More

    ಫೋನ್‌ ಇಲ್ಲದ ಜೀವನ ನನಗೆ ಬೇಡಮ್ಮಾ… ಸಾಯುವುದೇ ಮೇಲು…

    ಹೈದರಾಬಾದ್: ಒಂಟಿತನದ ಭಾವದಿಂದಲೋ ಅಥವಾ ಪಾಲಕರ ಅಸಡ್ಡೆಯಿಂದಲೋ ಹೆಚ್ಚಿನ ಮಕ್ಕಳು ಇಂದು ಸ್ಮಾರ್ಟ್‌ಫೋನ್‌ ದಾಸರಾಗುತ್ತಿದ್ದಾರೆ. ಇದರ ಹುಚ್ಚುಹಿಡಿಸಿಕೊಂಡ ಮಕ್ಕಳು ಅದರಿಂದ ಹೊರಕ್ಕೆ ಬರಲಾರದೇ ಚಡಪಡಿಸುವುದು ಮಾಮೂಲಾಗಿಬಿಟ್ಟಿದೆ.

    ಮಕ್ಕಳು ಮಿರಿಮೀತಿ ಫೋನ್‌ ದಾಸರಾಗತೊಡಗಿದೆ ಆಗ ಎಚ್ಚೆತ್ತುಕೊಳ್ಳುವ ಪಾಲಕರು, ಮಕ್ಕಳಿಗೆ ಸರಿಯಾದ ತಿಳಿವಳಿಕೆ ಹೇಳದೇ ಅವರನ್ನು ಗದರಿಸಿ, ಬೆದರಿಸಿ ಫೋನ್‌ ಚಟವನ್ನು ಬಿಡಿಸುವ ಪ್ರಯತ್ನ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಏಕಾಏಕಿ ಮಕ್ಕಳ ಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ಈ ಘಟನೆ.

    ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಡೆದಿರುವ ಘಟನೆ ಇದಾಗಿದೆ. ಸುಂದರ್ ಲೀಲಾ ಎಂಬ 17 ವರ್ಷದ ಬಾಲಕಿ ಸ್ಮಾರ್ಟ್‌ಫೋನ್‌ ಗೀಳು ಹಚ್ಚಿಕೊಂಡಿದ್ದಳು. ಸದಾ ಅದರಲ್ಲಿಯೇ ವಿಡಿಯೋ ವೀಕ್ಷಿಸುವಲ್ಲಿಯೇ ತನ್ನ ಬಹುತೇಕ ಸಮಯ ಕಳೆಯುತ್ತಿದ್ದಳು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲಿ ಆಡುವವರು ಯಾರೂ ಇಲ್ಲದ ಕಾರಣ, ಬಾಲಕಿ ಇದರ ಚಟಕ್ಕೆ ಬಿದ್ದಿದ್ದಳು.

    ಇದನ್ನೂ ಓದಿ: ಆನ್‌ಲೈನ್‌ಕ್ಲಾಸ್‌ನಿಂದ ದಶಕದ ನಂತರ ಕುಟುಂಬ ಸೇರಿದ ಬಾಲಕನ ರೋಚಕ ಕಥನ…

    ಆದರೆ ಫೋನ್‌ ಹುಚ್ಚು ಅತಿರೇಕಕ್ಕೆ ಹೋದ ಸಮಯದಲ್ಲಿ ಅವಳ ತಾಯಿ ನಿನ್ನೆ (ಶನಿವಾರ) ಚೆನ್ನಾಗಿ ಬೈಯ್ದು ಮಗಳಿಂದ ಫೋನ್‌ ಕಿತ್ತುಕೊಂಡಿದ್ದಾರೆ. ಆನ್‌ಲೈನ್‌ ಕ್ಲಾಸ್‌ ಶುರುವಾಗಿದ್ದು, ಓದಿನ ಕಡೆ ಗಮನಕೊಡು ಎಂದು ಮಗಳಿಗೆ ಬುದ್ಧಿ ಹೇಳಿ ಮತ್ತೆ ಫೋನ್‌ ಕೊಡುವುದಿಲ್ಲ ಎಂದು ಅವಳಿಂದ ಕಸಿದುಕೊಂಡು ಮನೆಯಿಂದ ಹೊರಕ್ಕೆ ಹೋಗಿದ್ದಾರೆ.

    ಅಪ್ಪ-ಅಮ್ಮ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಟೈಂಪಾಸ್‌ ಮಾಡಲು ಬಾಲಕಿಗೆ ಮೊಬೈಲ್‌ ಫೋನ್‌ ಕೂಡ ಇರಲಿಲ್ಲ. ಇದರಿಂದ ಆಕೆ ನೊಂದುಕೊಂಡು ಮನೆಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಈ ಬಗ್ಗೆ ಚೀಟಿ ಬರೆದಿರುವ ಬಾಲಕಿ, ಫೋನ್‌ ಅನ್ನು ತಾಯಿ ಕಿತ್ತುಕೊಂಡು ಹೋಗಿದ್ದಾರೆ. ಅದು ಇಲ್ಲದೆ ನನಗೆ ಇರಲು ಸಾಧ್ಯವಿಲ್ಲ. ಆದ್ದರಿಂದ ಸಾಯುವುದೇ ಮೇಲು ಎಂದು ಬರೆದಿದ್ದಾಳೆ! ಮನೆಗೆ ಪಾಲಕರು ವಾಪಸ್‌ ಆದಾಗ ಮಗಳು ಅದಾಗಲೇ ಶವವಾಗಿದ್ದಳು. ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts