More

    ಭೌತಿಕ ಪರಿಸ್ಥಿತಿ ಆಧರಿತ ಹೂಡಿಕೆ ಯಾಕೆ ಆಸಕ್ತಿಕರ ಆಯ್ಕೆ?

    | ಸಿ.ಎಸ್​. ಪ್ರಸಾದ್, ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​

    ಬೆಂಗಳೂರು: ಕೋವಿಡ್​-19 ಸಂದರ್ಭದ 2020ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದವರು ತಮ್ಮ ಹೂಡಿಕೆಯ ಪ್ರಯಾಣದಲ್ಲಿ ಒಂದಲ್ಲ ಒಂದು ಸವಾಲನ್ನು ಎದುರಿಸುತ್ತಿದ್ದಾರೆ. ಅಲ್ಲದೆ ವಿಸ್ತಾರವಾದ ಷೇರು ಮಾರುಕಟ್ಟೆಯಲ್ಲಿನ ಶೇ. 10 ತಿದ್ದುಪಡಿಗೆ ರಷ್ಯಾ-ಯೂಕ್ರೇನ್​ ಸಂಘರ್ಷವೂ ಪ್ರಮುಖ ಪ್ರೇರಣೆಯಾಗಿದೆ. ಇದೇ ಸಂದರ್ಭದಲ್ಲಿನ ಕಚ್ಚಾತೈಲ ಹಾಗೂ ನಿಕೆಲ್​ನಂಥ ಲೋಹ ಮುಂತಾದ ದಿನಬಳಕೆಯ ಸಾಮಗ್ರಿಗಳ ಬೆಲೆ ಹೆಚ್ಚಳದಂಥ ಮುಂದುವರಿದ ಪರಿಸ್ಥಿತಿಯೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.
    ಕೆಲವು ತಿಂಗಳುಗಳ ಹಿಂದೆ ಸೆಮಿ ಕಂಡಕ್ಟರ್​ಗಳ ಕೊರತೆಯಿಂದಾಗಿ ಆಟೋಮೊಬೈಲ್​ ಉದ್ಯಮವು ಒತ್ತಡದಲ್ಲಿತ್ತು. ಅದಕ್ಕೂ ಮೊದಲು ಕೋವಿಡ್​-19 ಪರಿಸ್ಥಿತಿ ತೀವ್ರವಾಗಿದ್ದಾಗ ರಿಯಲ್ ಎಸ್ಟೇಟ್ ಕೂಡ ಕುಂಠಿತಗೊಂಡಿದ್ದು, ಅದು ಬಹಳಷ್ಟು ರಿಯಲ್​ ಎಸ್ಟೇಟ್​ ಕಂಪನಿಗಳ ಮೇಲೆಯೂ ಪರಿಣಾಮ ಬೀರಿದ್ದು ಆ ಕಂಪನಿಗಳ ಷೇರುಬೆಲೆಗಳಿಂದ ಕಂಡುಬಂದಿದೆ.

    ಬದಲಾಗುವ ಪರಿಸ್ಥಿತಿಗಳು ನಿಗದಿತ ಕ್ಷೇತ್ರಗಳ ಮೇಲೆ ಹೇಗೆ ತೀವ್ರ ಗುಣಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇವು ಕೆಲವು ಉದಾಹರಣೆಗಳಷ್ಟೇ. ಇವುಗಳಿಗೆ ಅನುಗುಣವಾಗಿ ಇಂಥ ಪರಿಸ್ಥಿತಿಗಳ ಪ್ರಯೋಜನ ಪಡೆಯುವುದು ಮುಖ್ಯವಾಗುತ್ತದೆ. ಇದಕ್ಕಾಗಿ ದೂರದೃಷ್ಟಿ ಮತ್ತು ಪರಿಣತರ ಸಲಹೆ ಅಗತ್ಯವಾಗುತ್ತದೆ, ಕೌಶಲಭರಿತ ಹೂಡಿಕೆ ನಿರ್ವಹಣೆ ಮಾಡುವವರ ಮೊರೆ ಹೋಗಬೇಕಾಗುತ್ತದೆ.

    ವಿಶೇಷ ಸಂದರ್ಭಗಳ ಸದ್ಬಳಕೆಗಾಗಿ ಹೂಡಿಕೆ ಆಯ್ಕೆಗಳು

    ಜಿಯೋ ಪೊಲಿಟಿಕಲ್​ ಅಥವಾ ಸೋಷಿಯೋ-ಎಕನಾಮಿಕಲ್​ ವಿದ್ಯಮಾನಗಳು, ಕಾರ್ಪೋರೇಟ್​ ರಿಸ್ಟ್ರಕ್ಷರಿಂಗ್, ಸರ್ಕಾರಿ ನೀತಿ-ನಿಯಮಗಳ ಬದಲಾವಣೆ, ನಿಗದಿತ ಕಂಪನಿ ಇಲ್ಲವೇ ಕ್ಷೇತ್ರ ಎದುರಿಸುವಂಥ ತಾತ್ಕಾಲಿಕ ವಿಶಿಷ್ಠ ಸವಾಲುಗಳು.. ಇವೆಲ್ಲವನ್ನೂ ವಿಶೇಷ ಪರಿಸ್ಥಿತಿಗಳು ಎಂದು ಕರೆಯಬಹುದು.

    ಫಂಡ್ ಮ್ಯಾನೇಜರ್​ಗಳು ಇಂಥ ಅವಕಾಶಗಳನ್ನು ಎಲ್ಲ ಆಯಾಮದಲ್ಲಿ ನೋಡಿ, ನಿಗದಿತ ಕಂಪನಿಯ ಶೇರುಗಳನ್ನು ನೈಜ ಬೆಲೆಗಿಂತಲೂ ಕಡಿಮೆ ಮೊತ್ತಕ್ಕೆ ಖರೀದಿಸುವ ಜಾಣ್ಮೆ ತೋರುತ್ತಾರೆ. ಈ ಮೇಲೆ ಹೇಳಲಾದ ವಿಶೇಷ ಪರಿಸ್ಥಿತಿಗಳಿಂದಾಗಿ ಇಂಥ ಲಾಭದ ಅವಕಾಶಗಳು ಸಿಕ್ಕಿರುತ್ತವೆ.

    ಹೂಡಿಕೆ ಹೇಗೆ?

    ವಿಶೇಷವಾಗಿ ಇಂಥ ಕೆಲವು ಫಂಡ್​ಗಳ ಖರೀದಿಗೂ ಮುನ್ನ ಹೂಡಿಕೆದಾರರು ಫಂಡ್ ಮ್ಯಾನೇಜರ್​ಗಳ ಟ್ರ್ಯಾಕ್​ ರೆಕಾರ್ಡ್​ ಗಮನಿಸಿಕೊಂಡಿರಬೇಕು. ಈ ಹಿಂದೆ ಅವರು ಗಳಿಸಿದ್ದ ಲಾಭ, ನಿರ್ವಹಿಸಿದ್ದ ರೀತಿ ಎಲ್ಲವನ್ನೂ ತಿಳಿದುಕೊಂಡಿರಬೇಕು. ಈ ಮೂಲಕ ಆ ಫಂಡ್ ಮ್ಯಾನೇಜರ್ ಇಂಥ ವಿಶೇಷ ಪರಿಸ್ಥಿತಿಗಳ ಅವಕಾಶವನ್ನು ಹೇಗೆ ನಿಭಾಯಿಸಿರುತ್ತಾರೆ ಎಂಬುದು ತಿಳಿಯುತ್ತದೆ. ಸದ್ಯಕ್ಕೆ ಲಭ್ಯ ಇರುವ ಅಂಥ ಫಂಡ್​ಗಳ ಪೈಕಿ ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್​ನ ಇಂಡಿಯನ್ ಅಪಾರ್ಚುನಿಟೀಸ್ ಫಂಡ್​ ಉತ್ತಮ ಆಯ್ಕೆ ಎನ್ನಬಹುದು.

    ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

    ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts