ನವದೆಹಲಿ: ಬಾಲಿವುಡ್​ನ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಅಲ್ಲದೆ, ಅವರು ಬದಲಿಸಿದ್ದರು ಎನ್ನಲಾದ 50 ಸಿಮ್​ ಕಾರ್ಡ್​ಗಳನ್ನು ಜಪ್ತಿ ಮಾಡಲಾಗಿಲ್ಲ. ಇವುಗಳು ಕಾಣೆಯಾಗಿರುವುದರಿಂದ ವಿದ್ಯುನ್ಮಾನ ಸಾಕ್ಷ್ಯಗಳು (ಎಲೆಕ್ಟ್ರಾನಿಕ್​ ಎವಿಡೆನ್ಸ್​) ನಾಶವಾಗಿರುವ ಸಾಧ್ಯತೆ ಇದೆ. ಆದ್ದರಿಂದ, ಸುಶಾಂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ದೆಹಲಿ ಮೂಲದ ವಕೀಲರೊಬ್ಬರು ಆಗ್ರಹಿಸಿದ್ದಾರೆ.

    ಎ ಪೀಪಿಲ್ಸ್​ ಮೂವ್​ಮೆಂಟ್​ ಎಂಬ ಸಂಘಟನೆಯ ಮುಖ್ಯಸ್ಥರಾಗಿರುವ ವಕೀಲ ಇಶಾ​ಕರಣ್​ ಸಿಂಗ್​ ಭಂಡಾರಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರು ನಂಬಿಕೆ ಉಳಿಯುವಂತೆ ಮಾಡಲು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಅಗತ್ಯವಾಗಿದೆ. ಸಿಬಿಐ ತನಿಖೆ ಮುಗಿಯುವವರೆಗೂ ಸುಶಾಂತ್​ ಅವರದ್ದು ನಿಗೂಢ ಸಾವು ಎಂದೇ ಪರಿಭಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

    34 ವರ್ಷದ ನಟ ಸುಶಾಂತ್​ ಸಿಂಗ್​ ರಜಪೂತ್​ ಜೂನ್​ನಲ್ಲಿ ತಮ್ಮ ಮುಂಬೈ ಫ್ಲ್ಯಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಕುರಿತು ಸಿಬಿಐ ತನಿಖೆ ಆಗಬೇಕೆಂದು ಸುಶಾಂತ್​ ಅವರ ಆಪ್ತ ಗೆಳತಿ ರಿಯಾ ಚಕ್ರವರ್ತಿ, ನಟ ಶೇಖರ್​ ಸುಮನ್​ ಮತ್ತು ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಕೂಡ ಆಗ್ರಹಿಸಿದ್ದರು. ಆದರೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶಮುಖ್​ ಮಾತ್ರ ಸಿಬಿಐ ತನಿಖೆಯ ಅಗತ್ಯವಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಸಲು ಮುಂಬೈ ಪೊಲೀಸರು ಸಮರ್ಥರಾಗಿದ್ದಾರೆ ಎಂದು ಹೇಳಿದ್ದರು.

    ಇದನ್ನೂ ಓದಿ: ಫೋನ್‌ ಇಲ್ಲದ ಜೀವನ ನನಗೆ ಬೇಡಮ್ಮಾ… ಸಾಯುವುದೇ ಮೇಲು…

    ಸುಶಾಂತ್​ ಅವರು ಸತ್ತ ಕೆಲವೇ ನಿಮಿಷಗಳಲ್ಲಿ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬರಲಾಯಿತು. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಇದನ್ನು ನಿಗೂಢ ಸಾವು ಎಂದು ಪರಿಭಾವಿಸಿ ತನಿಖೆ ನಡೆಸಲಾಗುತ್ತದೆ. ಆನಂತರದಲ್ಲಿ ಮಾತ್ರವೇ ಇದು ಆತ್ಮಹತ್ಯೆಯೋ ಅಥವಾ ಆತ್ಮಹತ್ಯೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರಾ? ಇಲ್ಲವೇ ಕೊಲೆಯೇ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಸುಶಾಂತ್​ ಪ್ರಕರಣದಲ್ಲಿ ಹಾಗೆ ಮಾಡಲಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ. ನನ್ನ ಮನಸ್ಸನ್ನು ಕೊರೆಯಲು ಆರಂಭಿಸಿದ ಮೊದಲ ಪ್ರಶ್ನೆ ಇದಾಗಿತ್ತು. ಇದಾದ ನಂತರದಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡಲಾರಂಭಿಸಿವೆ ಎಂದು ಇಶಾಕರಣ್​ ಸಿಂಗ್​ ಹೇಳಿದ್ದಾರೆ.

    ಸುಶಾಂತ್​ ಅವರು 50 ಸಿಮ್​ಕಾರ್ಡ್​ಗಳನ್ನು ಬದಲಿಸಿದ್ದರು. ಈ ಸಿಮ್​ಕಾರ್ಡ್​ಗಳನ್ನು ಪೊಲೀಸರು ಜಪ್ತಿ ಮಾಡಿಲ್ಲದ ಕಾರಣ ವಿದ್ಯುನ್ಮಾನ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆ ಇದೆ. ಇಷ್ಟೊಂದು ಸಿಮ್​ಕಾರ್ಡ್​ಗಳನ್ನು ಬದಲಿಸುವುದು ಅಸಮಾನ್ಯ ಸಂಗತಿ. ಈ ಸಿಮ್​ಕಾರ್ಡ್​ಗಳನ್ನು ತಕ್ಷಣವೇ ಜಪ್ತಿ ಮಾಡಬೇಕು ಎಂದು ಮುಂಬೈ ಪೊಲೀಸ್​ಗೆ ಲಿಖಿತವಾಗಿ ಮನವಿ ಮಾಡಿಕೊಂಡಿದ್ದೆ. ಬಹುಶಃ ಅವರು ಜಪ್ತಿ ಮಾಡಿರಬಹುದು. ಮಾಡಿಲ್ಲ ಎನ್ನುವುದಾದರೆ ಅನುಮಾನಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.

    ಕಾರು ಅಡ್ಡಗಟ್ಟಿ 45.5 ಲಕ್ಷ ರೂ. ದರೋಡೆ, ಕದ್ದ ಹಣವನ್ನು ಟೈರ್​ನಲ್ಲಿ ಬಚ್ಚಿಟ್ಟಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts